ತುತ್ತು ಗಳಿಸಲು ನಿಂತವನಿಗೆ ಹೊತ್ತು ಕಳೆಯಲು ಸಮಯವಿರುವುದಿಲ್ಲ
ಜಗವ ಕುರಿತು ಹೀಗೊಂದು
ನುಡಿ-
"ಸಂಭ್ರಮದ ಈ
ಸಮಾರಾಧನೆಯಲ್ಲಿ
ಸಮಾನತೆಯ
ಸಮಾವೇಶ ಅತಿ
ಸಮಂಜಸ"
ಒಳಗೊಬ್ಬ ಮಾಂತ್ರಿಕನ ವಿರುದ್ಧ ಮೇಲೊಬ್ಬ ಮಾಯಾವಿ. ಮಾಂತ್ರಿಕನ ಒಳಿತಿಗಾಗಿ, ಮಾಯಾವಿಯ ಗೆಲುವು ನಿಶ್ಚಿತ
ಸುಖದಲ್ಲಿ ದೇವರನು ತ್ಯಜಿಸಿದೆನು ಅಂದು,
ಕಷ್ಟಗಳು ಬಂದೊಡನೆ ಪೂಜಿಸಿದೆನಿಂದು.
ಏಕೆ ಹೀಗಾಯಿತೋ? ಯೋಚಿಸಿದೆ ನಾನು,
ಹೊಳೆಯಿತೇನೆಂದರೆ, ಹುಳುಮಾನವನಲ್ಲವೆ ನಾನೆಂದೆಂದೂ.
ಸ್ವಾರ್ಥವೆಂಬ ರೈಲು ಶರವೇಗದಲ್ಲಿ ಚಲಿಸಿದರೂ, ತಾಳ್ಮೆ ಮತ್ತು ಪ್ರೀತಿಯೆಂಬ ನಿಲ್ದಾಣಗಳಲ್ಲಿ ಅದು ನಿಲ್ಲಲೇಬೇಕು
ಜಗತ್ತಿನ ಅದ್ಭುತಗಳ ನಡುವಿನ ಚುನಾವಣೆಯಲ್ಲಿ ತಾಯಿಯ ನಗು ಅವಿರೋಧವಾಗಿ ಆಯ್ಕೆಯಾಗಿತ್ತು
ಮಾನವರ ನಡುವಿನ ಮದ-ಮಾತ್ಸರ್ಯಗಳ ಯುದ್ಧದಲ್ಲಿ ವೈರಾಣುವೊಂದು ಸದ್ದಿಲ್ಲದೆ ಗೆದ್ದಿತ್ತು
ಅಂಗಳದಲ್ಲಿ ಬಣ್ಣಗಳ ತುಂಬಿದ ಭಗವಂತ ಅಂತರಾಳದ ಬಣ್ಣವ ಅಳಿಸಿಬಿಟ್ಟ