STORYMIRROR

SRIDHARA G G

Others

4  

SRIDHARA G G

Others

ಮಸಣದ ಬೆಳಕು

ಮಸಣದ ಬೆಳಕು

1 min
62


ನೆರವಿಗೆ ಬಂದಂತೆ 

ನೆರವಾಗದ ನೆರೆ ಮಂದಿ

ಹೃದಯ ನಲುಗಿ ಹೋದಂತೆ 

ಇಲ್ಲಿಂದ ? ಎಲ್ಲಿಂದ ? ಬರುವವರು 

 ಈ ಬಗೆಯ ಮಂದಿ

ಕಾರ್ಗತ್ತಲ ಬಳಿಯಲ್ಲಿ 

ಒಂದು ಹೊಸ ಬೆಳಕನ್ನ ಮೂಡಿಸಬೇಕಂತೆ! 


ಹೃದಯದ ನಾಲಿಗೆಯೇ ಚಾಚಿ 

ಪ್ರೀತಿ ಸಾಗರವನ್ನೆ ಕುಡಿದು ಹಾಕಿದಂತೆ

ಕಾರ್ಗತ್ತಲ ಬಳಿಯಲ್ಲಿ 

ಒಂದು ಹೊಸಬೆಳಕನ್ನ ಮೂಡಿಸಬೇಕಂತೆ!


ಮನವ ಮರೆಮಾಡಿ ಸಮಯ ನಿಗದಿಗೆ 

ದೂರ ಹೋಗುತಿಹುದಾ? ಈ ನೆಲವು 

ಭೂಮಿ ಬಿರಿದಾಯಿತು ಪ್ರೀತಿಸಾಗರವಿಲ್ಲದೆ 

ಸುಯ್ಯೆಂದು ಪ್ರೀತಿಯ ಮಳೆ 

ಸುರಿಯಬೇಕಾಗಿದೆ ಈ ಜಗಕೆ 

ಕಾರ್ಗತ್ತಲ ಬಳಿಯಲ್ಲಿ 

ಒಂದು ಹೊಸ ಬೆಳಕನ್ನ ಮೂಡಿಸಿದಂತೆ! 


ಪುಸ್ತಕ -ಮಸ್ತಕದ ಒಳಲಾಟ 

ಪ್ರತಿ ಮಕ್ಕಳ ಬೇಗುದಿಯ ಪರದಾಟ 

ಭೂಮಿಯು ನಲುಗುತಿದೆ ವಿಶ್ವಮಾನವನಾಗಿ

ಪ್ರೀತಿಯ ಮಳೆ ಸುಯ್ಯೆಂದು ಸುರಿಯಬೇಕೆಂದು

ಕಾರ್ಗತ್ತಲ ಬಳಿಯಲ್ಲಿ 

ಒಂದು ಹೊಸ ಬೆಳಕನ್ನ ಮೂಡಿಸಿದಂತೆ! 


ಪ್ರತಿಮನದ ನೆರಳಲ್ಲಿ ಮೂಲಭೂತ 

ಸೌಕರ್ಯಗಳ ಕೊರತೆ

ಮನಸಿನ ಓಟದ ಜೊತೆ ಎಲ್ಲಾ ನೆನಪಿಸುವ 

ಮೊಬೈಲ್ ನಲ್ಲಿನ ಪೇಸ್ಬುಕ್ ಪುಟತೆರೆದಂತೆ 

ಕಾರ್ಗತ್ತಲ ಬಳಿಯಲ್ಲಿ 

ಒಂದು ಹೊಸ ಬೆಳಕನ್ನ ಮೂಡಿಸಿದಂತೆ! 


ಬರಿದು ಮಾಡುವ ಬಳಿಗೆ 

ಬಳಗವ ಬಂಧಿಸಿದಾಗ 

ಕಾರ್ಗತ್ತಲ ಬಳಿಯಲ್ಲಿ 

ಒಂದು ಹೊಸ ಬೆಳಕನ್ನ ಮೂಡಿಸಬೇಕಂತೆ!


ಪ್ರೇಮ ನಿವೇದನೆಯ ಪರಿಪಾಟದಲಿ 

ಬಲಿಯಾಗುವವರು ಯಾರಿಹರೆಂದು ?

ನಿಂದಿಸಿದೆ,ಆಚರಿಸಿದೆ 

ಮನವು ನೊಂದ ಕನಸುಗಳ ಮಾರುತಕೆ !

ಕಾರ್ಗತ್ತಲ ಬಳಿಯಲ್ಲಿ 

ಒಂದು ಹೊಸ ಬೆಳಕನ್ನ ಮೂಡಿಸಬೇಕಂತೆ!


ಮುಂದೆ ನಡೆದಾಗ ಹೆಜ್ಜೆಗುರುತುಗಳು 

ಕಾಣಸಿಗುವವೋ ? ಹಿಂದಿರಿಗುವಾಗ!

ಯಾರೊ ಆ ಹೆಜ್ಜೆಯ ಮೇಲೊಂದೆಜ್ಜೆಯನಿಟ್ಟು 

ಕಾಣಸಿಗದಂತೆ ಹಿಂದಿರುಗಿರುವವರಿರುವಾಗ!

ಕಾರ್ಗತ್ತಲ ಬಳಿಯಲ್ಲಿ 

ಒಂದು ಹೊಸ ಬೆಳಕನ್ನ ಮೂಡಿಸಬೇಕಂತೆ! 


ಭೂಮಿ ಬಿರಿದಂತೆ ಇನ್ನು ಮುಂದೆ ಪ್ರೀತಿಸಾಗರವಿಲ್ಲದೆ

ಸರ್ರನೆ ಸುಯ್ಯೆಂದು ಪ್ರೀತಿಯ ಮಳೆ ಸುರಿಸಬೇಕಾಗಿದೆ! ಈ ಜಗಕೆ 

ಮತ್ತೆ ನಾವುಗಳೆಲ್ಲ ಬರುವವರಿಹರೆಂದು 

ಕಾರ್ಗತ್ತಲ ಬಳಿಯಲ್ಲೂ 

ಒಂದು ಹೊಸ ಬೆಳಕ ಮೂಡಿಸಬೇಕಂತೆ 

ಈ ಮನದ ಮಸಣದಲಿ,

ಕರೊನಾ ನಡುವಿನ ಬದುಕಿನಲಿ!!!..





Rate this content
Log in

More kannada poem from SRIDHARA G G