Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

B S Jagadeesha Chandra

Tragedy Inspirational

1  

B S Jagadeesha Chandra

Tragedy Inspirational

ಸ್ವಾವಲಂಬಿಗಳು

ಸ್ವಾವಲಂಬಿಗಳು

2 mins
3K


ಉಮಾ ಮತ್ತು ಶಂಕರ ಬಹಳ ಅನುಕೂಲಸ್ಥರು. ಒಳ್ಳೆಯ ಮನೆ ಕಟ್ಟಿದ್ದಾರೆ. ಇವರಿಗೆ ಇಬ್ಬರು ಗಂಡು ಮಕ್ಕಳು, ಒಬ್ಬ ಹೆಣ್ಣು ಮಗಳು ಮಕ್ಕಳನ್ನು ಚೆನ್ನಾಗಿ ಓದಿಸಿ ಮಾಡುವೆ ಮಾಡಿದ್ದಾರೆ. ಮಗಳು ಗಂಡನ ಜೊತೆಗೆ ಚೆನ್ನಾಗಿದ್ದು ಸುಖವಾಗಿರುವುದರಿಂದ ಅಪ್ಪ ಅಮ್ಮನನ್ನು ನೆನೆಯುತ್ತಿದ್ದುದು ಅಷ್ಟಕ್ಕಷ್ಟೇ. ಗಂಡು ಮಕ್ಕಳು ಮದುವೆಯಾದಮೇಲೆ ಈಗ ಹೊರದೇಶದಲ್ಲಿ ನೆಲಸಿದ್ದಾರೆ. ಅಪರೂಪಕ್ಕೊಮ್ಮೆ ತಂದೆ ತಾಯಿಯರನ್ನು ನೋಡಲು ಬರುತ್ತಾರೆ. ಬಂದರೂ ತಿಳಿಸಿ ಬರುವುದಿಲ್ಲ, ತಮ್ಮ ಹೆಂಡತಿಯರ ಮನೆಯಲ್ಲೇ ಉಳಿದುಕೊಂಡು ಒಮ್ಮೆ ಈ ಮನೆಗೆ ಬಂದು ಹಾಜರಾತಿ ಹಾಕಿ ಹೋಗಿಬಿಡುತ್ತಾರೆ.

ಉಮಾ, ಅವರಿಗೆ ಇದರಿಂದ ಬೇಸರ. ಶಂಕರ ಎಷ್ಟು ಹೇಳಿದರೂ ಕೇಳಲೊಲ್ಲರು. ಎಷ್ಟಾದರೂ ತಾಯಿ ಕರುಳು. ಮಕ್ಕಳಿಗೆ ಮಿಡಿಯುತ್ತದೆ ಆದರೆ ಮಕ್ಕಳು ಅದಕ್ಕೆ ಸ್ಪಂದಿಸಬೇಕಲ್ಲ. ಇದು ಉಮಾ ಅವರನ್ನು ಕೊರಗಿಸಿತ್ತು. ಆದರೆ ಶಂಕರ ಅವರು ಇದನ್ನು ಅರ್ಥ ಮಾಡಿಕೊಂಡು ತಾವು ಇಬ್ಬರೇ ಇರಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಮಕ್ಕಳು ನಮ್ಮನ್ನು ಕೇರ್ ಮಾಡದಿದ್ದರೆ ನಾವ್ಯಾಕೆ ಅವರಿಗೆ ಮಣೆ ಹಾಕಬೇಕು ಎಂದು ಇಂತಹ ವಿಷಯಗಳಿಗೆ ತಲೆಯನ್ನೇ ಕೆಡಿಸಿಕೊಳ್ಳುತ್ತಿರಲಿಲ್ಲ. ಮಕ್ಕಳಿಗೆ ಏನು ಮಾಡಬೇಕೋ ಅದೆಲ್ಲವನ್ನೂ ನಾವು ನಿಸ್ವಾರ್ಥದಿಂದ ಮಾಡಿದ್ದೇವೆ, ನಮ್ಮ ಕರ್ತವ್ಯದಲ್ಲಿ ಏನೂ ಲೋಪವಿಲ್ಲ ಎಂದು ಉಮಾ ಅವರಿಗೆ ಸಮಾಧಾನ ಹೇಳುತ್ತಿದ್ದರು. ಆಸ್ತಿಯನ್ನೂ ತಮಗೆ ಹೇಗೆ ಬೇಕೋ ಹಾಗೆ ಮಾಡಲು ಉಯಿಲು ಬರೆದಿಟ್ಟಿದ್ದರು. ಶಂಕರ ಅವರು ತಮ್ಮ ಮನೆಯನ್ನು ತಮ್ಮಿಬ್ಬರ ಮರಣದ ನಂತರ ಹಿರಿಯ ನಾಗರೀಕ ಸದನಕ್ಕೆ ಸೇರುವಂತೆ ಬರೆದಿಟ್ಟಿದ್ದರು. ಅದೇ ಹಿರಿಯ ನಾಗರೀಕ ಸೇವಾ ಸದನಕ್ಕೆ ತಮ್ಮ ಹೆಸರನ್ನು ನೋಂದಾಯಿಸಿ ತಮ್ಮ ಮರಣ ಮೊದಲಾದರೆ ಆಗ ಉಮಾ ಅವರನ್ನು ಹಿರಿಯ ನಾಗರೀಕ ಸದನದಲ್ಲಿ ನೋಡಿಕೊಳ್ಳುವಂತೆಯೂ ತಿಳಿಸಿದ್ದರು.

ಇತ್ತೀಚಿಗೆ ಶಂಕರ ಅವರಿಗೆ ಸ್ವಲ್ಪ ಹುಷಾರು ತಪ್ಪಿತ್ತು. ಶಂಕರ್ ಧೈರ್ಯವಾಗಿದ್ದರೂ ಉಮಾ ಅವರು ಮಕ್ಕಳಿಗ್ಗೆಲ್ಲಾ ತಿಳಿಸಿಬಿಟ್ಟಿದ್ದರು. ಆದರೂ ಒಬ್ಬರೂ ನೋಡಲು ಬರಲಿಲ್ಲ, ಫೋನ್ ಮೂಲಕವೇ ವಿಚಾರಿಸಿದ್ದರು. ಕೆಲವು ದಿನಗಳ ನಂತರ ಇಬ್ಬರು ಮಕ್ಕಳು, ಮಗಳು ಒಂದು ದಿನ ಒಟ್ಟಿಗೆ ನೋಡಲು ಬಂದರು. ಉಮಾ ಮತ್ತು ಶಂಕರ ಅವರಿಗೆ ಬಹಳವೇ ಆಶ್ಚರ್ಯ. ತಮಗೆ ತಿಳಿಸದೇ ಮೂವರೂ ಒಟ್ಟಿಗೆ ಬಂದಿದ್ದೀರಿ ಏನು ಸಮಾಚಾರ? ಎಂದರು. ಆಗ ಇಬ್ಬರು ಗಂಡು ಮಕ್ಕಳು ತಮ್ಮ ಪತ್ನಿಯ ಕಡೆಯ ಒಂದು ಕಾರ್ಯಕ್ರಮಕ್ಕೆ ಬರಲೇ ಬೇಕಾಯಿತು ಅದಕ್ಕೆ ಬಂದೆವು, ಅವರಮನೆಯಲ್ಲೇ ಇಳಿದು ಕೊಂಡಿದ್ದೇವೆ. ಅಪ್ಪನಿಗೂ ಮೈ ಹುಷಾರಿಲ್ಲವಲ್ಲ ಅದಕ್ಕೆ ಅವರನ್ನು ನೋಡಿಕೊಂಡು ಹಾಗೆಯೇ ಈ ಮನೆಯ ಅಸ್ತಿ ಕುರಿತು ಮಾತನಾಡಲು ಬಂದೆವು ಎಂದರು. ಆಗ ಶಂಕರ್ ಅವರು 'ಒಹೋ, ಹಾಗೋ  ಸಮಾಚಾರಾ? ಇಷ್ಟು ದಿನ ಅದು ಏಕೆ ಹೊಳೆಯಲಿಲ್ಲ, ನಾನು ಖಾಯಿಲೆ ಬಿದ್ದೆ, ಎಂದು ಗೊಟಕ್ ಎನ್ನುತ್ತೀನೋ, ಮನೆ ಯಾರ ಪಾಲಾಗುವುದೋ ಎಂದು ಹೆದರಿ ಬಂದಿರಾ?' ಎಂದಾಗ ಮೂವರೂ 'ಹಾಗೇನಿಲ್ಲ, ಮನೆಯ ಕೆಲಸಗಳು,ನಮ್ಮದೇ ಅದ ತಾಪತ್ರಯ ಇರುತ್ತಲ್ಲ ಹೀಗಾಗಿ ಬರಲು ಆಗಲಿಲ್ಲ' ಎಂದರು. ಆಗ ಶಂಕರ್, 'ನಿಮ್ಮ ಮನೆಗಳಲ್ಲಿ ನೀವೆಲ್ಲರೂ ಚೆನ್ನಾಗಿದ್ದೀರಿ ತಾನೇ?' ಎಂದರು. ಮೂವರೂ 'ಚೆನ್ನಾಗಿದ್ದೇವೆ, ಏನೂ ತೊಂದರೆ ಇಲ್ಲ' ಎಂದರು. ಶಂಕರ್ ಅವರು, 'ಹಾಗಾದರೆ ಸುಮ್ಮನೆ ನಿಮ್ಮ ಮನೆಗಳಿಗೆ ತೆರಳಿ, ನಾನಾಗಲೇ ಉಯಿಲು ಬರೆದಿಟ್ಟಿದ್ದೇನೆ ಅದರಂತೆ ಆಗುತ್ತದೆ' ಎಂದರು. 'ಆಸ್ತಿ ವಿಷಯದಲ್ಲಿ ಎಲ್ಲರೂ ಕಲೆತು ನಿರ್ಧರಿಸುವುದು ಒಳ್ಳೆಯದಲ್ಲವೇ?' ಎಂದು ಮಕ್ಕಳು ಹೇಳಿದಾಗ, 'ಆಸ್ತಿ ವಿಷಯಕ್ಕೆ  ಎಲ್ಲರೂ ಒಂದಾಗಿದ್ದೀರಿ, ನಾವು ಇಬ್ಬರೇ ಇಲ್ಲಿ ಒದ್ದಾಡುತ್ತಿದ್ದಾಗ ನಿಮಗೆ ನಿಮ್ಮ ತಾಪತ್ರಯವೇ ಹೆಚ್ಚಾಗಿತ್ತು, ಇದು ನಾನು ಮಾಡಿದ ಆಸ್ತಿ, ಹೇಗೆ ವಿಲೇವಾರಿ ಮಾಡಬೇಕು ಎಂಬುದು ನಿಮಗಿಂತ ನನಗೆ ಚೆನ್ನಾಗಿ ಗೊತ್ತು' ಎಂದು ನಿಷ್ಠುರವಾಗಿ ಅಂದು ಮೂವರನ್ನೂ ವಾಪಸ್ ಕಳಿಸಿದರು. ಉಮಾ ಅವರಿಗೆ ಮಕ್ಕಳ ಮೇಲೆ ಮಮತೆ, ಗಂಡನನ್ನು ಹಾಗೇಕೆ ನಿಷ್ಠುರವಾಗಿ ಅಂದಿರಿ ಎಂದು ಕೇಳಿದಾಗ, ಶಂಕರ್, 'ಅವರಿಗೆ ನಾವು ಬೇಕಿಲ್ಲ, ನಾವು ಮಾಡಿರುವ ಆಸ್ತಿ ಬೇಕು ಅಷ್ಟೇ, ನೀನು ಸುಮ್ಮನೆ ಇರು, ನಾವಿಬ್ಬರೇ ಹಿರಿಯ ಸೇವಾ ಸದನದಲ್ಲಿ ಹೋಗಿ ನೆಲಸಿ ಈ ಮನೆಯನ್ನು ನಮ್ಮಂತ ಇನ್ನಷ್ಟು ಹಿರಿಯರಿಗೆ ಉಡುಗೊರೆಯಾಗಿ ನೀಡೋಣ, ಇಂತಹ ಒಳ್ಳೆಯ ಕೆಲಸದಿಂದ ಅದೇನು ಪುಣ್ಯ ಬರುತ್ತದೋ ಬರಲಿ' ಎಂದರು. ಅವರು ಬರೆದ ಉಯಿಲು ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಮತ್ತೆ ಸಿದ್ಧವಾಯಿತು.

ಉಮಾ ಅವರಿಗೆ ಏನೂ ತೋಚಲಿಲ್ಲ. ಮನದಲ್ಲೇ ಕೊರಗಿದರೂ ಗಂಡನ ಹಿಂದೆ ನಡೆದು, ಹಿರಿಯ ಸೇವಾ ಸದನದಕ್ಕೆ ಹೋಗಿ ನೆಲಸಿದರು. ಅಲ್ಲಿ ತಮಗಿಂತಲೂ ವಯಸ್ಸಾದರೂ ಸಂತೋಷದಿಂದಿದ್ದ ಅನೇಕ ಹಿರಿಯರನ್ನು ನೋಡಿದಾಗ ಅವರ ಮನಸ್ಸು ಬದಲಾಯಿತು. ತಮ್ಮ ಗಂಡ ಎಂತಹ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಹೆಮ್ಮೆ ಪಟ್ಟುಕೊಂಡರು.

ಪ್ರೀತಿ ತೋರದ ಮಕ್ಕಳಿಗಿಂತ ಅಲ್ಲಿದ್ದ ಸಮವಯಸ್ಕರು ತಮ್ಮ ಮನೆಮಂದಿಯಂತೆ ಕಂಡಾಗ ಅವರಿಗಿದ್ದ ಬೇಸರ, ದುಃಖಗಳೆಲ್ಲ ಮಾಯವಾಗಿ ಮನಸ್ಸು ಉಲ್ಲಾಸಗೊಂಡಿತು. ಮಕ್ಕಳು ಗೂಡಿನಿಂದ ಗರಿಕೆದರಿ ಹಾರಿಹೋದ ಮರಿಹಕ್ಕಿಗಳಂತೆ ಕಂಡರು.



Rate this content
Log in

Similar kannada story from Tragedy