Girijadevi Ambli
Others
ಸರಸರನೇ ಮೇಲಕ್ಕೇರಿ ಇಳಿಯುತ್ತ,
ಗರಗರನೇ ಗಿರಕಿ ಹೊಡೆಯುತ್ತ,
ಆಕಾಶದ ಉದ್ದಗಲ ಅಳೆಯುತ್ತ,
ನಡೆಸಿದ್ದೆ ನನ್ನ ಹಾರಾಟ
ನಾನೊಂದು ಸ್ವತಂತ್ರ ಹಕ್ಕಿಯೆoದು
ತಿಳಿದು, ಸರ್ರನೇ ದಾರವೊಂದು
ಎಳೆದಾಗ ನೆನಪಾಯಿತು,
ನಾ ಹಕ್ಕಿಯಲ್ಲ ಗಾಳಿಪಟ...
ಗಾಳಿಪಟ