Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Sushma Bijoor

Children Stories Comedy Children

2  

Sushma Bijoor

Children Stories Comedy Children

ದೂರದ ಬೆಟ್ಟ (ಮಕ್ಕಳ ಪದ್ಯ)

ದೂರದ ಬೆಟ್ಟ (ಮಕ್ಕಳ ಪದ್ಯ)

1 min
186


ದೂರದ ಬೆಟ್ಟದ ಮೇಲಿತ್ತೊಂದು ಶಾಲೆ,

ಊರಿನ ಪುಟ್ಟ ಮಕ್ಕಳು ಆಡಲು ಕಲಿಯಲು ಹೋಗುತ್ತಿದ್ದರಲ್ಲೇ.

ಶಾಲೆಗೆ ಅವರೆಲ್ಲ ನೆಡೆದೆ ಹೋಗುವರು, 

ಮರ-ಗಿಡಗಳ, ನದಿ-ತೊರೆಗಳ ಸೌಂದರ್ಯ ಆಸ್ವಾದಿಸುತ್ತಾ ಸಾಗುವರು.

ದಿನವೂ ಶಾಲೆಗೆ ತೆರಳಲೆಂದು, ಗೆಳೆಯರೆಲ್ಲ ಸೇರುತ್ತಿದ್ದರು ಒಂದೇ ಜಾಗದಲ್ಲಿ,

ನೆಡೆಯುತ್ತಿದ್ದರು ಜೊತೆಯಾಗಿ ಆದರೇಕೋ ನಿಧಾನ ಗತಿಯಲ್ಲಿ.


ಒಂದು ದಿನ ನಿತ್ಯದ ಹಾಗೆ ನಡೆಯುತ್ತಿರಲು ಜೊತೆಯಾಗಿ,

ಅಚಾನಕವಾಗಿ ಅವರ ಎದುರಿಗೆ ಬಂದಿತೊಂದು ಧೈತ್ಯ ಕರಡಿ!

ಕಂದು ಬಣ್ಣದ ಆ ಕರಡಿ ಆಗಿತ್ತು ಭಯಾನಕ...

ನೋಡಿ ಅದನು, ಚೆಲ್ಲಾಪಿಲ್ಲಿಯಾದರು ಒಬೊಬ್ಬರೂ ಒಂದೊಂದು ದಿಕ್ಕಿನತ್ತ!

ಆದರೆ ಆ ಕರಡಿ ಕೊಂಚವೂ ಗಮನಿಸಲಿಲ್ಲ ಯಾರನ್ನೂ, 

ದೊಡ್ಡದಾಗಿ ಆಕಳಿಸುತ ಮುಂದೆ ಸಾಗಿತದು, ಹೊಸಕುತ ಪೊದೆಗಳನ್ನು. 


ಅಡಗಿದಲ್ಲಿಂದ ಬಂದರು ಮಕ್ಕಳು ಒಬೊಬ್ಬರೆ ಹೊರಗೀಗ,

ಸ್ವಲ್ಪ ಚೇತರಿಸಿ ಕೊಳ್ಳುತ, ಸ್ವಲ್ಪ ಕಷ್ಟದಲ್ಲೇ ನಗುತ...

ಮತ್ತೆ ಅವರು ಅವರ ದೂರದ ಬೆಟ್ಟದ ಶಾಲೆಯತ್ತ ಹಿಡಿದರು ಹಾದಿ...

ಆದರೆ ಈ ಸರಿ, ಹೆಜ್ಜೆಕಿತ್ತರು ಬೇಗ ಬೇಗ, ಹಾ! ಅತಿ ವೇಗದಲ್ಲಿ!


Rate this content
Log in