ಅವನು...
ಅವನು...
1 min
355
ಹುಣ್ಣಿಮೆ ಬೆಳದಿಂಗಳ ಸವಿಯುತ್ತ ಕುಳಿತಿದ್ದ ಹುಡುಗಿಗೆ ಒಂದು ಬಾರಿ ಪ್ರಿಯತಮ ಕೇಳಿದ್ದು ನೆನಪಾಗುತ್ತದೆ.
"ನಾನು ಅಂದ್ರೆ ಏನು ನಿನಗೆ?" ಅವನ ಪ್ರಶ್ನೆ.
ಅವನೆದುರು ಉತ್ತರಿಸದೆ ಬಂದಿದ್ದರೂ ಈಗ ನೆನಪಾಗಿತ್ತು....
"ಅವನೆಂದರೆ, ನಕ್ಷತ್ರಗಳ ಮಧ್ಯೆ ಕಂಗೊಳಿಸುವ ಪೂರ್ಣ ಚಂದಿರನಂತೆ..
ಅವನೆಂದರೆ ಮೆಚ್ಚಿನ ಕಾದಂಬರಿಯಲ್ಲಿ ಬರುವ ಇಷ್ಟದ ಸಾಲಿನಂತೆ..
ಅವನೆಂದರೆ ಮೆಚ್ಚಿ ಮುಡಿದ ಮಲ್ಲಿಗೆಯ ಘಮದಂತೆ..!
ಅವನೆಂದರೆ ವರ್ಷದ ಮೊದಲ ಮಳೆಯಂತೆ...
ಒಟ್ಟಿನಲ್ಲಿ ಅವನೆಂದರೆ ಕಣ್ಣೆದುರು ನಿಂತಿರುವ ಕಿನ್ನರನಂತೆ, ಕನಸಿನಲ್ಲಿ ಬಂದು ಕಾಡುವ ರಾಜಕುಮಾರನಂತೆ..!!!"
ಮನದಲ್ಲೆ ಹೇಳಿಕೊಂಡು ಮುಗುಳ್ನಕ್ಕವಳಿಗೆ ಇನಿಯನ ನೆನಪಾಗಿ ಕೆನ್ನೆ ಕೆಂಪಾಗಿದ್ದವು..!
