AMMU RATHAN SHETY
Literary Captain
44
Posts
0
Followers
1
Following

None

Share with friends

ನಂದಾದೀಪ ಹೆಣ್ಣು ಒಂದು ಮನೆಯಲ್ಲಿ ಹುಟ್ಟಿದರೆ ಮತ್ತೊಂದು ಮನೆಯ ಬೆಳಗುವವಳು ಹೆತ್ತವರ ಸಂಕಟಕ್ಕೆ ಮರುಗುವಳು ಮೆಟ್ಟಿದ ಮನೆಗೆ ನೆರವಾಗುವವಳು ಯಾರೇನೇ ಅಂದರೂ ಸಹಿಸಿಕೊಂಡು ಎಲ್ಲರ ಬೇಕು ಬೇಡಗಳ ಪೂರೈಸುವವಳು ಹೊತ್ತು - ಹೆತ್ತವಳು ಕಂದನಿಗೊಂದು ಹೊಸ ಬದುಕು ಕಟ್ಟಿಕೊಡುವವಳು ಬಯಕೆಗಳ ಮನಸೊಳಗೆ ಬಚ್ಚಿಟ್ಟು ಕುಟುಂಬದ ಸುಖವನ್ನು ಹಾರೈಸುವವಳು ನೋಯಿಸಿದವರನ್ನು ಪ್ರೀತಿಸುವ ಕ್ಷಮಯ ಧರಿತ್ರಿಯವಳು ಅಂಧಕಾರವ ಸರಿಸಿ ಮನಸೊಳಗೆ ನಂದಾದೀಪ‌ ಹಚ್ಚಿದವಳು ✍️ ಅಮ್ಮು ರತನ್ ಶೆಟ್ಟಿ

ಸೌಂದರ್ಯಕೆ ಮೆರುಗು ತಂದವಳೇ, ಒಲವಿರಮನೆಗೆ ಒಡತಿ ನೀನಲ್ಲವೇ ಪ್ರೇಮದ ಕಲ್ಪಯಿರದ ಮನಸಿಗೆ ಹೊಸತೇನೋ ಬೆಳವಣಿಗೆ ನೀ ಬಂದ ಮೇಲೇನೇ ನಿನ್ನ ಒಲವಧಾರೆಯಲಿ ಸುಖಿಯಾಗಿರುವೆ ಕನಸುಗಳಿಗೆ ನೆನಪುಗಳೇ ಆಸರೆ ಪ್ರೀತಿಯಲಿ ಬಂಧಿಯಾದ ಹೃದಯ ವಿನೂತನ ಭಾವನೆಗಳ ಕೈಸೆರೆ ಈ ಬದುಕು ಶೂನ್ಯ ನೀನಿರದೆ ಹೋದರೆ. ✍️ ಅಮ್ಮು ರತನ್ ಶೆಟ್ಟಿ


Feed

Library

Write

Notification
Profile