ಪ್ರೀತಿಯ ರಾಯಭಾರಿಯೇ...
ಪ್ರೀತಿಯ ರಾಯಭಾರಿಯೇ...
1 min
28
ಓ ಹೂವೇ...
ನೀನೇಕೆ ಪ್ರೀತಿಗೆ ರಾಯಭಾರಿಯಾಗಿರುವೆ...
ನಿನ್ನ ಅಂದವ ನೋಡಿ ಮೈಮರೆಯುವರಿಲ್ಲ...
ನೀ ಪಸರಿಸುವ ಸುಗಂಧಕ್ಕೆ ಸರಿ ಸಾಟಿ ಯಾರಿಲ್ಲ...
ಏಯ್ ಹೂವೇ....
ನಿನ್ನ ನೋಡಿ ಅಸೂಯೆ ಆಗುತ್ತಿದೆ ನನಗೆ...
ಯಾವಾಗಲೂ ನನ್ನವಳ ಮುಡಿಯಲ್ಲಿರುವೆ...
ನನ್ನವಳ ಸ್ಪರ್ಶ ಸುಖವ ಅನುಭವಿಸುವೆ...
ನಿನ್ನಯ ಅಂದವ ಕಂಡು ನನ್ನವಳೇ ನಾಚಿ ನೀರಾಗುವಳು...
ನಿನ್ನನ್ನು ಮುದ್ದಿಸಿ, ತನ್ನ ಮುಡಿಗೇರಿಸಿಕೊಳ್ಳುವಳು...
ಓ ಹೂವೇ...
ಇಂದೇಕೋ ನಿನ್ನನ್ನೇ ನನ್ನವಳಿಗೆ ಉಡುಗೊರೆಯಾಗಿ ಕೊಡುವ ಮನಸಾಗಿದೆ...
ಇದಕ್ಕೆ ಸಮ್ಮತಿಸುವೆಯಾ...ನನ್ನವಳ ಮುಡಿಗೇರುವೆಯಾ...