ದುಡ್ಡಿದೆ ಅಂತ, ದುಡ್ಡಿನ ಮದದಲ್ಲಿ ಎನ್ ಬೇಕಾದರೂ ಮಾಡ್ತಿಯಾ ಅಲ್ವಾ, ಕೆಲವೊಮ್ಮೆ ಪ್ರಪಂಚದಲ್ಲಿ ಕ್ಷಮೆ ಇದೆ. ಆದರೆ, ಹೆಣ್ಣಿನ ವಿಷಯದಲ್ಲಿ ತಪ್ಪಾಗಿ ನಡೆದುಕೊಂಡ್ರೆ ನೀನು ನಿನ್ನ ಅಂತಸ್ತು ಕಾಲಿನ ಕೆಳಗಡೆಯ ದೂಳಿಗೆ ಸಮ.
ತಂದೆಯ ಸಹಕಾರ, ತಾಯಿಯ ಮಮಕಾರ, ನೀ ಬದುಕುವ ರೀತಿ, ಕಲಿತ ಒಳ್ಳೆಯ ನೀತಿ, ಮಾಡದಂತಹ ಸಹಾಯ, ಪಾಲಿಸುವಂಹ ಕಾಯ, ನೋಡುವಂತಹ ನೋಟ, ಕಲಿತ ಜೀವನ ಪಾಠ, ನಿನಗೆ ನೀನೇ ಭೂಷಣ, ನಿನಗೆ ನೀನೇ ಭೂಷಣ.
ಇರಲಿ ನಿನ್ನಲ್ಲಿ ನಿನಗೆ ನಂಬಿಕೆ ಮುನ್ನಡೆಸುವುದು ನಿನ್ನ ಆ ಆತ್ಮಾಭಿಮಾನ ಬಲ ನೀಡುವುದು ನಿನ್ನೊಳಗಿನ ಆತ್ಮ ವಿಶ್ವಾಸ ಶಕ್ತಿಪುಂಜವಾಗುವುದು ನೀ ತೋರುವ ಗೌರವ ದಾರಿ ತೋರುವುದು ನೀ ಕಟ್ಟಿದ ನಿನ್ನ ಆ ಕನಸು ಒಳ್ಳೆಯದನ್ನು ಹುಡುಕಿ ತರುವುದು ನಿನ್ನ ಒಳ್ಳೆ ಮನಸ್ಸು