ಅಂತ್ಯವಿಲ್ಲದ ಬದುಕು ಯಾರದು ಇಲ್ಲ, ಬದುಕಿಗೊಂದು ಅಂತ್ಯವಿದೆ.
ಕಣ್ಣುಗಳು ಎಲ್ಲವನ್ನು ಹೇಳಬಲ್ಲವು ಮನಸಿನ ಎಲ್ಲಾ ಭಾವಗಳು ಕಣ್ಣಿನಲ್ಲೆ ಅಡಗಿವೆ.
ವಿಶ್ರಾಂತಿ ದೇಹಕ್ಕೆ ಎಷ್ಟು ಮುಖ್ಯವೋ, ಮನಸ್ಸಿಗು ಅಷ್ಟೇ ಮುಖ್ಯ.
ಪೋಷಕರು ಏನು ಮಾಡುತ್ತಾರೋ ಅದನ್ನೆ ಮಕ್ಕಳು ಮಾಡುತ್ತಾರೆ , ಪೋಷಣೆ ಬರಿ ಮಾತಿನದಲ್ಲ ಕೃತಿಯದ್ದು ಕೂಡ.
ಮನುಷ್ಯನ ಮನಸ್ಥಿತಿ ಸರಿ ಇಲ್ಲದಿದ್ದರೆ
ಮೃಗವಾಗಿ ಮಾನವೀಯತೆಯನು ಮರೆತುಬಿಡುತ್ತಾನೆ.
ಬೇರೆಯವರನ್ನು ಅವರ ತಪ್ಪಿದ್ದರು ಸ್ವೀಕರಿಸುವುದಕ್ಕಿಂತ ನಮ್ಮನ್ನು ನಾವು ಸ್ವಯಂ ಸ್ವೀಕಾರ ಮಾಡುವುದು ಉತ್ತಮ
ಹಬ್ಬವು ಹರಿದು ಚದುರಿ ಹೋದ
ಹಲವಾರು ಜನರನ್ನು ಒಮ್ಮೆಲೆ ಒಗ್ಗೂಡಿಸುತ್ತದೆ. ಹಬ್ಬವೇ ಜನರೊಡನೆ ಹಬ್ಬ ಮಾಡುತ್ತದೆ.
ನಾಳೆಯು ಹೊಸದು ಪ್ರತಿದಿನವೂ ನಿತ್ಯವೇ ಮನುಷ್ಯನಿಗೆ, ಆದರೆ ಪಶುಪಕ್ಷಿಗಳಿಗೆ ನಿನ್ನೆ ಇಂದು ನಾಳೆಗಳ ಲೆಕ್ಕವಿಲ್ಲ.
ಕೆಲವೊಮ್ಮೆ ನಮ್ಮ ಮನಸ್ಸಿಗೆ ಬೇಸರವಾದರು ನಮ್ಮ ಜೀವನದ ಹಿತಕ್ಕಾಗಿ ಕೆಲವೊಂದು ಸಂಭಂಧಗಳಿಂದ ಬ್ರೇಕಪ್ ಮಾಡಿಕೊಳ್ಳುವುದು ಅನಿವಾರ್ಯ.