ಎಲ್ಲವೂ ನೀನೇ ಮಾಧವ
ಎಲ್ಲವೂ ನೀನೇ ಮಾಧವ

1 min

41
ತನುವಲೂ ನೀನೆ, ಮನದಲೂ ನೀನೆ
ನನ್ನ ಪ್ರತಿಉಸಿರಲು ಕೂಡಾ ನೀನೆ
ಮಿಡಿತವೂ ನೀನೆ ಎದೆಬಡಿತವೂ ನೀನೇ
ನನ್ನ ಮನದ ಪ್ರತಿ ಭಾವವೂ ನೀನೇ ಮಾಧವ......
ರಾಗವೂ ನೀನೇ, ತಾಳವೂ ನೀನೇ
ನನ್ನ ಬಾಳಿನ ಪಲ್ಲವಿಯೂ ನೀನೇ
ರೂಪವೂ ನೀನೇ, ಸ್ವಭಾವವೂ ನೀನೇ
ನನ್ನ ಗುಣವಾಗುಣಗಳು ಕೂಡಾ ನೀನೇ ಮಾಧವ......
ಶಬ್ದವೂ ನೀನೇ, ಸ್ಪರ್ಶವೂ ನೀನೇ
ಉಸಿರ ಬೆರೆಯುವ ಗಂಧವೂ ನೀನೇ
ಪೇಯವೂ ನೀನೇ, ಖಾದ್ಯವೂ ನೀನೇ
ನನ್ನ ಕಣ್ಣ ಪ್ರತಿಬಿಂಬವೂ ನೀನೇ ಮಾಧವ.........
ಹಗಲೂ ನೀನೇ, ನಿಶಿಯೂ ನೀನೇ
ಬಾಳಿನ ಆಕಾಶದ ತಾರೆಯೂ ನೀನೇ
ಗ್ರಹವೂ ನೀನೇ, ಗ್ರಹಣವೂ ನೀನೇ
ನನ್ನ ಗ್ರಹಚಾರವೂ ಕೂಡಾ ನೀನೇ ಮಾಧವ.........
ವ್ಯೋಮವೂ ನೀನೇ, ವಾಯುವೂ ನೀನೇ
ನನ್ನ ಬಾಳ ಬೆಳಗುವ ಜ್ಯೋತಿಯೂ ನೀನೇ
ನೀರಲೂ ನೀನೇ, ಮಣ್ಣಲೂ ನೀನೇ
ಎಲ್ಲೆಲ್ಲೂ ನನ್ನಲ್ಲೂ ಎಲ್ಲವೂ ನೀನೇ ಮಾಧವ.........