ಮನದಾಳದ ಮಾತು ಕವನದ ಸಾಲಲ್ಲಿ ಅಡಗಿಹುದು ನಿನ್ನ ಪ್ರೀತಿಯ ಅಕ್ಷರಗಳು ಮೂಡಿರಲು ಸುಂದರ ಕಾವ್ಯ ಕಾವ್ಯನಾಮ ಏನೆಂದು ಇಡಲಿ ಎಂದು ಮನ ಕೇಳಿಹುದು ನೋಡು ಜಯಶ್ರೀ ಕಿಶೋರ್ ಬೆಂಗಳೂರು.
ಮನದಾಳದ ಮಾತು ಅಸಹಾಯಕತೆ ಮತ್ತು ದೌರ್ಬಲ್ಯ ಎರಡು ಮಾನವನ ಬದುಕಿನ ಹಾದಿಯಲ್ಲಿ ತಪ್ಪು ಹೆಜ್ಜೆ ಇಡುವಂತೆ ಮಾಡುತ್ತದೆ. ಇವೆರಡನ್ನೂ ಮೆಟ್ಟಿ ನಿಂತು ನೋಡು ಒಮ್ಮೆ ಬಾಳ ದಾರಿಯಲ್ಲಿ ನಿನ್ನ ತಪ್ಪು ನೀನೇ ಹುಡುಕಲಾರೆ. ಜಯಶ್ರೀ ಕಿಶೋರ್ ಬೆಂಗಳೂರು.
ವಾಸ್ತವ ಒಂಟಿ ಎಂದು ಮನ ಹೇಳುತ್ತಿತ್ತು ಬಾರಿ ಬಾರಿ ಯೋಚಿಸಿ ಯೋಚಿಸಿ ನೋಡಿದಾಗ ಹೇಳಿದ್ದು ಬುದ್ಧಿ ಒಂಟಿಯಾಗಿಯೇ ನಡೆಯುವಾಗ ಬಾಳ ಪಯಣ ಸುಗಮದಲಿ ನಂಟಿನ ಹಂಗ್ಯಾಕೆ ನಿಂಗೆ ಹೇಳು ಎಂದಿತು ಹರುಷದಲಿ ಜಯಶ್ರೀ ಕಿಶೋರ್ ಬೆಂಗಳೂರು.
🌹 ಮನದಾಳದ ಮಾತು🌹 ಹುಟ್ಟು ಸಾವು ಗೊತ್ತಿಲ್ಲದ ವಿಷಯ ನೋವು ನಲಿವು ಗೊತ್ತಿರುವ ವಿಚಾರ ಆದರೂ ಇರುವ ನಾಲ್ಕು ದಿನಗಳ ಜೀವನದ ಸಂತೆಯಲ್ಲಿ ನಾನು ನಾನು ಎನ್ನಲೇಕೆ ಮಾನವ ಜಯಶ್ರೀ ಕಿಶೋರ್ ಬೆಂಗಳೂರು
ಮನದಾಳದ ಮಾತು ಸಮಯವೇ ಸರಿಯಾದ ಗುರುವು ಕಾಣಾ ಈ ಬಾಳ ಪಯಣದಲಿ ಕಾರಣ ಮನುಷ್ಯ ಕಲಿಯದ ಬಾಳ ಪಾಠವನು ಸಮಯ ಕಲಿಸುವುದು ಕೇಳು..... ಜಯಶ್ರೀ ಕಿಶೋರ್ ಬೆಂಗಳೂರು.
ಮನದಾಳದ ಮಾತು ಸಮಯವೇ ಸರಿಯಾದ ಗುರುವು ಕಾಣಾ ಈ ಬಾಳ ಪಯಣದಲಿ ಕಾರಣ ಮನುಷ್ಯ ಕಲಿಯದ ಬಾಳ ಪಾಠವನು ಸಮಯ ಕಲಿಸುವುದು ಕೇಳು..... ಜಯಶ್ರೀ ಕಿಶೋರ್ ಬೆಂಗಳೂರು.
ಮನದಾಳದ ಮಾತು ನಿನ್ನ ಜೀವನದ ಪುಸ್ತಕದಲ್ಲಿ ನೆಮ್ಮದಿಯ ಪುಟಗಳನ್ನು ನೀನೇ ಬರೆಯಬೇಕು ಕಾರಣ ನಿನ್ನ ಜೀವನ ನಿನ್ನದೇ ಹೊಣೆ. ಜಯಶ್ರೀ ಕಿಶೋರ್ ಬೆಂಗಳೂರು.
ಕವನ : ಗುರುವೇ ಸಕಲವೂ ಈ ಜಗದೊಳಗೆ ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರುವೇ ಸಕಲವೂ ಈ ಜಗದೊಳಗೆ ಕಾಣು ಹೆತ್ತಮ್ಮನಲ್ಲವೇನಯ್ಯ ಕಂದಮ್ಮನಿಗೆ ಮೊದಲ ಗುರು ತಿದ್ದಿ ತೀಡಿ ಜಗದವರಿವ ತಿಳಿಸುವನು ಪಿತನು ಅಕ್ಷರದ ಸಕ್ಕರೆಯ ಅರಿವು ನೀಡುವನು ಗುರುವು ಜೀವನದ ಪ್ರತಿಯೊಂದು ಮಜಲಲ್ಲಿ ಬಂದು ಹೋಗುವ ಎಲ್ಲರೂ ಗುರುವಿನಂತೆ ಅರಿ ನೀನು ಕಲಿಯ ಬೇಕು ಎಲ್ಲರಲ್ಲಿ ಜೀವನದ ಪಾಠವನು ಅವರಿಗೊಂದು ನಮನ ತಿಳಿಸು ಗುರು ಪೂರ್ಣಿಮೆಯಂದು ಜಯಶ್ರೀ ಕಿಶೋರ್ ಬೆಂಗಳೂರು.