“
ನಂದಾದೀಪ
ಹೆಣ್ಣು ಒಂದು ಮನೆಯಲ್ಲಿ ಹುಟ್ಟಿದರೆ
ಮತ್ತೊಂದು ಮನೆಯ ಬೆಳಗುವವಳು
ಹೆತ್ತವರ ಸಂಕಟಕ್ಕೆ ಮರುಗುವಳು
ಮೆಟ್ಟಿದ ಮನೆಗೆ ನೆರವಾಗುವವಳು
ಯಾರೇನೇ ಅಂದರೂ ಸಹಿಸಿಕೊಂಡು
ಎಲ್ಲರ ಬೇಕು ಬೇಡಗಳ ಪೂರೈಸುವವಳು
ಹೊತ್ತು - ಹೆತ್ತವಳು ಕಂದನಿಗೊಂದು
ಹೊಸ ಬದುಕು ಕಟ್ಟಿಕೊಡುವವಳು
ಬಯಕೆಗಳ ಮನಸೊಳಗೆ ಬಚ್ಚಿಟ್ಟು
ಕುಟುಂಬದ ಸುಖವನ್ನು ಹಾರೈಸುವವಳು
ನೋಯಿಸಿದವರನ್ನು ಪ್ರೀತಿಸುವ ಕ್ಷಮಯ ಧರಿತ್ರಿಯವಳು
ಅಂಧಕಾರವ ಸರಿಸಿ ಮನಸೊಳಗೆ ನಂದಾದೀಪ ಹಚ್ಚಿದವಳು
✍️ ಅಮ್ಮು ರತನ್ ಶೆಟ್ಟಿ
”