ಗುಲಾಬಿ
ಗುಲಾಬಿ
1 min
236
ಗುಲಾಬಿಯನ್ನು ಕಂಡರೆ ದಿಗಿಲು
ಎಲ್ಲಿ ಸುಗಂಧ ಬಂಧಗಳು
ಅಗಲುತ್ತವೋಯೆಂದು
ಪುಟ್ಟ ಪಾದಗಳನ್ನು ಕಂಡರೆ ಚಿಂತೆ
ಬೆಳೆದು ಜನಾರಣ್ಯದಲ್ಲಿ ಸಿಲುಕಿಕೊಳ್ಳುತ್ತವೋಯೆಂದು
ಮರವನ್ನು ಕಂಡರೆ ದಿಗಿಲು
ಎಲ್ಲಿ ಶಿಶಿರವಾಗಿ ದೂರವಾಗುತ್ತದೋಯೆಂದು
ಜೀವನವನ್ನು ದಿಟ್ಟಿಸಿದಾಗ ಆಶ್ಚರ್ಯ!
ಕ್ಷಣಿಕವಾದರೂ ಇನ್ನೂ
ಮೋಹವೇಕೆ ಬೆಳೆಯುತ್ತಿದೆಯೆಂದು!