ಹರೆಯದ ಕನಸು
ಹರೆಯದ ಕನಸು

1 min

264
ತಂಪು ಗಾಳಿ ಬೀಸುತಿದೆ
ಮೈ ಝುಮ್ ಎನ್ನುತಿದೆ
ಮನಸು ಹುರುಪಿನಿಂದಿದೆ
ಏಳು ಎದ್ದೇಳು ಎನ್ನುತ್ತಿದೆ
ಕನಸ ಬುತ್ತಿ ಹೊತ್ತಿರುವೆ
ನಾದ ಮೀಟಿ ಹಾಡಿರುವೆ
ಗೆಳೆಯರ ಸಂಗ ಮಾಡಿರುವೆ
ಜೀವನದ ದೋಣಿ ಹತ್ತಿರುವೆ
ಗಿಡ ಮರ ಬಳ್ಳಿ ಮಾತನಾಡಿವೆ
ಹೂಗಳು ನಗುವ ಸೂಸಿ ನಲಿದಾಡಿವೆ
ಹದಿನಾಲ್ಕರ ಹುಡುಗಿಗಿನ್ನೇನು ಬೇಕಿದೆ
ಜೀವನವು ಹಲವಾರು ರಂಗುಗಳಿಂದ ತುಂಬಿದೆ
ಹಕ್ಕಿಯಂತೆ ಹಾರುವಾಸೆ ನನ್ನಲಿ ತುಂಬಿದೆ
ಬಾನಲ್ಲಿ ಹಾರಿ ನಲಿಯ ಬೇಕೆಂಬ ಆಸೆ ಮೂಡಿದೆ