ಮೊಮ್ಮಗಳ ಚಾಣಾಕ್ಷತೆ ಕಂಡ ಅಜ್ಜಿ ಹೇಳಿದರು ಯರ್ ಮಗಳು ಅವ್ಳು, ಬುದ್ಧಿವಂತಿಕೆ ನೋಡಿದ ಮೇಲೆ ಯಾರ್ ಸೊಸೆ ಅವ್ಳು, ಮೊಮ್ಮಗಳು ಕೆಲವ ಬಾರಿ ಇದಿರು ಮಾತಾಡಿದಳು ಎಲ್ಲಿ ಹೋಗತ್ತೆ ಅಮ್ಮನ ಗುಣ, ಇದನ್ನೇ ಕಲಿಬೇಕು ಎಂದು ಆಡಿಕೊಳ್ಳುವರು, ತಾಯಿ ಜೀವನ ಇಷ್ಟೇ! Kaaveri pu
ನನ್ನ ದೊಡ್ಡ ಆಸ್ತಿ, ನನ್ನ ಅಪ್ಪಾಜಿ. ದೇವರ ಪ್ರತಿರೂಪ ನನ್ನ ಅಪ್ಪಾಜಿ. ತಾಳ್ಮೆಯ ಸಹನಾ ಮೂರ್ತಿ ನನ್ನ ಅಪ್ಪಾಜಿ. ಏಳುಬೀಳುಗಳಲ್ಲೂ ಸದಾ ಹಸನ್ಮುಖಿ ನನ್ನ ಅಪ್ಪಾಜಿ. ಮಕ್ಕಳೇ ನನ್ನ ಆಸ್ತಿ ಎಂದು ಬೀಗುವರು ನನ್ನ ಅಪ್ಪಾಜಿ. ಹಿರಿ-ಕಿರಿಯರಲ್ಲಿ ಭೇದ ಎಣಿಸದವರು ನನ್ನ ಅಪ್ಪಾಜಿ. ನಿಮ್ಮ ಈ ವ್ಯಕ್ತಿತ್ವವೇ ನನಗಿಷ್ಟ ಅಪ್ಪಾಜಿ. ನೂರ್ಕಾಲ ಸುಖವಾಗಿ ಬಾಳಿರಿ ಅಪ್ಪಾಜಿ. ಅಪ್ಪಾ, ಐ ಲವ್ ಯೂ ಪಾ.
ಹಳೆಯ ನೆನಪುಗಳ ಜೊತೆ ಹೊಸ ಜೀವನ ಪ್ರಾರಂಭಿಸೋಣ ಕಷ್ಟದ ಸಮಯಗಳನ್ನು ಮರೆತು ಅಮೃತ ಘಳಿಗೆಗೆ ಎದುರು ನೋಡೋಣ ಪ್ರತಿಯೊಂದು ಜೀವಕ್ಕೂ ಈ ಹೊಸ ವರುಷ ಪ್ರತಿದಿನವೂ ಹೊಸತನ್ನು ತರಲಿ ಹೊಸ ವರ್ಷದ ಹಾರ್ದಿಕ ಶುಭಾಶಯಗಳು @ಕಾವೇರಿ
ಪಾರ್ಥ ಅಕ್ಷಯ , ಪಾರ್ವತಿಯ ಏಕೈಕ ಪುತ್ರ ಹಳ್ಳಿ ಮನೆತನದ ಕುಮಾರ ಕಂಠೀರವ ಪಂಚ ಬಾಷಾ ಪ್ರವೀಣ ಈ ವೀರ ಹಿಂದಿ ಬಾರದ ನನಗೆ ಹಿಂದಿ ಕಲಿಸಿ ಬಾರದ ಕನ್ನಡವ ನೀ ಕಲಿತು ಅರ್ಥವಾಗದಿದ್ದರೂ ಇಬ್ಬರೂ ಆಡುತ್ತೇವೆ, ಮಾತಾಡುತ್ತೇವೆ,ನಲಿಯುತ್ತೇವೆ ಬೆಣ್ಣೆಯಂತಹ ನಿನ್ನ ಗಲ್ಲ ಜೊತೆಗೆ ಕಡು ಕಪ್ಪಿನ ನಿನ್ನ ಕಣ್ಣು ನೋಡಲು ಬಲು ಚಂದ ನಮ್ಮೆಲ್ಲರ ಪ್ರೀತಿಯ ಪಾರ್ಥ, ನಿನಗೆ ಹುಟ್ಟು ಹಬ್ಬದ ಶುಭಾಶಯಗಳು ಸದಾ ಸುಖವಾಗಿರು ಪಾರ್ಥ.
ಬೆಟ್ಟದ ಹೂವನ್ನು ಕನ್ನಡಿಗರಿಗೆ ಮೂಡಿಸಿ ರಾಷ್ಟ್ರ ಪ್ರಶಸ್ತಿ ಪಡೆದ ವೀರಕನ್ನಡಿಗ. ಪ್ರಹ್ಲಾದನಾಗಿ ಗೋಡೆಯೊಳಗಿಂದ ಹರಿಯನ್ನು ಕರೆಸಿದೆ, ಈಗೊಮ್ಮೆ ಅದೇ ಹರಿಯನ್ನು ಕರೆಯಲೇಕೆ ಮರೆತೆ? ಎಲ್ಲ ಇದ್ದೂ ಏನೂ ಇಲ್ಲದ ಹಾಗೇ ಬದುಕಿ, ಹಾಗೆಯೇ ಹೋದೆಯಾ ರಾಜಕುಮಾರ? ಹೆತ್ತವರನ್ನು ಪುನೀತಗೊಳಿಸಿದ ನೀನೇಕೆ ಅವಸರವಾಗಿ ಹೊರಟು ಬಿಟ್ಟೆ? ಮತ್ತೇ ಹುಟ್ಟಿ ಬಾ ಅರಸು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 🙏
ಕೋಪ ಬಂದಾಗ ಕಾಳಿಯಾಗುವೆ ಶಾಂತವಿದ್ದಾಗ ಸದ್ಗುಣ ಸಂಪನ್ನೆಯೇ . ಎಲ್ಲರನ್ನೂ ಸಮಾನವಾಗಿ ನೋಡಿದೆ . ಎಲ್ಲರೂ ನನ್ನವರೇ ಎಂದೆ. ನಮಗಾಗಿ ಎಷ್ಟೋ ತ್ಯಾಗಗಳ ಮಾಡಿದೆ ನೋವು ನಲಿವುಗಳ ಸಮನಾಗಿ ತೂಗಿದೆ. ಅದನ್ನೇ ನಮಗೂ ಬಿತ್ತಿದೆ. ನಮ್ಮ ತಪ್ಪುಗಳ ಮನ್ನಿಸಿಮ್ಮಾ. ಹೊಸ ತಪ್ಪುಗಳನ್ನು ಸ್ವೀಕರಿಸಮ್ಮಾ. ಅದೇ ತಾನೇ ನೀನು ಇದೇ ತಾನೇ ನಾವು! ಹುಟ್ಟು ಹಬ್ಬದ ಶುಭಾಶಯಗಳು ಅವ್ವಾ. ಇಂತಹ ನೂರಾರು ಖುಷಿಯ ದಿನಗಳು ನಿನ್ನವಾಗಲಿ.