Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

#52 Week Writing Challenge (Edition 6)

PARTICIPATE

Share with friends

2023 ಬಂದೇ ಬಿಟ್ಟಿತು. ಜೀವನದ ಗುರಿಗಳು ಮತ್ತು ನಿರ್ಧಾರಗಳನ್ನು ಕೈಗೊಳ್ಳಲು ಹೊಸ ವರ್ಷದ ಆರಂಭವು ಅತ್ಯಂತ ಸೂಕ್ತ ಸಮಯವಾಗಿದೆ. ಬರವಣಿಗೆಯಲ್ಲಿ ವಾರಕ್ಕೊಮ್ಮೆ ಬದ್ಧರಾಗಿರಲು ಮತ್ತು ಅದೇ ರೀತಿ ಬದ್ಧರಾಗಿರುವ ಸಹ ಲೇಖಕರ ಸಮುದಾಯದ ಬೆಂಬಲವನ್ನು ನೀಡಲು ಸ್ಟೋರಿಮಿರರ್ ನಿಮಗೆ ಸವಾಲೊಂದನ್ನು ನೀಡಲು ಬಯಸುತ್ತದೆ.

52 ವಾರಗಳ ಬರವಣಿಗೆ ಚಾಲೆಂಜ್ - 2023 ( 6ನೇ ಆವೃತ್ತಿ) ನ ಆರನೇ ಸೀಸನ್‌ನ ಭಾಗವಾಗಲು ಸ್ಟೋರಿಮಿರರ್ ನಿಮ್ಮೆಲ್ಲರನ್ನು ತುಂಬು ಹೃದಯದಿಂದ ಆಹ್ವಾನಿಸುತ್ತದೆ. ನೀವು ಈ ಸ್ಪರ್ಧೆಯಲ್ಲಿ ಸ್ಪರ್ಧಿಸುವುದರಿಂದ ನಿಮ್ಮ ಬರವಣಿಗೆಯ ಕೌಶಲ್ಯವನ್ನು ಹೊಸ ಆಯಾಮದತ್ತ ಕರೆದೊಯ್ಯುತ್ತದೆ. ಮತ್ತು ನಿಮ್ಮ ಸೃಜನಶೀಲತೆಗೆ ಮತ್ತಷ್ಟು ಉತ್ತೇಜನ ನೀಡುತ್ತದೆ.

ಈ ಸೀಸನ್‌ನಲ್ಲಿ ಹೊಸತೇನಿದೆ?

ಪ್ರತಿ ವಾರವನ್ನು ನಾವು ಒಂದು ವಿಷಯಕ್ಕಾಗಿ ಮೀಸಲಿಡುತ್ತೇವೆ. ನೀವು ಮಾಡಬೇಕಾಗಿರುವುದು ತುಂಬಾ ಸರಳವಾಗಿದೆ. ಈ ಕೆಳಗಿನ ವಿಷಯದ ಮೇಲೆ ನೈಜ/ಕಾಲ್ಪನಿಕ ಕವಿತೆ ಅಥವಾ ಕಥೆಯನ್ನು ಬರೆಯುವುದು.

ನೀವು ಸಣ್ಣ ಕಥೆಗಳು, ಕವಿತೆಗಳನ್ನು ಬರೆಯಬಹುದು ಅಥವಾ ಜರ್ನಲ್ ಅನ್ನು ಇರಿಸಿಕೊಳ್ಳಲು ಬಯಸಬಹುದು - ಇವುಗಳು ನಿಮ್ಮ ಕಲ್ಪನೆಯನ್ನು ವಿಸ್ತರಿಸುತ್ತವೆ ಮತ್ತು ವಿಷಯಗಳ ಕುರಿತು ಬರೆಯಲು ನಿಮಗೆ ಕೆಲವು ಉಪಾಯಗಳನ್ನು ನೀಡುತ್ತವೆ!

ಆದಾಗ್ಯೂ, ಈ ವಿಷಯಗಳೇ ಕಡ್ಡಾಯವೇನಲ್ಲ. ನಿಮ್ಮ ಸ್ವಂತ ವಿಷಯಗಳ ಮೇಲೆಯೂ ಬರೆಯಲು ನೀವು ಸ್ವತಂತ್ರರು.

ವಾರ 1 - ಹೊಸ ಆರಂಭಗಳು, ಹೊಸ ನೀವು

ವಾರ 2 - ಕುಟುಂಬ

ವಾರ 3 - ಸ್ವಾತಂತ್ರ್ಯ

ವಾರ 4 - ನೆಚ್ಚಿನ 

ವಾರ 5 - ಹೋಲಿ 


ವಾರ 6 - ಪ್ರೀತಿ


ವಾರ 7 - ಅಂತರಿಕ್ಷ 


ವಾರ 8 - ಅಪಘಾತ


ವಾರ 9 - ಬಡತನ


ವಾರ 10 - ನಾಯಕ


ವಾರ 11 - ಮಕ್ಕಳು


ವಾರ 12 - ಬೇಸಿಗೆ


ವಾರ 13 - ಭಯಾನಕ


ವಾರ 14 - ರೈತ


ವಾರ 15 - ಮದುವೆ


ವಾರ 16 - ಪ್ರವಾಸ


ವಾರ 17 - ಮಹಿಳೆಯರು


ವಾರ 18 - ಅದೃಷ್ಟ


ವಾರ 19 - ಹಣ


ವಾರ 20 - ಮಾನ್ಸೂನ್


ವಾರ 21 - ಸ್ನೇಹಿತ


ವಾರ 22 - ಅವಳಿ 


ವಾರ 23 - ಕಿರಿಯರಿದ್ದಾಗ ನೀವು 


ವಾರ 24 - ತಾಯಿ


ವಾರ 25 - ಅಜ್ಜ-ಅಜ್ಜಿಯರು


ವಾರ 26 - ಒಳ್ಳೆತನ vs ದುಷ್ಟತನ 


ವಾರ 27 - ಶಿಕ್ಷಕ


ವಾರ 28 - ರಹಸ್ಯ 


ವಾರ 29 - ಸಾಹಸ


ವಾರ 30 - ಕನಸು


ವಾರ 31 - ಮನೆ


ವಾರ 32 - ಅಪರಿಚಿತ


ವಾರ 33 - ಜನ್ಮದಿನ


ವಾರ 34 - ಯಾವುದಾದರೊಂದು ಚಲನಚಿತ್ರದ ಕಥೆಯನ್ನು ಮರುಸೃಷ್ಟಿಸಿ


ವಾರ 35 - ಪುರುಷರು


ವಾರ 36 - ಅಜೇಯ (ಸೋಲಿಲ್ಲದ)


ವಾರ 37 - ಸಮಯದ ಪ್ರಯಾಣ


ವಾರ 38 - ಹೊಸ ಆರಂಭಗಳು


ವಾರ 39 - ನಿಮ್ಮ ನಗರದಲ್ಲಿಯ ಜೀವನ


ವಾರ 40 - ಅಮರ


ವಾರ 41 - ಶಾಲಾ ಜೀವನ


ವಾರ 42 - ದ್ವೇಷ


ವಾರ 43 - ಮೃಗ (ಪಶು)


ವಾರ 44 - ಮ್ಯಾಜಿಕ್


ವಾರ 45 - ಹಂಬಲ 


ವಾರ 46 - ವೈಜ್ಞಾನಿಕ ಕಾದಂಬರಿ


ವಾರ 47 - ದೀಪಾವಳಿ


ವಾರ 48 - ಶ್ರೀಮಂತ


ವಾರ 49 - ಸಾಮ್ರಾಜ್ಯ


ವಾರ 50 - ಚಳಿಗಾಲ


ವಾರ 51 - ಕರಾಳ ಸೀಕ್ರೆಟ್


ವಾರ 52 - ಯುದ್ಧ



ನಿಯಮಗಳು:


1. ಸ್ಪರ್ಧಿಗಳು ಸತತ 52 ವಾರಗಳವರೆಗೆ 52 ಕಥೆಗಳು ಅಥವಾ 52 ಕವಿತೆಗಳನ್ನು ಸಲ್ಲಿಸಬೇಕು. ಅಂದರೆ, ಪ್ರತಿ ವಾರ ಆಯಾ ವಿಭಾಗದ ಅಡಿಯಲ್ಲಿ (ಕಥೆ/ಕವನ) 1 ವಿಷಯವನ್ನು/ಬರಹವನ್ನು ಸಲ್ಲಿಸಬೇಕು.


2. ಉದಾಹರಣೆಗೆ, ನೀವು 2023 ರ ಜನೇವರಿ 3 ನೇ ವಾರದಿಂದ ನಿಮ್ಮ ಬರಹಗಳ ಸಲ್ಲಿಕೆಯನ್ನು ಪ್ರಾರಂಭಿಸುತ್ತಿದ್ದರೆ, ನೀವು 2024 ರ ಜನೇವರಿ 3 ನೇ ವಾರದವರೆಗೆ ನಿಮ್ಮ ಬರಹಗಳನ್ನು ಸಲ್ಲಿಸಬಹುದು.


3. ಸ್ಪರ್ಧಿಗಳು ವಿವಿಧ ವಿಭಾಗಗಳಿಗೆ (ಕಥೆ/ಕವನ) ನೋಂದಾಯಿಸಿಕೊಳ್ಳಬಹುದು. ಆದಾಗ್ಯೂ, 52 ಬರಹಗಳ ಪ್ರತಿ ಸೆಟ್, ಕಥೆ ಅಥವಾ ಕವಿತೆಯ ಒಂದೇ ವಿಭಾಗದ ಅಡಿಯಲ್ಲಿರಬೇಕು. ಅಂದರೆ ನೀವು ಕಥೆ ಬರೆಯಲು ಆಯ್ದುಕೊಂಡಲ್ಲಿ 52 ಬರಹಗಳು ಕಥೆಯ ವಿಭಾಗದಲ್ಲಿ ಇರತಕ್ಕದ್ದು. ಕವಿತೆಯೆಂದರೆ 52 ಬರಹಗಳು ಕವಿತೆ ವಿಭಾಗದಲ್ಲಿ ಇರತಕ್ಕದ್ದು. ಅಲ್ಲದೇ ನೀವು ಎರಡೂ ವಿಭಾಗಕ್ಕೂ ತಲಾ 52 ಬರಹಗಳನ್ನು ಬರೆಯಲು ಬಯಸಿದ್ದಲ್ಲಿ, ವೇದಿಕೆ ನಿಮ್ಮನ್ನು ತುಂಬು ಹೃದಯದಿಂದ ಆಹ್ವಾನಿಸುತ್ತದೆ.


4. ಸ್ಪರ್ಧಿಗಳು ಈ ಸ್ಪರ್ಧೆಯ ಅಡಿಯಲ್ಲಿ ಒಮ್ಮೆ ಸಲ್ಲಿಸಲು ಪ್ರಾರಂಭಿಸಿದರೆ, ನಂತರ ಯಾವುದೇ ಕಾರಣಕ್ಕೂ ಬರಹಗಳ ಸಲ್ಲಿಕೆಯಲ್ಲಿ ಯಾವುದೇ ವಿರಾಮ ನೀಡಬಾರದು. ವಿರಾಮ ಉಂಟಾದಲ್ಲಿ ಆ ಸ್ಪರ್ಧಿಗಳನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗುತ್ತದೆ.


5. ವಿಜೇತರನ್ನು ಅವರ ಬರಹಗಳ ಸಲ್ಲಿಕೆಗಳು ಮತ್ತು ಸಂಪಾದಕೀಯ ಸ್ಕೋರ್‌ಗಳ ಮೇಲೆ ಬರಹಗಳನ್ನು ಓದಿದ ಸಂಖ್ಯೆ ಮತ್ತು ಲೈಕ್ಸ್‌ಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಇದು ಎಲ್ಲಾ 52 ಸಲ್ಲಿಕೆಗಳಿಗೆ ಸಂಚಿತ (cumulative) ಸ್ಕೋರ್ ಆಗಿರುತ್ತದೆ.


6. ಸ್ಟೋರಿಮಿರರ್‌ನ ನಿರ್ಧಾರವೇ ಅಂತಿಮವಾಗಿರುತ್ತದೆ ಮತ್ತು ಎಲ್ಲಾ ಸ್ಪರ್ಧಿಗಳು ವೇದಿಕೆಯ ನಿರ್ಧಾರಕ್ಕೆ ಬದ್ಧವಾಗಿರುತ್ತಾರೆ.


7. ಸ್ಪರ್ಧೆಗೆ ಭಾಗವಹಿಸಲು ಯಾವುದೇ ಭಾಗವಹಿಸುವಿಕೆಯ ಶುಲ್ಕವಿಲ್ಲ.



ಬಹುಮಾನಗಳು:


1. ಪ್ರತಿ ಭಾಷೆಯ 2 ವಿಜೇತರು (1 ಕಥೆ + 1 ಕವಿತೆ) ತಮ್ಮ ಪುಸ್ತಕವನ್ನು ಸ್ಟೋರಿಮಿರರ್ ಮೂಲಕ ಭೌತಿಕ ರೂಪದಲ್ಲಿ ಪ್ರಕಟಿಸಲು ಅವಕಾಶವನ್ನು ಪಡೆಯುತ್ತಾರೆ.


2.13 ವಾರಗಳನ್ನು ಪೂರ್ಣಗೊಳಿಸಿದ ನಂತರ: ಡಿಜಿಟಲ್ ಪ್ರಮಾಣಪತ್ರವನ್ನು ನೀಡಲಾಗುವುದು (ಸಾಹಿತ್ಯ ಪ್ರಯಾಣದ 1/4 ನೇ ಭಾಗ)


3. 26 ವಾರಗಳನ್ನು ಪೂರ್ಣಗೊಳಿಸಿದ ನಂತರ ಅಂದರೆ ಸಾಹಿತ್ಯ ಪ್ರಯಾಣದ 1/2 ಭಾಗ: ನೀವು ₹100 ಮೌಲ್ಯದ ಸ್ಟೋರಿಮಿರರ್ ಶಾಪ್ ವೋಚರ್ ಅನ್ನು ಪಡೆಯುತ್ತೀರಿ. ಮತ್ತು ಸ್ಟೋರಿಮಿರರ್ ಪಬ್ಲಿಷಿಂಗ್ ಪ್ಯಾಕೇಜ್‌ಗಳ ಮೇಲೆ 10% ರಿಯಾಯಿತಿಯನ್ನು ಪಡೆಯುತ್ತೀರಿ.


4. 39 ವಾರಗಳನ್ನು ಪೂರ್ಣಗೊಳಿಸಿದ ನಂತರ ಅಂದರೆ ಸಾಹಿತ್ಯ ಪ್ರಯಾಣದ ¾ ಭಾಗ: ನೀವು ₹200 ಮೌಲ್ಯದ ಸ್ಟೋರಿಮಿರರ್ ಶಾಪ್ ವೋಚರ್ ಅನ್ನು ಪಡೆಯುತ್ತೀರಿ. ಮತ್ತು ಸ್ಟೋರಿಮಿರರ್ ಪಬ್ಲಿಷಿಂಗ್ ಪ್ಯಾಕೇಜ್‌ಗಳ ಮೇಲೆ 15% ರಿಯಾಯಿತಿಯನ್ನು ಪಡೆಯುತ್ತೀರಿ.


5. 52 ವಾರಗಳನ್ನು ಪೂರ್ಣಗೊಳಿಸಿದ ನಂತರ: ಸ್ಟೋರಿಮಿರರ್ ನಿಮ್ಮ ಇ-ಪುಸ್ತಕ + ಪ್ರಮಾಣಪತ್ರವನ್ನು ಬಿಡುಗಡೆ ಮಾಡುತ್ತದೆ


6. ಎಲ್ಲಾ ಭಾಷೆಗಳಲ್ಲಿ ಅತೀ ಹೆಚ್ಚು ಬರಹಗಳನ್ನು ಸಲ್ಲಿಸುವ ಅಗ್ರ 10 ಸ್ಪರ್ಧಿಗಳು, ಸ್ಟೋರಿಮಿರರ್‌ನಿಂದ ಉಚಿತ ಪುಸ್ತಕ ಮತ್ತು ಭೌತಿಕ ಪ್ರಮಾಣಪತ್ರವನ್ನು ಪಡೆಯುತ್ತಾರೆ.



ಭಾಷೆಗಳು: ಕನ್ನಡ, ಇಂಗ್ಲೀಷ್, ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಮಲಯಾಳಂ, ಒಡಿಯಾ ಮತ್ತು ಬಂಗಾಳಿ.


ಗಮನಿಸಿ: ನೀವು ಬಹು ಭಾಷೆಗಳಿಗೆ ಸಲ್ಲಿಸುತ್ತಿದ್ದರೆ, ನೀವು ಪ್ರತಿ ಭಾಷೆಯಲ್ಲಿ 52 ವಿಷಯಗಳನ್ನು ಪ್ರತ್ಯೇಕವಾಗಿ ಸಲ್ಲಿಸಬೇಕಾಗುತ್ತದೆ.



ಬರಹಗಳ ವಿಭಾಗ - ಕಥೆ | ಕವಿತೆ



ಸಲ್ಲಿಕೆ ಅವಧಿ - ಜನವರಿ 1, 2023 ರಿಂದ ಏಪ್ರಿಲ್ 30, 2024 ರವರೆಗೆ 


ನೋಂದಣಿ - ಏಪ್ರಿಲ್ 30, 2023 ರವರೆಗೆ 


ಫಲಿತಾಂಶ - ಜುಲೈ 2024


ಸಂಪರ್ಕಿಸಿ:


ಇಮೇಲ್neha@storymirror.com


ದೂರವಾಣಿ ಸಂಖ್ಯೆ: +91 9372458287