ಬದುಕ ಪ್ರಯಾಣದಿ ಬಂದು ಹೋಗುವವರು ಹೆಚ್ಚು ಯೋಚಿಸುತ ಕೂತರೆ ಹಿಡಿಯಬಹುದು ನಿನಗೆ ಹುಚ್ಚು ಬದುಕು ನೀನು ನಸುನಗುತ ನಿನ್ನ ಬದುಕಿಗೆ ನೀನೆ ಹೆಚ್ಚು
ನಗುತ ನಗಿಸುತ ಬಾಳು ಇರುವಷ್ಟು ದಿನ ಎಲ್ಲಾ ಒಂದು ಎನುವ ಕಂಪು ಏಕತೆಯಿರಲಿ ನಮ್ಮಲಿ ಬೇದ ಭಾವವೇಕೆ ಎಲ್ಲರ ರಕ್ತದ ಬಣ್ಣ ಕೆಂಪು
ಬದುಕ ಪಯಣದಿ ಜೊತೆಯಾಗುವುದು ಕಷ್ಟಗಳ ಸುಳಿ ನೀ ನಗುತ ಮುನ್ನುಗ್ಗು ಧನಾತ್ಮಕ ಮನೋಬಲದಿ ಕಷ್ಟವೂ ಸೋತು ಕಡೆಗೊಮ್ಮೆ ಜೊತೆಯಾಗುವುದು ಸಂತಸದ ಹಳಿ
ತಂತ್ರಜ್ಞಾನವ ಮೋಹಿಸುತ , ಪರಿಪಾಲಿಸುತ ಬದುಕು ತಪ್ಪೇನಿಲ್ಲಾ.... ಆದರೆ ನಂಬಿಕೆಗಳ ಕೊಂದು ವಿಜ್ಞಾನವೇ ಸರಿ ಎಂದರೆ ಅದಕರ್ಥವಿಲ್ಲ.....