ತಿಳಿಯದವರ ಮುಂದೆ ಮೌನವಾಗಿರ ಬೇಕು.
ಗುಣವಂತರ ಜೊತೆ ಮಾತನಾಡಬೇಕು.
ಲೋಕವನ್ನು ಗೆದ್ದವನು ಆಡಳಿತದಲ್ಲಿ ಮೇಲೇರುತ್ತಾನೆ. ತನ್ನ ಸ್ವಾರ್ಥದಿಂದ ಮನೆಯ ಜವಾಬ್ದಾರಿಗಳಲ್ಲಿ ಸೋತಾಗ ಉತ್ತರ ???!!!
ವಿದ್ಯೆ ಮತ್ತು ವಿನಯ ಗೌರವವನ್ನು ತರುತ್ತದೆ. ಅರಿವು ಅದರ ಘನತೆಯನ್ನು ಹೆಚ್ಚಿಸುತ್ತದೆ.
ಮಾನವನಿಗೆ ವಿದ್ಯೆ ವಿನಯ ಗೌರವವನ್ನು ತಂದು ಕೊಟ್ಟರೆ , ವಿವೇಚನೆ ಅದರ ತೂಕವನ್ನು ಹೆಚ್ಚಿಸುತ್ತದೆ.
🙏🙏
ಮಾನವನಿಗೆ
ವಿದ್ಯೆ ವಿನಯ ಗೌರವವನ್ನು
ತಂದು ಕೊಟ್ಟರೆ, ವಿವೇಚನೆ
ಅದರ
ತೂಕವನ್ನು ಹೆಚ್ಚಿಸುತ್ತದೆ.
🙏🙏🙏
ಮಾತಿನ ಮೋಡಿಗೆ ಸಿಲುಕ ಬಾರದು, ಆಸೆ ತುಂಬುವ ಭರವಸೆಗಳಿಗೆ ಸೋಲಬಾರದು, ನಮ್ಮ ತನವನ್ನು ಕಳೆದುಕೊಳ್ಳ ಬಾರದು. ಎಚ್ಚರಿಕೆ ಪ್ರತಿ ಹೆಜ್ಜೆಯಲ್ಲೂ ಇರಬೇಕು.
ಮನಸ್ಸು ಕುದುರೆಯಂತೆ ಚಂಚಲವಾಗಿರಬಾರದು
ಹರಿವ ನೀರಿನ ಕಡೆ ಕಸದಂತೆ ಹೋಗಬಾರದು
ಗಾಳಿಯ ಚಲನೆ, ಕಾಲದ ಗಣನೆಯನ್ನು ತಿಳಿದಿರಬೇಕು.
ಅಳಿದು ಹೋದ ಸ್ವಾರ್ಥಿಗಳು ಏನನ್ನೂ ಉಳಿಸಲಿಲ್ಲ. ಹಲವಾರು ಜೀವಗಳನ್ನು ತೆಗೆದರು. ಜೀವನವನ್ನು ಕೊಟ್ಟವರು ಅಂದೂ ಇದ್ದರು, ಇಂದೂ ಇದ್ದಾರೆ ಹಾಗೂ ಮುಂದೆಂದು ಇರುತ್ತಾರೆ. ಮಾನವ ಜೀವ ಮತ್ತು ಜೀವನದ ಧರ್ಮ ಮತ್ತು ಮರ್ಮವನ್ನು ತಿಳಿಯಬೇಕು.
ಶುದ್ಧ ಮನಸ್ಸು ಹೇಳುವ ಮಾತು ಪಾರದರ್ಶಕ.
ಆದರೆ ಸಮಾಜದಲ್ಲಿ ಹೆಚ್ಚು ಕಾಣುವುದು ಅಪಾರದರ್ಶಕ.