ಸೋದರಿ
ಸೋದರಿ

1 min

11.9K
ಜೀವನ ಪಯಣದ ದಾರಿ
ಸೋಲು, ಸವಕಳಿ, ಕಿರಿಕಿರಿ
ಜೊತೆಯಾಗಿ ಕ್ರಮಿಸಿದ ಪರಿ
ಸಮುದಾಯಕ್ಕೇ ನೀವು ಮಾದರಿ
ಕುಟುಂಬಕ್ಕೆ ಕೊಡುಗೆ ಭಾರಿ
ದಶಕಗಳು ಕಳೆದವು ಬರೋಬ್ಬರಿ
ಹೆಗಲಿಗೇರಲು ಜವಾಬ್ದಾರಿ
ಸೋದರರ ಸಮಸಮ ಸರಾಸರಿ
ಸಂಸಾರವೆಂಬ ಮಾಯಾನಗರಿ
ಅಲ್ಲಿ-ಇಲ್ಲಿ ಎಲ್ಲೆಡೆ ಸಲ್ಲುವಿರಿ
ಮಮತೆ ವಿಶ್ವಾಸವ ತೋರಿ
ಭರಪೂರ ಹ್ರದಯಗಳ ಗೆದ್ದಿರಿ
ಹೇಳುವೆನು ಜಗಕೆಲ್ಲ ಸಾರಿ
ಪಡೆದಿರಲು ನಿಮ್ಮಂಥ ಸೋದರಿ
ಬದುಕೇ ರಂಗೇರಿದ ಪಿಚಕಾರಿ
ಸವಿದಂತೆ ನಿತ್ಯ ಪಾಯಸ-ಪೂರಿ
ಪೊಡಮಡುವೆ, ಭಗವಂತನ ಕೋರಿ
ಅರಿವು-ಆರೋಗ್ಯ ಸುಮಗಳ ಬೀರಿ
ಸರಹದ್ದು, ಸಂಕೋಲೆಗಳ ಮೀರಿ
ಅನುದಿನವೂ ಮುಗಿಲೆತ್ತರಕೆ ಏರಿ