Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Vijaya Bharathi

Abstract Classics Others

2  

Vijaya Bharathi

Abstract Classics Others

ಬಿನ್ನಹ

ಬಿನ್ನಹ

1 min
108


ಇದೋ ನನ್ನ ಬಿನ್ನಹ ನಿನಗೆ

ಮುದದಿ ಆಲಿಸೈ ಹೇ ದೇವಾ

ಆದರಿಸಿ ಕೇಳ್ವೆನೊಂದು ವರವ

ಸಾದರದಿ ನೀಡುವುದೆನಗೆ

ಭೂದೇವಿ ಕಂಪಿಸುತಿಹಳು

ನಿರ್ದಯದಿ ಸಾಯುತಿಹರು ಜನರು

ಮರ್ಧಿಸುತ ಕೆಟ್ಟ ಕರೋನಕೀಟಗಳ

ಉದ್ಧರಿಸಿ ಕಾಯ್ವುದು ಜನಪದರ

ರೋಸಿಹೋಗುತಿಹರು ಜನರು

ಉಸಿರಾಟ ನಿಲ್ಲುತಿಹುದು ಕ್ಷಣಕ್ಷಣವೂ

ಬಸಿದು ಹೋಗುತಿದೆ ಹಣವು

ಕುಸಿದು ಹೋಗುತಿದೆ ಬದುಕು

ಕಾಣದ ಕೀಟಾಣುಗಳ ಆರ್ಭಟ

ರಣಭೇರಿ ಬಡಿತ ಕಿವಿಗಡಚಿಕ್ಕುತಿದೆ

ಹೆಣಗಳ ಸರದಿ ಬೆಳೆಯುತಿದೆ

ಹಣವು ನರ್ತಿಸುತಿದೆ ಕುರುಡಾಗಿ

ಹೈರಾಣವಾಗುತಿದೆ ಬದುಕು

ಪುರದ ಜನರ ದಿಕ್ಕೆಡಿಸಿದೆ

ಅರಿಯದಾಗಿದೆ ಭವಿತವ್ಯ

ದಾರಿ ತೋರೆನಗೆ ಹೇ ದೇವಾ


Rate this content
Log in

Similar kannada poem from Abstract