ಮಾಧ್ಯಮಗಳು ಜನಸಾಮಾನ್ಯರ ಸಮಸ್ಯೆಗಳಿಂದ ವಿಮುಖವಾಗುತ್ತಿವೆಯೇ? ದೇಶದ, ನಾಡಿನ ಅಭಿವೃದ್ಧಿಯಲ್ಲಿ ಪತ್ರಿಕೆಗಳ ಪಾತ್ರ ಮಹತ್ವವಾದುದು. ಜನರ ಸಮಸ್ಯೆಗಳನ್ನು ಪರಾಮರ್ಶಿಸಿ, ಅವರ ನಾಡಿ ಮಿಡಿತ ಅರಿತು ಯೋಜನೆಗಳನ್ನು ರೂಪಿಸಲು ಸರ್ಕಾರಕ್ಕೆ ಇರುವ ಏಕೈಕ ಮಾರ್ಗವೇ ಮಾಧ್ಯಮಗಳು. ವಿಭಿನ್ನವಾದ ಧ್ಯೇಯ, ಸಿದ್ಧಾಂತಗಳನ್ನು ಒಳಗೊಂಡ ಮಾಧ್ಯಮಗಳು ಜನರೊಡನೆ ಬೆರೆತು ಕೆಲಸ ಮಾಡಬೇಕಾಗುತ್ತದೆ. ಈ ಕಾರಣದಿಂದಾಗಿ ಮಾಧ್ಯಮಗಳನ್ನು ದೇಶದ ನಾಲ್ಕನೇ ಅಂಗವೆಂದು ಪರಿಗಣಿಸಲಾಗುತ್ತದೆ. ಕೊರೊನಾ ಎಂಬ