ಬೀದಿಯಲ್ಲಿ ನನ್ನದೇ ಶವಯಾತ್ರೆ ಹೊರಟಿದೆ ದಯಮಾಡಿ ಕಿಟಕಿಯಲ್ಲಿ ಇಣುಕಬೇಡ ದುಬಾರಿಯ ದುನಿಯಾದಲ್ಲಿವೆ ನೆನಪಿನ ಹೂವುಗಳು ಮತ್ತೆಂದೂ ಬದುಕಿನಲ್ಲಿ ಸುಳಿಯಬೇಡ ಲಕ್ಷ್ಮೀಕಾಂತ್ ಎಲ್ ವಿ
ಆ ರಾತ್ರಿಯ ಬೆಳದಿಂಗಳು ಒಂಟಿಯಾಗಿತ್ತು ನೀನಿಲ್ಲದೆ ಕತ್ತಲ ಮೌನವೂ ಕರಗದೆ ರಾಡಿಯಾಗಿತ್ತು ನೀನಿಲ್ಲದೆ ಲಕ್ಷ್ಮೀಕಾಂತ್ ಎಲ್ ವಿ
ಆ ರಾತ್ರಿಯ ಬೆಳದಿಂಗಳು ಒಂಟಿಯಾಗಿತ್ತು ನೀನಿಲ್ಲದೆ ಕತ್ತಲ ಮೌನವೂ ಕರಗದೆ ರಾಡಿಯಾಗಿತ್ತು ನೀನಿಲ್ಲದೆ ಲಕ್ಷ್ಮೀಕಾಂತ್ ಎಲ್ ವಿ
ತಿರುವಿನಲ್ಲಿ ನೀ ನೆಟ್ಟ ಒಲವ ಬಳ್ಳಿ ಹೂಬಿಟ್ಟಿದೆ ನೆರಳಿನಲ್ಲಿ ನೀ ಕೊಟ್ಟ ವಿರಹ ಇನ್ನೂ ಬಿಸಿಯಾಗಿದೆ ಲಕ್ಷ್ಮೀಕಾಂತ್ ಎಲ್ ವಿ
ಖಾಲಿ ಮನಸ್ಸು ಬೆಳದಿಂಗಳಲ್ಲಿ ದಿಕ್ಕೆಟ್ಟು ಅಲೆಯುತ್ತಿದೆ ಅದು ಮತ್ತೆಂದೂ ಮುಗಿಯದ ಜ್ಞಾನದ ದಾಹದಿಂದ ಬಳಲುತ್ತಿದೆ ಲಕ್ಷ್ಮೀಕಾಂತ್ ಎಲ್ ವಿ