Rakshabandhan
Rakshabandhan
1 min
50
ಶ್ರಾವಣ ಮಾಸದ ಹುಣ್ಣಿಮೆಯಂದು,
ರಕ್ಷಾಬಂಧನದ ಪವಿತ್ರ ದಿನವಂದು.
ಅಣ್ಣಾ - ತಂಗಿಯರ ಈ ಬಂಧ,
ಜನುಮ - ಜನುಮಗಳ ಅನುಬಂಧ.
ಅಣ್ಣ - ತಂಗಿಯರ ಶ್ರೇಷ್ಠತೆ ಸಾರುವ ಹಬ್ಬ,
ಅದುವೇ ಪವಿತ್ರ ರಾಖೀ ಹಬ್ಬ.
ಸಹೋದರನ ಕೈಗೆ ಕಟ್ಟುವ ದಾರ,
ಅದು ಬರೀ ದಾರವಲ್ಲ ಜೀವನಾಧಾರ.
ಅದು ಸಹೋದರಿಯ ರಕ್ಷಣೆ ಯ ಪ್ರತೀಕ,
ಅವಳ ಜೀವನಾಧಾರದ ಪ್ರತೀಕ.
ಅಣ್ಣ ಅಂದ ಕೂಡಲೇ ಎಲ್ಲಾ ದೇವರಿರುವನು,
ನನ್ನ ಈ ಜನುಮಕೆ ಒಬ್ಬ ಅಣ್ಣ ಸಾಕೀವನು.
ತಂಗಿ ಅನ್ನೋದೆ ಅವಳಿಗೆ ಶ್ರೀ ರಕ್ಷೆಯು,
ಅವಳ ಬಾಳಿಗೆ ನೀನೇ ನಕ್ಷೆಯು.
ಅಣ್ಣನೇ ತಂಗಿಗೆ ದೇವರು,
ಅಣ್ಣನೇ ಅವಳ ಉಸಿರು.