Poornima Joshi
Literary Lieutenant
19
Posts
0
Followers
1
Following

I'm Poornima and I love to read StoryMirror contents.

Share with friends

ಶಾಲೆ ಅರಿತು ಬೆರೆತು ಮುಂದಡಿ ಇಡಲು ಸುಂದರ ನಾಳೆ, ಸುಭದ್ರ ಭವಿಷ್ಯದ ಮುನ್ನುಡಿಗೆ ಹಂದರ ಶಾಲೆ. ✍️ ಪೂರ್ಣಿಮಾ

ಸ್ವರ್ಗ ಸಹೃದಯಿಗಳ ಜೊತೆಗಿನ ಕಲರವ, ಭೂಮಿಯೇ ಸ್ವರ್ಗವಾದ ಅನುಭವ. ✍️ ಪೂರ್ಣಿಮಾ

ನಂಬಿಕೆ ನಂಬಿಕೆ ಎಂಬುದು ದುಬಾರಿ, ಸ್ವಂತಿಕೆ ನಂಬಿಕೆಯನ್ನು ಉಳಿಸಿಕೊಳ್ಳಲು ಇರುವ ದಾರಿ. ✍️ ಪೂರ್ಣಿಮಾ

ಸಾಮರ್ಥ್ಯ ಇನ್ನೊಬ್ಬರನ್ನು ತುಳಿದು ಬದುಕುವ ಸಾಮರ್ಥ್ಯ ವ್ಯರ್ಥ, ಇನ್ನೊಬ್ಬರನ್ನು ಅರಿತು ಜೊತೆಯಲ್ಲಿ ಬದುಕಿ ಬಾಳುವುದು ಸಾಮರ್ಥ್ಯ. ✍️ ಪೂರ್ಣಿಮಾ

ಸಾಮರ್ಥ್ಯ ಸಮಯವನ್ನು ಮಾಡದಿರು ವ್ಯರ್ಥ, ಸತತ ಪ್ರಯತ್ನದಿಂದ ಜಗತ್ತಿಗೆ ತೋರಿಸು ನಿನ್ನ ಸಾಮರ್ಥ್ಯ. ✍️ ಪೂರ್ಣಿಮಾ

ಭವಿಷ್ಯ ಬೇಡ ನಿನಗೆ ಅನ್ಯರ ಕುರಿತಾದ ಅನಗತ್ಯ ವಿಷಯ ಯೋಚಿಸಿ, ಯೋಜಿಸಿ ಪರಿಪಕ್ವವಾಗಿಸು ನಿನ್ನ ಭವಿಷ್ಯ. ✍️ ಪೂರ್ಣಿಮಾ

ಒಲವು ಅರಳಿದರೆ ಹೂವಿನ ಹಾಗೆ, ಅಳಿದರೆ ಹಾವಿನ ಹಗೆ. ✍️ ಪೂರ್ಣಿಮಾ.

ನೀರು ಬಿಸಿ ಇದ್ದರೆ ಆರಿಸಿ ಕುಡಿಯುತ್ತೇವೆ, ನೀರನ್ನು ಚೆಲ್ಲುವುದಿಲ್ಲ ಬೆಂಕಿ ಸುಟ್ಟರೆ ಆರಿಸಿ ಬಿಡುತ್ತೇವೆ ,ಬೆಂಕಿ ಮಾಡುವುದನ್ನು ಬಿಡುವುದಿಲ್ಲ ಅಕ್ಕಿಯಲ್ಲಿ ಸಿಕ್ಕ ಕಲ್ಲನ್ನು ಆರಿಸಿ ಎಸೆಯುತ್ತೇವೆ, ಅಕ್ಕಿಯನ್ನು ಎಸೆಯುವುದಿಲ್ಲ ಬದುಕಿನಲ್ಲಿ ಆರಿಸುವ ಅವಕಾಶ ಇದ್ದೇ ಇರುತ್ತದೆ, ನಮ್ಮ ಆಯ್ಕೆ ಸರಿಯಾಗಿರಬೇಕು ಅಷ್ಟೇ!!.. ✍🏼ಪೂರ್ಣಿಮಾ

ಪಂಚಭಕ್ಷ್ಯ ಪರಮಾನ್ನವನ್ನೊಳಗೊಂಡ ಭೋಜನವಿದ್ದರೂ ಊಟದ ಕೊನೆಯಲ್ಲಿ ಎಲ್ಲವನ್ನೂ ಕರಗಿಸುವ ಮಜ್ಜಿಗೆಗೆ ನೀಡಲೇಬೇಕು ಹೆಚ್ಚು ಪ್ರಾಶಸ್ತ್ಯ, ಸಂಸಾರವೆಂಬ ಅಡುಗೆಯಲ್ಲಿ ಉಪ್ಪು ಹುಳಿ ಖಾರಗಳ ಏರುಪೇರನ್ನು ಸರಿಪಡಿಸಲು ಪತಿಪತ್ನಿಯರ ಮಧ್ಯೆ ಇರಬೇಕು ಸಿಹಿಯಾದ ಸರಸ ಸಲ್ಲಾಪದ ಬಾಂಧವ್ಯ. ✍🏼ಪೂರ್ಣಿಮಾ


Feed

Library

Write

Notification
Profile