“
ಕವನ : ಗುರುವೇ ಸಕಲವೂ ಈ ಜಗದೊಳಗೆ
ಗುರು ಬ್ರಹ್ಮ ಗುರು ವಿಷ್ಣು
ಗುರು ದೇವೋ ಮಹೇಶ್ವರ
ಗುರುವೇ ಸಕಲವೂ ಈ
ಜಗದೊಳಗೆ ಕಾಣು
ಹೆತ್ತಮ್ಮನಲ್ಲವೇನಯ್ಯ
ಕಂದಮ್ಮನಿಗೆ ಮೊದಲ ಗುರು
ತಿದ್ದಿ ತೀಡಿ ಜಗದವರಿವ
ತಿಳಿಸುವನು ಪಿತನು
ಅಕ್ಷರದ ಸಕ್ಕರೆಯ
ಅರಿವು ನೀಡುವನು
ಗುರುವು
ಜೀವನದ ಪ್ರತಿಯೊಂದು
ಮಜಲಲ್ಲಿ ಬಂದು ಹೋಗುವ
ಎಲ್ಲರೂ ಗುರುವಿನಂತೆ
ಅರಿ ನೀನು
ಕಲಿಯ ಬೇಕು ಎಲ್ಲರಲ್ಲಿ
ಜೀವನದ ಪಾಠವನು
ಅವರಿಗೊಂದು ನಮನ
ತಿಳಿಸು ಗುರು ಪೂರ್ಣಿಮೆಯಂದು
ಜಯಶ್ರೀ ಕಿಶೋರ್
ಬೆಂಗಳೂರು.
”