ಪ್ರೀತಿಸುವುದು ಸರಳ,
ಅದನ್ನ ಉಳಿಸಿಕೊಳ್ಳುವವರು ವಿರಳ.
ಯಾವುದೇ ಯುದ್ಧ ಗೆಲ್ಲಲೂ ದೈಹಿಕ ಸಾಮರ್ಥ್ಯದ ಜೊತೆಗೆ ಬುದ್ಧಿಶಕ್ತಿಯು ಅತಿಮುಖ್ಯ,
ಅರ್ಜುನನ ಜೊತೆ ಕೃಷ್ಣ ಇದ್ದಂತೆ.
ನಮ್ಮವರ ತಪ್ಪುಗಳನ್ನು ಹುಡುಕಿ ಶಿಕ್ಷಿಸುವುದಕ್ಕಿಂತ,
ಕ್ಷಮಿಸಿ, ತಿದ್ದಿ ಮುನ್ನಡೆಯುವುದೇ ಜೀವನ.
ಮನೆಯಲ್ಲಿನ ಶಾಂತಿ ಕದಡಿದರೆ ಮನೆಯೇ ರಣರಂಗ, ಮನಶಾಂತಿ ಹಾಳಾದರೆ
ಜೀವನವೆ ಚದುರಂಗ.
ಶಾಂತಿ ಇಲ್ಲದೆ ಚದುರಂಗದ ಕಾಯಿಯನ್ನು ಆಡಿಸಲು ಸಾಧ್ಯವಿಲ್ಲ, ಹಾಗೆಯೇ ಶಾಂತಿ ಇಲ್ಲದೆ ಜೀವನ ನಡೆಸಲು ಸಾಧ್ಯವಿಲ್ಲ.
ಬೆಳಕಿಲ್ಲದಿದ್ದರೆ ಕೋಣೆಯಲ್ಲಿ ಕತ್ತಲಾವರಿಸುವುದು,
ಜ್ಞಾನವಿಲ್ಲದಿದ್ದರೆ ಜೀವನವೇ ಅಂಧಕಾರದಲ್ಲಿ ಮುಳುಗುವುದು.
ನಾನೇ ಎಂಬ ಅಹಂನಲ್ಲಿದ್ದ ವಿಷಕ್ಕಿಂತ, ಹೊಂದಾಣಿಕೆ ಎಂಬ ಅಮೃತವೇ ಶ್ರೇಷ್ಠ.