murali nath

Abstract Classics Inspirational

4  

murali nath

Abstract Classics Inspirational

ವಿಚಿತ್ರ ಆದರೆ ನಿಜ

ವಿಚಿತ್ರ ಆದರೆ ನಿಜ

1 min
30



ಅಮೆರಿಕಾದಲ್ಲಿನ ಮಿಯಾಮಿ ಬೀಚ್ ನಲ್ಲಿ ಒಮ್ಮೆ ನಡೆದ ಘಟನೆ. ಭಾನುವಾರ ಅಲ್ಲಿ ಬರುವ ಜನಸಂಖ್ಯೆ ಹೆಚ್ಚು ಬಂದವರೆಲ್ಲಾ ಐಸ್ ಕ್ರೀಂ ಸವಿಯದೆ ಹೋಗುವವರು ಬಹಳ ವಿರಳ . ಹೀಗಾಗಿ ಐಸ್ ಕ್ರೀಂ ತಿಂದಮೇಲೆ ಕಪ್ ಗಳನ್ನ ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದರು. ಸೋಮವಾರ ಬಂದರೆ ಕಾರ್ಪೊರೇಷನ್ ಕೆಲಸಗಾರರಿಗೆ ತಲೆನೋವು. ಬಹಳ ಜನ ಇದೇ ಕಾರಣಕ್ಕೆ ಸೋಮವಾರ ರಜೆ ಹಾಕಿ ಬಿಡುತ್ತಿದ್ದರು.ಕೊನೆಗೆ ಅಧಿಕಾರಿಗಳೆಲ್ಲಾ ಸೇರಿ ಇದಕ್ಕೊಂದು ಪರಿಹಾರ ಹುಡುಕಲು ಮೀಟಿಂಗ್ ಕರೆದರು.


ಅಲ್ಲಲ್ಲಿ use me ಬಾಕ್ಸ್ ಗಳನ್ನ ಇಡುವುದು, ಅಲ್ಲಲ್ಲಿ ದೊಡ್ಡ ಬೋರ್ಡ್ ಗಳನ್ನ ಬರೆಸಿ ಹಾಕುವುದು, ದಂಡ ಹಾಕುವುದೂ, ಹೀಗೆ ಹಲವಾರು ಸಲಹೆಗಳು ಬಂದವು.ವಯಸ್ಸಾದ ಸದಸ್ಯರೊಬ್ಬರು ಕೋಪಗೊಂಡು ಇದೆಲ್ಲಾ ಪ್ರಯೋಜನವಾಗದು. ಯಾರು ತಿಂತಾರೋ ಅವರ ಬಾಯಲ್ಲೇ ಕಪ್ ಗಳನ್ನೂ ತುರುಕಿ ತಿನ್ನೋಹಾಗೆ ಶಿಕ್ಷೆ ಕೊಟ್ಟರೆ ಇತರರಿಗೆ ಬುದ್ದಿ ಬರಬಹುದು ಅಂದರಂತೆ.  . ಆ ಸಭೆಯಲ್ಲೆ ಇದ್ದ ಬುಧ್ಧಿ ವಂತನೊಬ್ಬ ಇದನ್ನೇ ಸಲಹೆಯಂತೆ ತೆಗೆದುಕೊಂಡು wafer cone ಮಾಡಲು ಅದೇ ಇಂದು ಪ್ರಪಂಚಾದ್ಯಂತ ಪರಿಸರ ಸ್ನೇಹಿ ಯಾಗಿ ಹೆಸರುವಾಸಿಯಾಗಿದೆ ಎಂದರೆ ನಂಬುತ್ತೀರಾ?



Rate this content
Log in

Similar kannada story from Abstract