Read a tale of endurance, will & a daring fight against Covid. Click here for "The Stalwarts" by Soni Shalini.
Read a tale of endurance, will & a daring fight against Covid. Click here for "The Stalwarts" by Soni Shalini.

murali nath

Classics Inspirational Others

3.1  

murali nath

Classics Inspirational Others

ತಿರುವು

ತಿರುವು

2 mins
23


ಹಲವು ವರ್ಷಗಳ ಕೆಳಗೆ ಒಬ್ಬ 9th srandard ವಿದ್ಯಾರ್ಥಿ ಒಂದು ವಾರ ಪತ್ರಿಕೆಗೆ ಕಥೆ ಬರೆದು ಅವರ ತಂದೆಯ ಹತ್ತಿರ ಐದು ರೂಪಾಯಿ ಪಡೆದು ಯಾರಿಗೂ ಹೇಳದೆ ಪೋಸ್ಟ್ ಮಾಡಿದ. ಅವನ ದುರಾದೃಷ್ಟಕ್ಕೆ ಅದು ಪ್ರಕಟವಾಗದೆ ಅವನು ಕೊಟ್ಟಿದ್ದ ಶಾಲೆಯ ವಿಳಾಸಕ್ಕೆಹಿಂದಿರುಗಿ ಬಂತು. ಶಾಲೆಯ ಮುಖ್ಯೋಪಾಧ್ಯಾಯರುಬಾಲಕನನ್ನು ಕರೆಸಿ ಅವರ ಮುಂದೆಯೇ ಅದನ್ನ ತೆಗೆದು

ಪತ್ರವನ್ನು ಓದಲು ಹೇಳಿದರು. ಅವನು ಓದಿದಾಗ ಕಥೆ ಯ ಬಗ್ಗೆ ಮೆಚ್ಚುಗೆ ಸೂಚಿಸಿ ಸಣ್ಣ ಸಣ್ಣ ವ್ಯಾಕರಣ ತಪ್ಪುಗಳನ್ನ ತಿದ್ದಿ ಮತ್ತೆ ಕಳುಹಿಸಲು ಹೇಳಿದರು. ಮಧ್ಯಾನ್ಹ ಇದು ಇವನ ಕ್ಲಾಸ್ ಟೀಚರ್ ಗೆ ತಿಳಿದು ಆ ಕಥೆಯನ್ನ ಮತ್ತೆ ಅವರ ಮುಂದೆ ಓದಲು ಹೇಳಿದರು. ಓದುವವರೆಗೂ ಸುಮ್ಮನಿದ್ದು ಕಿವಿಯನ್ನು ಚೆನ್ನಾಗಿ ಹಿಂಡಿ ಕಥೆಗಾರ ಆಗಕ್ಕೆ ನೋಡ್ತಿದಿಯ. ಕ್ಲಾಸಿನಲ್ಲಿ ನಾನು ಪಾಠ ಮಾಡ್ತಿದ್ರೆ ನೀನು ಕಥೆ ಬಗ್ಗೆ ಯೋಚನೆ ಮಾಡ್ತಾ ಇರೋ ಹಾಗಿದೆ ಅಂತ ಬಾಯಿಗೆ ಬಂದ ಹಾಗೆ ಬೈದರು. ಪಾಪ ಆ ಬಾಲಕನಿಗೆ ಎಲ್ಲರ ಮುಂದೆ ಅವಮಾನ ವಾಯ್ತು. ಏಕೆ ಹೀಗೆ ಆ ಬಾಲಕನನ್ನು ಹೀಯಾಳಿಸದರೋ ತಿಳಿಯಲಿಲ್ಲ. ಅಂತೂ ಮಾರನೇದಿನ ಮತ್ತೆ ಆ ಪತ್ರವನ್ನ ಪೋಸ್ಟ್ ಮಾಡಿ ಮರೆತುಬಿಟ್ಟಿದ್ದ.ಅಂದಿನಿಂದ ಮತ್ತೆ ಕಥೆ ಬರೆಯುವ ಆಸೆ ಕೈಬಿಟ್ಟಿದ್ದ . ಒಂದು ದಿನ ಇವನ ಕಥೆ ಪ್ರಕಟವಾಗಿ ಮುಖ್ಯೋಪಾಧ್ಯಾ ಯರು ಅದನ್ನ ನೊಟೀಸ್ ಬೋರ್ಡ್ನಲ್ಲಿ ಹಾಕಿದರು.

ಇಡೀ ಶಾಲೆಯಲ್ಲಿ ಅಂದು ಈ ಬಾಲಕನದೇ ಮಾತು.ಅಂದು ಬೈದ ಕ್ಲಾಸ್ ಟೀಚರ್ ಇವನು ತರಗತಿಗೆ ಬಂದತಕ್ಷಣ ಎದ್ದುನಿಂತು ಚಪ್ಪಾಳೆ ತಟ್ಟಿ , ಎಲ್ಲರೂ ನೋಡಿ ದೊಡ್ಡ ಕಥೆಗಾರರು ಬರ್ತಿದ್ದಾರೆ ಅಂತ ವ್ಯಂಗ್ಯ ವಾಗಿ ಮಾತನಾಡಿದರು. ಆ ಬಾಲಕ ಮಾತ್ರ ಏನು ಮಾತನಾಡದೆಸುಮ್ಮನೆ ಕುಳಿತ. ಅವರ ಈ ರೀತಿಯ ಹಿಯಾಳಿಕೆಗೆ ಕಾರಣ ಮಾತ್ರ ಯಾರಿಗೂ ತಿಳಿಯಲಿಲ್ಲ.

ಹಲವು ವರ್ಷಗಳ ನಂತರ ಇದೇ ಕ್ಲಾಸ್ ಟೀಚರ್ ವಿದ್ಯಾರ್ಥಿಗಳನ್ನು ಕರೆದುಕೊಂಡು ಆಕಾಶವಾಣಿ ನಿಲಯ ವೀಕ್ಷಣೆಗೆ ಹೋಗಬೇಕಾಗಿ ಬಂತು. ಹೊರಗಡೆ reception ನಲ್ಲಿ ಕಾಯುತ್ತಿದ್ದಾಗ ನಿಲಯದ ನಿರ್ದೇಶಕರ ಅನುಮತಿ ಬೇಕೆಂದು ಸ್ವಲ್ಪ ಸಮಯ ಕಾಯಲು ಹೇಳಿದರು . ಹದಿನೈದು ನಿಮಿಷ ಕಾದಮೇಲೆನಿರ್ದೇಶಕರು ಬಂದಿದ್ದಾರೆ. ನೀವೇ ಹೋಗಿ ಇದಕ್ಕೊಂದು ಸೈನ್ ಮಾಡಿಸಿಕೊಂಡು ಬನ್ನಿ ಅಂತ ಫಾರ್ಮ್ ಕೊಟ್ಟರು.ಅವರ chamber ಒಳಗೆ ಹೋಗಿ ಕುಳಿತುಕೊಂಡರು.ನಿರ್ದೇಶಕರು ಹೇಳಿದರು , ಸಾರ್ ನಾನು ಇದೇ ಶಾಲೆಯಲ್ಲಿ ಓದಿದ್ದು ಎಂದಾಗ ಇವರಿಗೆ ಹಳೆಯದೆಲ್ಲ ಜ್ಞಾಪಕ ಬಂತು.ಈ ನಿರ್ದೇಶಕರು ಮತ್ತಾರೂ ಅಲ್ಲ ಇವರು ಅಂದು ಕೆಟ್ಟದಾಗಿ ಹೀಯಾಳಿಸಿ ಅವಮಾನಿಸಿದ್ದ ಬಾಲಕ .ಎದ್ದು ನಿಂತು ಗುರುಗಳ ಕಾಲಿಗೆ ನಮಸ್ಕಾರ ಮಾಡಿದ. ಗುರುಗಳಿಗೆ ಮಾತ್ರ ಏನೂ ಮಾತ ನಾಡಲಾಗಲಿಲ್ಲ. ವಂದಿಸಿ ಅಲ್ಲಿಂದ ಹೊರಟರು.( ಈಗ ನಿವೃತ್ತರಾಗಿ ಉತ್ತಮ ಭಾಷಣಕಾರರಾಗಿ ಮನೆಮನೆಗೆ ತಲುಪಿರುವ ಇವರ ನುಡಿಮುತ್ತುಗಳು ತಮಿಳು ನಾಡಿನಾದ್ಯಂತ ಹರಿದಾಡುತ್ತವೆ. ಇವರ ಶ್ರೀ ತೆಂಕಾಚಿ ಸ್ವಾಮಿನಾಥನ್)


  Rate this content
Log in

More kannada story from murali nath

Similar kannada story from Classics