ಯಾರೋ ಅಪರಿಚಿತ ವ್ಯಕ್ತಿಯ ಕೈಯಲ್ಲಿ ಖಾಲಿ ಪಾತ್ರೆ ನೋಡಿದರೆ... ಅವನು ಭಿಕ್ಷೆ ಬೇಡಲೆಂದೇ ಹೊರಟಿರಬಹುದು ಅಂತ ಯೋಚಿಸಬೇಡ... ಅವನು ತನಗಾಗಿ ಒಂದು ಚೂರು ಉಳಿಸಿಕೊಳ್ಳದೆ ಎಲ್ಲವನ್ನೂ ಎಲ್ಲರಲ್ಲಿ ಹಂಚಿ ಬಂದಿರಬಹುದಲ್ಲವೇ..!!?? ಪ್ರೇರಣಾ ಕುಲಕರ್ಣಿ💙
ಸುಳಿವೇ ಕೊಡದೆ ಅವಿರ್ಭವಿಸುವ ದುಃಖದ ಕಾರ್ಮೋಡಗಳಿಂದ ಕಣ್ಣೀರು ಭೋರ್ಗರೆಯುತ್ತಾ ಸುರಿದು , ನನ್ನನ್ನೆಲ್ಲಿ ಪ್ರವಾಹದಲ್ಲಿ ಮುಳುಗಿಸಿ ಬಿಡುತ್ತದೆಯೋ!!?? ಎನ್ನುವ ಆತಂಕದಲ್ಲಿ ಈಗೀಗ ಮನಸ್ಸು ಬಿಚ್ಚಿ ನಗಲೂ ಕೂಡಾ ಹೆದರಿಕೆಯಾಗುತ್ತದೆ... ಪ್ರೇರಣಾ ಕುಲಕರ್ಣಿ💙
ನಿಜವಾದ ಪ್ರೀತಿ...ಕೇವಲ ಸಂಗಾತಿಗಳಿಬ್ಬರ ಸಮ್ಮತಿಯಲ್ಲಿ ಮಾತ್ರ ಇರೋದಿಲ್ಲ... ಆ ಸಮ್ಮತಿಗಾಗಿ ಯಾವ ಷರತ್ತು ಇಲ್ಲದೆಯೇ ಕಾಯುವ ಪ್ರತಿ ಕ್ಷಣ...ಕ್ಷಣಗಳಲ್ಲಿಯೂ ಇರುತ್ತದೆ. ಪ್ರೇರಣಾ ಕುಲಕರ್ಣಿ💙
ಈ ಪ್ರಪಂಚದಲ್ಲಿ ಬದುಕಬೇಕಾದರೆ ನಮ್ಮಲ್ಲಿ ಸ್ವಲ್ಪವಾದರೂ ಆತ್ಮಸಮ್ಮಾನವಿರಲೇಬೇಕು.. ಯಾಕೆಂದರೆ... ತುಂಬಾ ಬಾಗಿದರೆ, ಜನರು ನಮ್ಮ ಬೆನ್ನನ್ನೇ ಮೆಟ್ಟಿಲುಗಳಂತೆ ಉಪಯೋಗಿಸಿ, ಮೊತ್ತೊಮ್ಮೆ ಏಳಲೂ ಆಗಾದ ಹಾಗೆ , ತುಳಿದುಬಿಡುತ್ತಾರೆ ಅಲ್ಲವೇ!!!?? ಪ್ರೇರಣಾ ಕುಲಕರ್ಣಿ💙