ಶ್ರೀ ರಕ್ಷೆ
ಶ್ರೀ ರಕ್ಷೆ

1 min

35
ಅಣ್ಣನ ಪ್ರೀತಿಯ ರಕ್ಷೆ
ತಂಗಿಯ ಬಾಳಿಗೆ ಶ್ರೀ ರಕ್ಷೆ|
ಅಣ್ಣ ತಂಗಿಯರ ಬಂಧ
ಪ್ರೇಮದೊಲವ ಅನುಬಂಧ||
ಅಣ್ಣನು ಮಮತೆಯ ಕಡಲನೆ ಹರಿಸಿ
ಕಾಳಜಿ ಜೊತೆಯಲಿ ಬೆರೆಸಿ|
ಅನುದಿನ ಕಾಯುವ ಚಂದದಲಿ
ಬೇಕು ಬೇಡಗಳ ತಿಳಿಯುತಲಿ||
ತಂಗಿಗೆ ಅನುಪಮ ಅನುಭೂತಿ
ಕೂಡಿ ಆಡಿ ಬೆಳೆದ ರೀತಿ|
ಭಾವ ಬಾಂಧವ್ಯದ ಬೆಸುಗೆ
ಪ್ರತಿದಿನ ನಲಿವು ಬದುಕಿಗೆ||
ಅಣ್ಣ ತಂಗಿಯರ ಭಾವಾನುಬಂಧವು
ಬಿಡಿಸಲಾಗದ ಅಪ್ರತಿಮ ಸಂಭ್ರಮವು|
ಜೀವ ಭಾವದ ಒಲವ ಹರಿವಿಗೆ
ಎಂದೆಂದು ಮುಡಿಪು ಸೋದರ ಸೋದರಿಗೆ||
ರಕ್ಷಾ ಬಂಧನ ಮುದವ ತರಿಸಿದೆ
ಅಣ್ಣ ತಂಗಿಯರ ಬಾಂಧವ್ಯ ಹೆಚ್ಚಿಸಿದೆ|
ಜನುಮ ಜನುಮಗಳ ಸಂಬಂಧ
ಚಿರಾಯುವಾಗಿರಲೆಂದು ಬೇಡುವುದೇ ರಕ್ಷಾ ಬಂಧ||