STORYMIRROR

LIKHITHA Ram

Others

2  

LIKHITHA Ram

Others

ಗಾಲಿಯ ಜೀವನ

ಗಾಲಿಯ ಜೀವನ

1 min
2.8K

ಓಡುತ್ತಿರುವ ಜಗತ್ತು ,

ಕಳೆಯುತ್ತಿರುವ ಈ ಹೊತ್ತು,

ನಾ ನೆಡೆಸಬೇಕು ಯಂತ್ರದ ಜೀವನ !


ದಿನ ಬೆಳಗಾದರೆ ಸಾವಿರಾರು ಒತ್ತಡ ,

ಕಾಲುಗಳಲ್ಲಿ ಗಾಲಿಗಳು ಸಂಗಡ,

ನೋಯುತ್ತಿದೆ ನನ್ನೀ ಮನ !


ದಿನ ಪೂರ ಬಿಡುವಿಲ್ಲದೆ ದುಡಿದು ,

ಬರುತ ಭಾರದ ಹೆಜ್ಜೆದಿ ನೆಡೆದು ,

ತನುವಲ್ಲೇನೋ ಭಯದಿ ಕಂಪನ !


ಯಾರಿಗಾಗಿ ಈ ದುಡಿತ,

ಯಾಕಾಗಿ ಈ ಕುಸಿತ,

ನನಗೂ ಬೇಕು ನಗುವಿನ ಸ್ಪಂದನ !


ನನಗೂ ಪ್ರಕೃತಿಯೊಡನೆ ಬೆರೆಯುವಾಸೆ,

ಪತಂಗವಾಗಿ ಜಿಗಿಯುವಾಸೆ,

ನಲಿಯುವಾಸೆ ನನಗೆ ಒಂದು ದಿನ !


ಸಮಯವನ್ನು ನಿಲ್ಲಿಸಿ,

ಆಕಾಶ ಭೂಮಿಯ ತಂಪಾಗಿಸಿ,

ನೋವುಗಳ ಮರೆಯುವಾಸೆ ಬರೆಯುತ ಒಂದು ಕವನ !



Rate this content
Log in

More kannada poem from LIKHITHA Ram