None Teacher,Writer,Poet,Play Writer,Drama Director
Share with friends
ಮಾತಿನ ಮೋಡಿಗೆ ಸಿಲುಕ ಬಾರದು, ಆಸೆ ತುಂಬುವ ಭರವಸೆಗಳಿಗೆ ಸೋಲಬಾರದು, ನಮ್ಮ ತನವನ್ನು ಕಳೆದುಕೊಳ್ಳ ಬಾರದು. ಎಚ್ಚರಿಕೆ ಪ್ರತಿ ಹೆಜ್ಜೆಯಲ್ಲೂ ಇರಬೇಕು.
ಮನಸ್ಸು ಕುದುರೆಯಂತೆ ಚಂಚಲವಾಗಿರಬಾರದು ಹರಿವ ನೀರಿನ ಕಡೆ ಕಸದಂತೆ ಹೋಗಬಾರದು ಗಾಳಿಯ ಚಲನೆ, ಕಾಲದ ಗಣನೆಯನ್ನು ತಿಳಿದಿರಬೇಕು.
ಅಳಿದು ಹೋದ ಸ್ವಾರ್ಥಿಗಳು ಏನನ್ನೂ ಉಳಿಸಲಿಲ್ಲ. ಹಲವಾರು ಜೀವಗಳನ್ನು ತೆಗೆದರು. ಜೀವನವನ್ನು ಕೊಟ್ಟವರು ಅಂದೂ ಇದ್ದರು, ಇಂದೂ ಇದ್ದಾರೆ ಹಾಗೂ ಮುಂದೆಂದು ಇರುತ್ತಾರೆ. ಮಾನವ ಜೀವ ಮತ್ತು ಜೀವನದ ಧರ್ಮ ಮತ್ತು ಮರ್ಮವನ್ನು ತಿಳಿಯಬೇಕು.