ಕಾಯಬೇಕು
ಕಾಯಬೇಕು

1 min

2.8K
ಕಾಯಬೇಕು
ತುಸು ನಿದಿರೆಗಾಗಿ
ಕನಸಿನ ಪದರೆಗಾಗಿ
ಕಾಯಬೇಕು
ನಸುಕಿನ ಹರಿವಿಗಾಗಿ
ಬಿಸಿಲಿನ ಬರುವಿಗಾಗಿ
ಕಾಯಬೇಕು
ಮಂಜಿನ ತಂಪಿಗಾಗಿ
ಸಂಜೆಯ ಕೆಂಪಿಗಾಗಿ
ಕಾಯಬೇಕು
ಹೊಳೆವ ಚುಕ್ಕಿಗಾಗಿ
ಮೊಳೆವ ರೆಕ್ಕೆಗಾಗಿ
ಕಾಯಬೇಕು
ಪ್ರೀತಿಗಾಗಿ
ಸಂಗಾತಿಗಾಗಿ
ಕಾಯಬೇಕು
ಜೀವದ ಹಾಡಿಗಾಗಿ
ಕಾವ ಕೊಡುವ ಗೂಡಿಗಾಗಿ
ಕಾಯಬೇಕು
ಚೆಂದದೊಂದು ಕರೆಗಾಗಿ
ಆನಂದದ ನೊರೆಗಾಗಿ
ಕಾಯಬೇಕು
ಸುಮ್ಮನೆ ನಾಳೆಗಾಗಿ
ನೆಮ್ಮದಿಯ ಬಾಳಿಗಾಗಿ
ಕಾಯಬೇಕು
ಹೊಸಮಾಸಗಳು ಹಾಯಬೇಕು
ಘಾಸಿಯೆಲ್ಲವೂ ಮಾಯಬೇಕು
ಕಾಯಬೇಕು........