STORYMIRROR

Girish S D

Others

1  

Girish S D

Others

ನನ್ನ ಮುದ್ದಿನ ಸ್ನೇಹಿತೆ........

ನನ್ನ ಮುದ್ದಿನ ಸ್ನೇಹಿತೆ........

1 min
168

ಸ್ನೇಹಕ್ಕಿಲ್ಲ ಯಾವುದೆ ಕೊನೆಘಳಿಗೆ

ಸ್ನೇಹಿತೆ ಅವಳು ನನ್ನೆದೆಯ ಪುಟ್ಟ ಮನೆಗೆ


ತೋರುವಳು ಪ್ರೀತಿಯ ತಿಳಿದು ತನ್ನವರಂತೆ

ಹೃದಯವದು ಅವಳದು ಪ್ರೀತಿ ತುಂಬಿದ ಸಂತೆಯೆಂತೆ


ಮಾತಿನಲ್ಲಿ ಮಗುವಿನಂತೆ ಮುಗ್ಧೆ ಅವಳು

ಸ್ನೇಹ ಪ್ರೀತಿಯಲಿ ತೋರುವಳು ಮರದಂತೆ ನೆರಳು


ನಗು ಅವಳದು ಜೇನಹನಿಯಂತೆ

ನಗೆಸುವಳು ಮನ ತುಂಬಿ ತುಳುಕುವಂತೆ


ಅವಳ ಅಂದವ ಹೊಗಳಲು ಸಾಲದು ದಿನಗಳು

ನಾಚುತ್ತವೆ ಅವಳ ಅಂದವ ಕಂಡು ದೃಷ್ಟಿಗೊಂಬೆಗಳು


ಮೊಗ ಅವಳದು ಹೊಳೆಯುವ ಧನ -ಕನಕದಂತೆ

ಧನ -ಕನಕದಂತೆ ಪ್ರಕಾಷಿತೆ ಈ ನನ್ನ ಮುದ್ದು ಸ್ನೇಹಿತೆ


ಮರಗುವಳು ಪರರಿಗೆ ನಿಸ್ವಾರ್ಥಿಯಂತೆ

ಹೊಂದಿರುವಳು ತಾಳ್ಮೆ ,ಸಹನೆ ಅಷ್ಟೇ ಬೆಟ್ಟದಂತೆ


ಹಾಡುವಳು ಇ೦ಪಾದ ಧ್ವನಿಯ ಕೋಗಿಲೆಯಂತೆ

ಅಷ್ಟೇ ಸುಂದರಿ ಅವಳು ಗರಿ ಬಿಚ್ಚಿದ ನವಿಲಿನಂತೆ ...... ..... 


Rate this content
Log in