Nancy Nelyady
Others
ನೇಸರನು ಪಡುವಣಕೆ ಹೊರಟಿರಲು
ಬಾನಿಗೆ ಕೆಂಪು ಬಣ್ಣ ಹಚ್ಚಿದಂತಿರಲು
ಮುಗಿಲು ಕಡಲು ಬೆರೆತು ಒಂದಾಗಲು
ಬೀಳುತಿದೆ ಕಡಲಿಗೆ ಕಲ್ಪವೃಕ್ಷದ ನೆರಳು
ಸಂಜೆಯ ಸಮಯವಿದು ರಸಮಯ
ಪ್ರೇಮಿಗಳಿಗೆ ಇದು ಬಲು ಸರಸಮಯ
ಸೃಷ್ಟಿಯ ಸೌಂದರ್ಯ ವರ್ಣಮಯ
ಸೋತೆ ನೋಡಿ ನಿಸರ್ಗದ ವೈಖರಿಯ
ಮುಸ್ಸಂಜೆ