Exclusive FREE session on RIG VEDA for you, Register now!
Exclusive FREE session on RIG VEDA for you, Register now!

Prerana kulkarni

Abstract Inspirational Others


1  

Prerana kulkarni

Abstract Inspirational Others


ಸಿ.ಸಿ ಟಿವಿ...

ಸಿ.ಸಿ ಟಿವಿ...

2 mins 78 2 mins 78

ಅದೊಂದು ಮುಗಿಯುವ ಹಂತದಲ್ಲಿದ್ದ ಅಂಡರ್ ಕಂಟ್ರಕ್ಷನ್ ಬಿಲ್ಡಿಂಗ್...

ಆ ಕಟ್ಟಡಕ್ಕೆ ಬೇಕಾಗುವ ಕಬ್ಬಿಣದ ಸಾಮಗ್ರಿಗಳನ್ನು ಕೊಡಲು ಒಬ್ಬ ವ್ಯಕ್ತಿ ಅಲ್ಲಿಗೆ ಆಗಾಗ ಬರುತ್ತಿದ್ದ.


 ಒಮ್ಮೊಮ್ಮೆ ಬಿಲ್ಡಿಂಗ್ ತುಂಬಾ ಬೆಲೆಬಾಳುವ ಅನೇಕ ಸಾಮಗ್ರಿ ಹೇಗೆ ಬೇಕೋ ಬಿದ್ದಿರುತ್ತಿದ್ದವು..

 ಕೆಲಒಮ್ಮೆ ಮುಸ್ಸಂಜೆ ಹೊತ್ತಿನಲ್ಲಿ ಗೇಟ್ ಬಳಿ ತುಕುಡಿಸುತ್ತಾ ಕುಳಿತ ವಾಚ್ ಮೆನ್ ಬಿಟ್ಟರೇ ಮತ್ಯಾರು ಇರುತ್ತಿರಲಿಲ್ಲ.


ಒಮ್ಮೊಮ್ಮೆ ಅವನೂ ಕೂಡ ಹತ್ತಿರದ ಗೂಡಂಗಡಿಯಲ್ಲಿ ಬಿಡಿ ಸೇದುತ್ತಾ,ಟೀ ಕುಡಿಯುತ್ತಾ ಹರಟೆ ಹೊಡೆಯುತ್ತಾ ಕುಳಿತಿರುತ್ತಿದ್ದ...


ಇವನನ್ನು ನೋಡುತ್ತಲೇ...!!

 ಗೇಟ್ ಓಪನ್ ಇದೆ...ಸಾಮಾನು ಹಾಕಿ , ರಿಜಿಸ್ಟರ್ ನಲ್ಲಿ ಸಹಿ ಮಾಡಿ ಹೋಗು ಅಂತ ಕುಳಿತಲ್ಲೇ ಕೂಗಿಬಿಡುತ್ತಿದ್ದ ಕೂಡಾ...


ಹೇಗೂ ಇಲ್ಲಿ ಯಾರೂ ಇಲ್ಲ . ಇಷ್ಟೊಂದು ರಾಶಿ ಬಿದ್ದಿವೆ . ಇದರಲ್ಲಿ ಒಂದೆರಡು ಸಾಮಾನು ಕಡಿಮೆಯಾದರೆ ಯಾರಿಗೂ ಗೊತ್ತಾಗೋದು ಇಲ್ಲ ಒಂದಿಷ್ಟು ಎತ್ತಿಕೊಂಡು ಹೋಗಿ ಬಿಡಲೇ?? ನಜಿಮ್ ಚಾಚಾನ ಅಂಗಡಿಯಲ್ಲಿ ಮಾರಿದರೂ ಕಡಿಮೆ ಅಂದ್ರೂ ಐದು ಸಾವಿರ ಆದ್ರೂ ಕೈಗೆ ಸಿಕ್ಕುತ್ತವೆ.ಮನೆಯ ಯಾವುದಾದರೂ ಖರ್ಚಿಗೆ  ಆಗುತ್ತದೆ ಅಂತ ಅಲೋಚನೆಯೂ ಬರುತ್ತಿತ್ತು ಅವನಿಗೆ.


ಆದ್ರೆ ಮೊತ್ತೊಂದು ಕ್ಷಣದಲ್ಲಿ, ಗೋಡೆಗಳ ಮೇಲೆ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಬರೆದಿರುವ...


"you have ander absorvestion of CCTV "

ಅಂತ ಬರೆದಿದ್ದು ಕಾಣಿಸುತ್ತಿತ್ತು...

ಇಂಗ್ಲೀಷ್ ನ ಎಲ್ಲಾ ಪದಗಳು ಅರ್ಥವಾಗದಿದ್ದರೂ,  ಇಲ್ಲಿ c.c tv ಗಳು ಅಡಿಗಡಿಗೆ ಇವೆ ಅಂತ ಮಾತ್ರ ಅವನಿಗೆ ತಿಳಿಯುತ್ತಿತ್ತು.

ಹಾಗಾಗಿ ಆ ಸಾಮಾನುಗಳನ್ನು ಆಸೆ ಕಣ್ಣುಗಳಿಂದ ನೋಡುತ್ತಾ ಸುಮ್ಮನೆ ಹೊರಟು ಹೋಗುತ್ತಿದ್ದ ಪ್ರತಿಬಾರಿಯೂ..


ಒಮ್ಮೆ ಸಂಜೆಯ ಸಮಯದಲ್ಲಿ ಮೆನ್ ಗೇಟ್ ಬಳಿ ಇರುವಾಗಲೇ ಬಂದಿದ್ದ. ಇಷ್ಟು ತಿಂಗಳುಗಳಿಂದ ವಾಚ್ಮೆನ್ ಜೊತೆಯ ಒಡನಾಟದಿಂದ ಅವರಿಬ್ಬರಲ್ಲಿ

 ಒಂದು ರೀತಿಯ ಆತ್ಮೀಯತೆಯೂ ಉಂಟಾಗಿತ್ತು.

ಅದಕ್ಕೆ ಅಂದು ತಾನು ತಂದಿದ್ದ ಸಾಮಾನು ಗಳನ್ನು ಅನ್ ಲೋಡ್ ಮಾಡಿದ ಮೇಲೆ,

"ಅಣ್ಣಾ ಲೋಟ ಟೀ ಕುಡಿದು ಬರೋಣ ಬಾ "

ಎಂದು ಕರೆದಿದ್ದ.

ಆದ್ರೆ ವಾಚ್ ಮೆನ್  

"ಆಯ್ಯೋ..!!ಇವತ್ತು ಮಾತ್ರ ಬೇಡ ಮಾರಾಯಾ!!

ಅದೆಷ್ಟೋ ತಿಂಗಳುಗಳಿಂದ ಈ ಬಿಲ್ಡಿಂಗ್ ನಲ್ಲಿರೋ ಕೆಲವು ಸಿ.ಸಿ ಟಿವಿಗಳು ಹಾಳಾಗಿದ್ದವು. 

ಅಷ್ಟು ದಿನಗಳಿಂದ ಮಾಲೀಕರಿಗೆ ಹೇಳುತ್ತಿದ್ದೆ. ಇಲ್ಲೆನಾದ್ರೂ ಸಾಮಾನು ಕಳುವಾದ್ರೆ ನನ್ನ ತಲೆಗೆ ಬರುತ್ತೆ. ಅವನ್ನ ಮೊದಲು ರಿಪೇರಿ ಮಾಡಿಸಿ,ಇಲ್ಲ ಹೊಸದನ್ನು ಹಾಕಿಸಿ ಅಂತ.ಆದ್ರೆ ಅವರು ಮಾತ್ರ ಕಿವಿಗೇ ಹಾಕ್ಕೋತ್ತಿರಲಿಲ್ಲ. 

"ನಿನ್ನನ್ನ ಗೇಟ್ ಬಳಿ ಕೂಡಿಸಿ ಸಂಬಳ ಕೊಡುವದು ಇಲ್ಲಿ ಕುಳಿತುಕೊಂಡು ತೂಕಡಿಸಲು ಅಲ್ಲ.ಮೊದಲು ನೀನು ಸರಿಯಾಗಿ ಡ್ಯೂಟಿ ಮಾಡು. ಮೊದಲೆಲ್ಲ ಈ ಸಿ.ಸಿ ಟಿವಿ ಇದ್ದುವಾ??ಆಗಲೂ ಬಿಲ್ಡಿಂಗ್ ಕೆಲಸ ನಡೆಯುತ್ತಿತ್ತು ಅಲ್ವಾ??ನನಗೆ ಹೇಳಲು ಬರಬೇಡ "

ಅಂತೆಲ್ಲ ನನಗೆ ದಬಾಯಿಸುತ್ತಿದ್ದರು.

ಅಷ್ಟೊಂದು  ಸಾರಿ ಹೇಳಿದಾಗ, ಇವತ್ತು ಸಿ.ಸಿ ಟಿವಿ ರಿಪೇರಿಗೆ ಬರುತ್ತಿದ್ದಾರೆ ಅಂತ ಮಾಲೀಕರು ಇದೇ ಈಗ ಫೋನ್ ಮಾಡಿದ್ದಾರೆ.....

ಈಗ ನಾನಿಲ್ಲಿ ಇರದಿದ್ರೆ ಬಂದವರು ಮಾಲೀಕರಿಗೆ ನಾನಿಲ್ಲ ಗೇಟ್ ಹತ್ತಿರ ಅಂತ ಫೋನ್ ಮಾಡಿ ಹೇಳಿದ್ರೆ ನನ್ನ ನೌಕರಿಗೆ ಕುತ್ತು..ಇನ್ನೊಮ್ಮೆ ಕುಡಿಯೋಣ ಬಿಡು"

ಎಂದು ಆ ವಾಚ್ಮೆನ್ ಹೇಳುವಷ್ಟರಲ್ಲಿ ,

ಸಿ. ಸಿ ಟೀವಿ ಕೂಡಿಸುವರ ವ್ಯಾನ್ ಬಂದು ನಿಂತಿತ್ತು.ಇಬ್ಬರು ಹುಡುಗರು ವ್ಯಾನ್ ದಿಂದ ಕೆಳಗೆ ಇಳಿದು ತಮ್ಮ ಪರಿಕರಗಳನ್ನು ಹೊತ್ತಿಕೊಂಡು 

ಗೇಟ್ ಬಳಿಯೇ ಬಂದಿದ್ದರು....


ಆ ಸಾಮಾನು ಕೊಡುವ ವ್ಯಕ್ತಿ , ಮನಸ್ಸಿನಲ್ಲೇ ಅಲ್ಲಿದ್ದ ಸಿ.ಸಿ ಟಿವಿಗಳಿಗೆ ಬೈಯುತ್ತಾ ,ತನ್ನ ಹಣೆಬರಹವನ್ನು ಶಪಿಸುತ್ತಾ ಗೇಟ್ ಹೊರಗೆ ನಿಲ್ಲಿಸಿದ್ದ ತನ್ನ ಗಾಡಿಯ ಕಡೆಗೆ ಮೌನವಾಗಿ ನಡೆದಿದ್ದ....


ಪ್ರೇರಣಾ ಕುಲಕರ್ಣಿ💙


Rate this content
Log in

More kannada story from Prerana kulkarni

Similar kannada story from Abstract