Chethana Bhargav
Literary Colonel
73
Posts
0
Followers
0
Following

ಬರೆಯುವುದು ನನ್ನ ಹವ್ಯಾಸ.

Share with friends

ನಟನೆ ಬದುಕಿಕಾಗಿ ನಟಿಸಬೇಕು. ನಟನೆಯೇ ಬದುಕಾಗಬಾರದು. ನಟಿಸುತ್ತಾ ಮುಖವಾಡ ಹಾಕಿ ಹೆಚ್ಚುದಿವಸ ಬದುಕಲು ಸಾಧ್ಯವಿಲ್ಲ.ಒಂದಲ್ಲ ಒಂದು ದಿನ ಮುಖವಾಡ ಕಳಚಿ ಬಿದ್ದು ಅಸಲಿ ಮುಖದ ಅನಾವರಣ ಆಗುತ್ತದೆ. ಮನೋರಂಜನೆಗಾಗಿ ನಟಿಸುವುದು ಒಂದು ಕಲೆ. ಸ್ವಾರ್ಥಕ್ಕಾಗಿ ಈರ್ಷೆಗಾಗಿ ನಟಿಸುತ್ತಾ ಬದುಕುವುದು ಇನ್ನೊಬ್ಬರ ಭಾವನೆಗಳಿಗೆ ಮಾಡುವ ಕೊಲೆ. - ಚೇತನ ಭಾರ್ಗವ

ಮದುವೆ ಎಂಬ ಪವಿತ್ರ ಬಂಧನದಲ್ಲಿ ಬಂದಿಯಾಗುವ ವಧು - ವರರು ಜೊತೆಯಾಗಿ ಅಗ್ನಿ ಕುಂಡ ಸುತ್ತುತ್ತಾ ಏಳು ಹೆಜ್ಜೆಯನ್ನು ಇಡುವ ಸಂಪ್ರದಾಯ ನಮ್ಮ ಹಿಂದು ಸಂಸ್ಕೃತಿಯಲ್ಲಿದೆ.ಏಳು ಹೆಜ್ಜೆಯು ಅನ್ನ ಸಂವೃದ್ದಿ,ಬಲ ವೃದ್ಧಿ,ಧನ ವೃದ್ಧಿ, ಸುಖ ಸಂತೋಷ,ಪರಿವಾರ ಪಾಲನೆ,ಸಂತಾನ ವೃದ್ಧಿ,ಸ್ನೇಹ ವೃದ್ಧಿ ಎಂಬುದರ ಸಂಕೇತ.ಈ ಏಳು ಪ್ರತಿಜ್ಞೆ ಮಾಡುವ ಮೂಲಕ ನವದಂಪತಿಗಳು ತಮ್ಮ ಹೊಸ ಜೀವನವನ್ನು ಪ್ರಾರಂಭಿಸುತ್ತಾರೆ. ಚೇತನ ಭಾರ್ಗವ

ಜೀವನದಲ್ಲಿ ಏನಾದರೂ ಸಾಧಿಸಲು ನಾವು ದೃಢವಾದ ಸಂಕಲ್ಪ ಮಾಡಬೇಕು.ಶ್ರಮವಿಲ್ಲದೆ ಯಾವುದೇ ಕೆಲಸಕ್ಕೂ ಫಲ ಸಿಗಲು ಸಾಧ್ಯವಿಲ್ಲ.ನಾವು ಗುರಿಯನ್ನು ತಲುಪಲು ಶ್ರದ್ಧೆ ಮತ್ತು ಕಠಿಣ ಪರಿಶ್ರಮ ಪಟ್ಟು,ಕಲ್ಲಿನಂತೆ ನಿಂದನೆಗಳನ್ನು ಸಹಿಸಿ,ಒಳ್ಳೆಯ ಚಿಂತನೆ ಮಾಡಿ,ಹಿರಿದಾದವರ ಹಿತನುಡಿಗೆ ಸ್ಪಂದಿಸಿ, ದುರನಡತೆಯನ್ನು ಹೊಡೆದೋಡಿಸಿ ನಮ್ಮ ಸಂಕಲ್ಪದ ಗುರಿಯನ್ನು ತಲುಪಬೇಕು. ಚೇತನ ಭಾರ್ಗವ


Feed

Library

Write

Notification
Profile