Kavya Poojary
Literary Colonel
AUTHOR OF THE YEAR 2020,2021 - WINNER

56
ಪೋಸ್ಟ್\u200cಗಳು
2
ಅನುಯಾಯಿಗಳು
0
ಅನುಸರಿಸಲಾಗುತ್ತಿದೆ

ಕವಿ ಮನಸು❤

ಸ್ನೇಹಿತರೊಂದಿಗೆ ಹಂಚಿಕೊಳ್ಳಿ

ಬದುಕ ಪ್ರಯಾಣದಿ ಬಂದು ಹೋಗುವವರು ಹೆಚ್ಚು ಯೋಚಿಸುತ ಕೂತರೆ ಹಿಡಿಯಬಹುದು ನಿನಗೆ ಹುಚ್ಚು ಬದುಕು ನೀನು ನಸುನಗುತ ನಿನ್ನ ಬದುಕಿಗೆ ನೀನೆ ಹೆಚ್ಚು

ಸೋಜಿಗವಂತೆ ಈ ಬದುಕು ನೀನೊಮ್ಮೆ ಇಣುಕು ಜೀವನವೇನೆಂದು ಹುಡುಕು ಇಂದೇ ನಿನಗಿರುವ ಕೊನೆದಿನ ಎನುವಂತೆ ಬದುಕಿಬಿಡು

ಕರುಣೆ ಎಂಬ ಕನ್ನಡಿ ಯಾರಿದಕೆ ಮುನ್ನುಡಿ ಇದ ಹೇಗೆ ತಿಳಿಯಲಿ ಈ ನೂರೆಂಟು ಸುಳಿಯಲಿ

ನನಗಿಷ್ಟ ಈ ಮಳೆಗಾಲ ಹಚ್ಚಹಸಿರಿನ ನಡುವಲಿ ಮರೆಯದೆ ಮೆರೆಯಲಿ ಪಚ್ಚನೆಯ ಉಸಿರುಳಿಸುವ ಫಲ

ನಿನ್ನ ಕಂಡು ನಾ ಆಕರ್ಷಿತಳಾದೆನೋ ನಿನ್ನೊಲುಮೆಗೆ ನಾ ಮರುಳಾದೆನೋ ನಿನ್ನೆದೆಯ ಭಾವದ ಗಾಲಕೆ ಸಿಕ್ಕ ಮೀನು ನಾನಾಗಿಹೆನು

ನಗುತ ನಗಿಸುತ ಬಾಳು ಇರುವಷ್ಟು ದಿನ ಎಲ್ಲಾ ಒಂದು ಎನುವ ಕಂಪು ಏಕತೆಯಿರಲಿ ನಮ್ಮಲಿ ಬೇದ ಭಾವವೇಕೆ ಎಲ್ಲರ ರಕ್ತದ ಬಣ್ಣ ಕೆಂಪು

ಬದುಕ ಪಯಣದಿ ಜೊತೆಯಾಗುವುದು ಕಷ್ಟಗಳ ಸುಳಿ ನೀ ನಗುತ ಮುನ್ನುಗ್ಗು ಧನಾತ್ಮಕ ಮನೋಬಲದಿ ಕಷ್ಟವೂ ಸೋತು ಕಡೆಗೊಮ್ಮೆ ಜೊತೆಯಾಗುವುದು ಸಂತಸದ ಹಳಿ

ತಂತ್ರಜ್ಞಾನವ ಮೋಹಿಸುತ , ಪರಿಪಾಲಿಸುತ ಬದುಕು ತಪ್ಪೇನಿಲ್ಲಾ.... ಆದರೆ ನಂಬಿಕೆಗಳ ಕೊಂದು ವಿಜ್ಞಾನವೇ ಸರಿ ಎಂದರೆ ಅದಕರ್ಥವಿಲ್ಲ.....

ಹೃದಯ ಒಡೆದು ಚೂರಾಗಿ ಛಿದ್ರವಾದಮೇಲೆ ಜೊತೆಯಾಗ ಬಂದೆಯಾ ಮತ್ತೇ ಒಡೆದ ಕನ್ನಡಿಯ ಜೋಡಿಸುವೆನೆಂಬ ಭ್ರಮೆಯಲಿ...


ಫೀಡ್

ಲೈಬ್ರರಿ

ಬರೆಯಿರಿ

ಅಧಿಸೂಚನೆ
ಪ್ರೊಫೈಲ್