Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

#Celebrate Holi with Words

SEE WINNERS

Share with friends

ಹೋಳಿ ಹಬ್ಬವು ದ್ವೇಷವನ್ನು ಕೈಬಿಡುವ, ಪ್ರೀತಿಯನ್ನಪ್ಪಿ ಕ್ಷಮೆಯನ್ನು ಕೋರುವ/ನೀಡುವ ಆಚರಣೆಯಾಗಿದೆ.   ಬಣ್ಣಗಳಿಂದ ಕೂಡಿದ ನೀರನ್ನು ಎರಚುವ ಮೂಲಕ ಇತರರಿಗೆ ಸಂತೋಷವನ್ನು ಹಂಚುವ ಸಮಯವೇ, ಈ ಹೋಳಿ. ಇದು ವಸಂತ ಋತುವಿನ ಆಗಮನವನ್ನು  ಮತ್ತು ದುಷ್ಟಶಕ್ತಿಯ ವಿರುದ್ಧ ಶಿಷ್ಟತನದ ವಿಜಯವನ್ನು ಆಚರಿಸುವ ಸಂದರ್ಭವಾಗಿದೆ.


"ಪದಗಳೊಂದಿಗೆ ಹೋಳಿಯನ್ನು ಆಚರಿಸಿ (ಸೆಲೆಬ್ರೇಟ್ ಹೋಲಿ ವಿತ್ ವರ್ಡ್ಸ್)" ಎಂಬ ಸ್ಪರ್ಧೆಯ ಮೂಲಕ ರೋಮಾಂಚಕ ಮತ್ತು ವರ್ಣರಂಜಿತ ಹೋಳಿ ಹಬ್ಬವನ್ನು ಪದಗಳೊಂದಿಗೆ ಆಚರಿಸಲು ಸ್ಟೋರಿಮಿರರ್‌ನೊಂದಿಗೆ ಸೇರಿಕೊಳ್ಳಿ. ಈ ಬರವಣಿಗೆ ಸ್ಪರ್ಧೆಯ ಮೂಲಕ, ಹೋಳಿ ಆಚರಣೆಯ ಸಾರ ಮತ್ತು ಸುಂದರತೆಯನ್ನು ನಿಮ್ಮ ಬರಹದ ಮೂಲಕ ಸೆರೆಹಿಡಿಯಲು ನಾವು ಆಶಿಸುತ್ತೇವೆ. ನಿಮ್ಮ ಬರಹಗಳನ್ನು ಓದಲು ಮತ್ತು ಹೋಳಿಯ ಸಂಭ್ರಮವನ್ನು ಒಟ್ಟಿಗೆ ಆಚರಿಸಲು ನಾವು ಎದುರು ನೋಡುತ್ತಿದ್ದೇವೆ.


ಹೋಳಿ ಬರವಣಿಗೆ ಸ್ಪರ್ಧೆಗಾಗಿ ನೀವು ಕಥೆ ಅಥವಾ ಕವಿತೆಯನ್ನು ಬರೆಯಬಹುದು. ಆದಾಗ್ಯೂ ಕೆಲವು ಥೀಮ್‌ಗಳನ್ನು ಇಲ್ಲಿ ನೀಡಲಾಗಿದ್ದು, ನಿಮ್ಮ ಬರಹಗಳಿಗೆ ಇವುಗಳನ್ನು ಆರಿಸಿಕೊಳ್ಳಬಹುದು:

  • ಹೋಳಿಯ ಬಣ್ಣಗಳು: ಹಬ್ಬದ ಕೇಂದ್ರ ಬಿಂದುವಾಗಿರುವ ಬಣ್ಣ ಹಾಗೂ ನೀರು ಇವೆರಡರ ಸೌಂದರ್ಯ ಮತ್ತು ಮಹತ್ವವನ್ನು ನಿಮ್ಮ ಪದಗಳಲ್ಲಿ ಸೆರೆಹಿಡಿಯಿರಿ.
  • ಪ್ರೀತಿ ಮತ್ತು ಕ್ಷಮೆ: ಸಂಬಂಧಗಳನ್ನು ಸರಿಪಡಿಸುವ, ಪರಿವರ್ತಿಸುವ ಶಕ್ತಿಯುತ ಪ್ರೀತಿ ಮತ್ತು ಕ್ಷಮೆಯ ಥೀಮ್‌ಗಳ ಮೇಲೆ ನಿಮ್ಮ ಬರಹಗಳನ್ನು ಬರೆಯಿರಿ. 
  • ಪುರಾಣ ಮತ್ತು ಇತಿಹಾಸ: ಹೋಳಿಗೆ ಸಂಬಂಧಿಸಿದ ಕಥೆಗಳು/ಕವಿತೆಗಳನ್ನು ಹಂಚಿಕೊಳ್ಳಿ ಅಥವಾ ಹೋಳಿ ಹಬ್ಬದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ನಿಮ್ಮ ಪದಗಳ ಮೂಲಕ ಜಗತ್ತಿಗೆ ತಿಳಿಸಿ.
  • ವೈಯಕ್ತಿಕ ಅನುಭವ/ನೆನಪುಗಳು: ಹೋಳಿಯ ಕುರಿತು ಇರುವ ನಿಮ್ಮ ಸ್ವಂತ ಅನುಭವಗಳು ಮತ್ತು ನೆನಪುಗಳನ್ನು ಹಂಚಿಕೊಳ್ಳಿ ಅಥವಾ ನಿಮಗೆ ಮತ್ತು ನಿಮ್ಮ ಸಮುದಾಯಕ್ಕೆ ಹೋಳಿ ಹಬ್ಬವೆಂದರೆ ಏನು ಎಂಬುದನ್ನು ಬರಹಗಳ ರೂಪದಲ್ಲಿ ತಿಳಿಸಿ.



ನಿಯಮಗಳು:

  • ನೀವು ಹೋಳಿ ಥೀಮ್‌ಗಳ ಮೇಲೆ ಬರೆಯಬೇಕು. ಅಂದರೆ ನಿಮ್ಮ ಬರಹಗಳು ಹೋಳಿಗೆ ಸಂಬಂಧಿಸಿದ್ದಾಗಿರಬೇಕು 
  • ಸ್ಪರ್ಧಿಗಳು ತಮ್ಮ ಸ್ವಂತ ಬರಹವನ್ನು ಸಲ್ಲಿಸಬೇಕು. ನಕಲಿಸುವುದು ಅಪರಾಧ. ಸಲ್ಲಿಸಬೇಕಾದ ಬರಹಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ. ನಿಮ್ಮಿಂದ ಅಧಿಕ ಬರಹಗಳನ್ನು ವೇದಿಕೆಯು ನಿರೀಕ್ಷಿಸುತ್ತದೆ.
  • ನಿಮ್ಮ ಬರಹಗಳಿಗೆ ಪದಗಳ ಮಿತಿ ಇಲ್ಲ.
  • ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ಭಾಗವಹಿಸುವಿಕೆ   ಶುಲ್ಕವಿಲ್ಲ.



ವಿಭಾಗಗಳು: ಕಥೆ | ಕವಿತೆ


ಭಾಷೆಗಳು:


ಈ ಕೆಳಗಿನ ಯಾವುದಾದರೂ ಒಂದು ಅಥವಾ ಹೆಚ್ಚಿನ ಭಾಷೆಗಳಲ್ಲಿ ನಿಮ್ಮ ಬರಹಗಳನ್ನು ಸಲ್ಲಿಸಬಹುದು - ಕನ್ನಡ, ಇಂಗ್ಲೀಷ್, ಹಿಂದಿ, ಗುಜರಾತಿ, ಮರಾಠಿ, ತಮಿಳು, ತೆಲುಗು, ಮಲಯಾಳಂ, ಒಡಿಯಾ ಮತ್ತು ಬಾಂಗ್ಲಾ


ಬಹುಮಾನಗಳು:


ಟಾಪ್ 10 ಬರಹಗಳಿಗೆ ₹149 ಮೌಲ್ಯದ ಸ್ಟೋರಿಮಿರರ್ ಡಿಸ್ಕೌಂಟ್ ವೋಚರ್ ಅನ್ನು ನೀಡಲಾಗುವುದು.  ಮತ್ತು ವಿಜೇತ ಪ್ರಮಾಣಪತ್ರವನ್ನು ಸಹ ನೀಡಲಾಗುವುದು.

ಎಲ್ಲಾ ಸ್ಪರ್ಧಿಗಳು ಭಾಗವಹಿಸುವಿಕೆ ಪ್ರಮಾಣಪತ್ರವನ್ನು ಸ್ವೀಕರಿಸುತ್ತಾರೆ.


ಸಲ್ಲಿಕೆಯ ಹಂತ - ಮಾರ್ಚ್ 07, 2023 ರಿಂದ ಏಪ್ರಿಲ್ 05, 2023


ಫಲಿತಾಂಶದ ಘೋಷಣೆ: ಮೇ 05, 2023


ಸಂಪರ್ಕಿಸಿ:


ಇಮೇಲ್: neha@storymirror.com

ದೂರವಾಣಿ ಸಂಖ್ಯೆ: +91 9372458287 / 022-49243888

ವಾಟ್ಸಾಪ್: +91 84528 04735