Bhakti Javeer

Others

1  

Bhakti Javeer

Others

ಕಾಗೆಯ ಕನ್ನಡಕ

ಕಾಗೆಯ ಕನ್ನಡಕ

1 min
3.0K


ಕೇಳು ಮಗು ಕೇಳು ಮಗು

ಕೇಳಿ ಕೇಳಿ ನೀನು ನಗು

ಕಾಗೆಯ ಕಥೆಯು ನೀ ಕೇಳು

ಹೊಟ್ಟೆ ಹಿಡಿದು ನೀನು ನಗು||ಪ ||


ಕಾಗೆಯು ಕನ್ನಡಕ ಹಾಕಿತ್ತು

ಕಣ್ಣಿಗೆ ಕತ್ತಲು ಕವಿದಿತ್ತು

ಕಾಡಲಿ ಕೂಗಿ ಹೇಳಿತ್ತು

ಕಾಡಿಗೆ ದೊರೆ ಎಂದಿತ್ತು  ||1 ||


ಕಾಗೆಯು ಕೆರೆಯಡೆ ಹಾರಿತ್ತು

ಕುರಿಯು ನೀರು ಕುಡಿತಿತ್ತು

ಕೂಗಿ ಕೂಗಿ ಹೇಳಿತ್ತು

ಕಾಡಿಗೆ ದೊರೆ ಎಂದಿತ್ತು  ||2||


ಕಾಗೆಯು ಕೋಳಿಗೆ ಹೇಳಿತ್ತು

ಕೋಳಿ ಹೆದರಿ ಓಡಿತ್ತು

ಕಾ..ಕಾ..ಎಂದು ಕೂಗಿತ್ತು

ಕಾಡಿಗೆ ದೊರೆ ಎಂದಿತ್ತು  ||3||


ಕಾಗೆಯು ನರಿಗೆ ಹೇಳಿತ್ತು

ನೋಡು ನೋಡು ಎಂದಿತ್ತು

ನರಿಯು ಓಡಿ ಹೋಗಿತ್ತು

ಸಿಂಹಕೆ ಸುದ್ದಿ ತಿಳಿಸಿತ್ತು  ||4||


ಸಿಂಹವು ಗರ್ಜನೆ ಮಾಡಿತ್ತು

ಕಾಗೆಗೆ ಗೋಳು ಹಿಡದಿತ್ತು

ಕೆರೆಯ ಕಡೆಗೆ ಹಾರಿತ್ತು

ಕನ್ನಡಕ ಕೆರೆಯಲಿ ಬಿದ್ದಿತ್ತು||5||



Rate this content
Log in