ನಿಸರ್ಗದ ರಮಣೀಯ ನೋಟ
ನಿಸರ್ಗದ ರಮಣೀಯ ನೋಟ
1 min
2.7K
ಸಹಜವಾಗಿಯೇ ಸೃಷ್ಟಿ ನೆಲೆಸಿದೆ ಕಣ್ಣಿಗೆ ತಂಪು ನೀಡುವ ತಾಣಗಳು
ಕಿಲಕಿಲನೆ ಪಕ್ಷಿಗಳು ಜುಳುಜುಳನೆ ಜಲಪಾತವು ಕೇಳಲು ಇಂಪು ಈ ದನಿಗಳು,
ಕೇಳಲು ಇಂಪು ಈ ದನಿಗಳು
ಮೂಡಣದಲ್ಲಿ ಬರುವ ಆ ನೇಸರನು ಜೀವವ ತುಂಬಿ ಹೋಗುವನು
ಇರುಳಲ್ಲಿ ಬರುವ ಆ ಚಂದಿರನು ತಂಪನ್ನು ಸೂಸಿ ಹೋಗುವನು
ಬಾನಿನಲ್ಲಿರುವ ನಕ್ಷತ್ರಗಳಂತೆ ಇಲ್ಲಿ ಹೂಗಳು ಹರಡಿಕೊಂಡಿವೆ
ತಾರೆಗಳು ನೀಡುವ ಬೆಳಕಿನಂತೆ ಹೂಗಳು ಬೀರುವದು ಸುಗಂಧವ
ಅಚ್ಚ ಹಸಿರಿನಿಂದ ಕೂಡಿರುವ ತಾಣಗಳು ನೋಡಲು ಎಂಥಾ ರೋಮಾಂಚನ
ದೇವರು ರುಜು ಮಾಡಿರುವ ಹಾಗೆ ಹಾರುವ ಹಕ್ಕಿಗಳು ಎಂಥಾ ಸೊಗಸು
ಹರಿದಾಡುವ ನದಿಯ, ಪಕ್ಷಿಗಳ ಇಂಚರವ ಕೇಳಲು ಮಧುರ ಮಧುರ
ದುಂಬಿಗಳಿಗೆ, ಪತಂಗಗಳಿಗೆ ಇದುವೇ ಸಂಭ್ರಮ
ಇಂಥಾ ಸೌಂದರ್ಯದ ನಡುವೆಯೇ ಇರುವ ಜೀವಿಗಳಿಗೆ ಇದು ಬಲು ಸಂತಸ
ನಿಸರ್ಗದ ಈ ರಮಣೀಯ ನೋಟವು ಕಾಣಲು ಬಲು ಸುಂದರ ಸುಂದರ