Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Vijaya Bharathi

Abstract Inspirational Others

2  

Vijaya Bharathi

Abstract Inspirational Others

ಮಾನಸಿ

ಮಾನಸಿ

2 mins
134


ಮದುವೆಯಾದ ಐದೇ ವರ್ಷಗಳಲ್ಲಿ ಗಂಡನನ್ನು ಕಳೆದುಕೊಂಡ ಮಾನಸಿ,ಅವನ ವಂಶದ ಕುಡಿಯನ್ನು ಬೆಳೆಸುವ ಹೊಣೆ ಹೊರಬೇಕಾಯಿತು. ಮೂವತ್ತು ಮುಗಿಯುವ ಮೊದಲೇ ಅವಳ ದಾಂಪತ್ಯ ಜೀವನ ಮುದುಡಿ ಹೋಗಿತ್ತು. ಬಂದು ಬಾಂಧವರ ಸ್ನೇಹಿತರ ಕರುಣೆಯ ಮಾತುಗಳನ್ನು ಕೇಳಿ ಕೇಳಿ ಸಾಕಾಗಿ ಹೋಗಿದ್ದ ಅವಳು, ತನ್ನ ಹಾಗೂ ತನ್ನ ಎರಡು ವರ್ಷ ದ ಮಗುವಿನ ಮುಂದಿನ ಜೀವನಕ್ಕಾಗಿ, ಮಾನಸಿ ದೃಢ ಸಂಕಲ್ಪ ಮಾಡಿದಳು.

ಕಳೆದು ಹೋದ ತನ್ನ ಗಂಡನನ್ನು ಆದಷ್ಟು ಮರೆಯುವ ಪ್ರಯತ್ನ ಮಾಡಿದ ಮಾನಸಿ, ತನ್ನ ದು:ಖವನ್ನು ತನ್ನ ಒಳಗಡೆ ಇಟ್ಟು ಭದ್ರವಾಗಿ ಬೀಗ ಹಾಕಿ ,ಹೊರಗಡೆಯ ಸಮಾಜದ ಮುಂದೆ ನಗುನಗುತ್ತಾ ಇರಲು ಅಭ್ಯಾಸ ಮಾಡಿ ಕೊಂಡಳು. ಜೀವನದಲ್ಲಿ ತನ್ನಂತೆಯೇ ನೊಂದಿರುವ ಮಹಿಳೆಯರಿಗೆ ಶಕ್ತಿಯಾಗಿ ನಿಲ್ಲುವ ಪ್ರಯತ್ನ ಮಾಡಿದ ಅವಳು, "ಮಾನಸಿ ಸ್ತ್ರೀ ಶಕ್ತಿ" ಕೇಂದ್ರವನ್ನು ಸ್ಥಾಪಿಸಿ, ಅಸಹಾಯಕ ಮಹಿಳೆಯರ ಆತ್ಮ ವಿಶ್ವಾಸವನ್ನು ಬೆಳೆಸುತ್ತಾ, ಅವರಿಗೆ ಬದುಕುವ ದಾರಿಯನ್ನು ತೋರಿಸಿಕೊಡಲು ಪ್ರಾರಂಭಿಸಿದಳು. ಅವಳ ಸ್ತ್ರೀ ಶಕ್ತಿ ಕೇಂದ್ರದಲ್ಲಿ,ಅನಾಥ ಮಹಿಳೆಯರು, ಮತ್ತು ಮಕ್ಕಳನ್ನು ನೋಡಿಕೊಳ್ಳುವ ಸಾಮಾಜಿಕ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ತನ್ನ ನೋವನ್ನು ಮರೆಯುವ ಪ್ರಯತ್ನ ಮಾಡಿದಳು.


ತನಗೆ ಅನುಕಂಪದ ಆಧಾರದ ಮೇಲೆ ದೊರಕಿದ್ದ ತನ್ನ ಗಂಡನ ಕೆಲಸವನ್ನು ತಿರಸ್ಕರಿಸಿ ,ಈ ರೀತಿ ಸ್ವಯಂ ಸೇವಾ ಸಂಸ್ಥೆಯನ್ನು ಕಟ್ಟಿ ಬೆಳೆಸಲು ಹೋದಾಗ, ಇವಳ ಈ ಕೆಲಸಕ್ಕೆ ಮನೆಯವರಿಂದ ಪ್ರೋತ್ಸಾಹ ದೊರಕದಿದ್ದರೂ,ತಾನು ಮುಂದೆ ಇಟ್ಟ ಹೆಜ್ಜೆ ಯನ್ನು ಹಿಂತೆಗೆಯಲಿಲ್ಲ.ಅವಳ ಸಂಸ್ಥೆ ಪ್ರಾರಂಭಿಕ ಹಂತದಲ್ಲಿ ತುಂಬಾ ಕಷ್ಟ ಪಟ್ಟರೂ, ಒಂದೆರಡು ವರ್ಷ ಗಳಲ್ಲಿ ಅಭಿವೃದ್ಧಿ ಕಾಣತೊಡಗಿತು. ನಂತರ ತನ್ನ ಸಹಾಯಕ್ಕೆ ಒಂದಿಬ್ಬರು ಸಹಾಯಕರನ್ನು ನೇಮಕ ಮಾಡಿಕೊಂಡು, ಸಂಸ್ಥೆಯನ್ನು ಮುನ್ನಡೆಸಿದಳು.

ಈಗ ಅವಳು ಹುಟ್ಟು ಹಾಕಿದ ಸ್ತ್ರೀ ಶಕ್ತಿ ಕೇಂದ್ರ ಕ್ಕೆ ದಶಕದ ಸಂಭ್ರಮ. ಸುಮಾರು ನೂರು ಜನ ಮಹಿಳೆಯರ ಮತ್ತು ಐವತ್ತು ಅನಾಥ ಮಕ್ಕಳ ಆಶ್ರಯ ತಾಣವಾಗಿದೆ.


ಈಗ ಮಾನಸಿ ಆ ಸಂಸ್ಥೆಯ ಮುಖ್ಯಸ್ಥೆ ಯಾಗಿ ಎಲ್ಲರ ಅಚ್ಚುಮೆಚ್ಚಿನ "ಮಾನಸಿ ಮೇಡಂ".

ಎಲ್ಲರೊಂದಿಗೂ ನಗು ನಗುತ್ತಾ ಮಾತನಾಡಿ, ಎಲ್ಲರ ಕಷ್ಟಗಳಿಗೂ ಸ್ಪಂದಿಸಿ ಆದಷ್ಟು ಬೇಗ ಅವರ ಸಮಸ್ಯೆ ಗಳಿಗೆ ಪರಿಹಾರ ನೀಡುತ್ತಾ, ಎಲ್ಲರಲ್ಲೂ ಆತ್ಮವಿಶ್ವಾಸ ವನ್ನು ತುಂಬುತ್ತಾ, ಸದಾ ಸಕ್ರಿಯವಾಗಿರುವ ನಗುಮುಖದ ಮಾನಸಿಯನ್ನು ನೋಡಿದವರಿಗೆ ಆ ನಗುಮುಖದ ಹಿಂದಿರುವ ನೋವು ತಿಳಿಯುತ್ತಲೇ ಇರಲಿಲ್ಲ.

ತನ್ನ ನೋವನ್ನು ಒಳಗೇ ನುಂಗಿ ಕೊಂಡು ನಗುವನ್ನು ಮಾತ್ರ ತೋರಿಸುತ್ತಾ,ನೊಂದವರ ನೋವಿಗೆ ಧ್ವನಿಯಾಗಿ ನಿಂತ ಮಾನಸಿ, ಒಬ್ಬ ಮಾದರಿ ಮಹಿಳೆ ಎನಿಸಿದ್ದಳು.



Rate this content
Log in

Similar kannada story from Abstract