nagavara murali

Classics Inspirational Others

2  

nagavara murali

Classics Inspirational Others

ತಾನೇ ಬಂದ ಮಹಾಲಕ್ಷ್ಮಿ

ತಾನೇ ಬಂದ ಮಹಾಲಕ್ಷ್ಮಿ

3 mins
115



ಒಂಟಿಕೊಪ್ಪಲಿನ ಘನಪಾಠಿ ಶ್ರೀನಿವಾಸ ಶಾಸ್ತ್ರಿಗಳ ಹೆಸರು ಒಂದು ಕಾಲಕ್ಕೆ ಚಿರುಪರಿಚಿತ. ಕಾರಣ ಇವರಿಗೆ ಸಂತಾನ ವಿಲ್ಲದಿದ್ದರೂ ಇವರ ಮನೆಯಲ್ಲಿ ನೂರಾರು ಬಡ ವಿಧ್ಯಾರ್ಥಿಗಳು ಸಂಸ್ಕೃತ ,ವೇದಪಾಠ ಕಲಿತು ವಿಧ್ವಾಂಸರಾಗಿಯೇ ಹೊರಬರುತ್ತಿದ್ದರು.


ಹೀಗೆ ಬಂದ ವಿಧ್ಯಾರ್ಥಿಗಳಲ್ಲಿ ತುಮಕೂರಿನಿಂದ ಬಂದಿದ್ದ ನಾರಾಯಣ ಒಬ್ಬ ಅನಾಥ ಬಾಲಕ. ಉಳಿದ ಎಲ್ಲರಿ ಗಿಂತಲೂ ಸೂಕ್ಷ್ಮ ಮತಿಯಾಗಿದ್ದ. ಇದು ಅವನು ಬಂದ ಕೆಲವೇ ದಿನಗಳಲ್ಲಿ ಶಾಸ್ತ್ರಿಗಳ ಗಮನಕ್ಕೆ ಬಂತು. ಅವರ ಹೆಂಡತಿ ಸುಬ್ಬಲಕ್ಷ್ಮಿ ಯನ್ನ ಕರೆದು ಇವನ ಕಡೆ ಒಂದು ಗುಲಗಂಜಿಯಷ್ಟಾದರೂ ನಾವು ಹೆಚ್ಚು ಗಮನ ಕೊಡೋ ಣವೆಂದರು. ಅಂದಿನಿಂದ ಅವರಿಬ್ಬರಿಗೂ ಬಹಳ ಹತ್ತಿರ ವಾದ ನಾರಾಯಣ. ಅಡುಗೆ ಮನೆ ಕೆಲಸ ದಿಂದ ಶಾಸ್ತ್ರಿಗ ಳ ಬೇಕು ಬೇಡಗಳ ಎಲ್ಲಾ ಕೆಲಸಗಳಲ್ಲೂ ಇವನ ಸಹಾ ಯವಿಲ್ಲದೇ ಯಾವುದೂ ಅಸಾಧ್ಯ ಅನ್ನು ವಂತಾಗಿ ತಮ್ಮ ಮಗ ನಂತೆಯೇ ಬೆಳೆದು ದೊಡ್ಡವನಾದ . ಇವನಿ ಗೆ ವೇದಪಾಠ ಸಂಸ್ಕೃತ ಇವೆರಡರ ಬದಲು ವೇದಗಣಿತ ದಲ್ಲಿ ಹೆಚ್ಚು ಆಸಕ್ತಿ ಇದ್ದ ಕಾರಣ ಶಾಸ್ತ್ರಿಗಳು ಪ್ರತ್ಯೇಕ ವಾಗಿ ಅದನ್ನೇ ಹೇಳಿಕೊಡುತ್ತಿದ್ದರು. ಗಣಿತ ನಾರಾಯ ಣನಿಗೆ ಕರಗತವಾಗಿ ಅಂಕಿಗಳೊಂದಿಗೆ ಲೀಲಾ ಜಾಲವಾ ಗಿ ಆಟ ವಾಡುತ್ತಿದ್ದ. 


ಇವರ ಮನೆಗೆ ಬಹಳ ವರ್ಷಗಳಿಂದ ಒಬ್ಬ ಯೂಸುಫ್ ಅನ್ನೋ ಮುಸ್ಲಿಂ ವ್ರುದ್ದ ನೊಬ್ಬ ಚಿಂತಾಮಣಿಯಿಂದ ಹತ್ತಿ, ಹುಣಿಸೇ ಹಣ್ಣು ಸೀಗೇಕಾಯಿ ಬೆಲ್ಲ ಹೀಗೆ ಹಲ ವಾರು ಒಂದು ವರ್ಷಕ್ಕಾಗುವಷ್ಟು ದಿನಬಳಕೆ ವಸ್ತು ಗಳನ್ನ ತಂದು ಕೊಡುತ್ತಿದ್ದ. ಹಾಗಾಗಿ ಬೇರೇ ಸಮುದಾ ಯವಾದರೂ ಇವರ ಕುಟುಂಬಕ್ಕೆ ಬಹಳ ಹತ್ತರವಾಗಿದ್ದ.


ನಾರಾಯಣನ ಬಗ್ಗೆ ಯೂಸುಫ್ ಗೂ ಹೆಮ್ಮೆ. ಒಂದು ದಿನ ಶಾಸ್ತ್ರಿಗಳಿಗೆ ಎದೆ ನೋವು ಕಾಣಿಸಿಕೊಂಡು ಆಸ್ಪ ತ್ರೆ ಸೇರಬಾಕಾಯ್ತು. ಒಂದು ವಾರದ ನಂತರ ಡಾಕ್ಟರ್ ಬೇಡವೆಂದರೂ ಕೇಳದೆ ಮನೆಗೆ ಬಂದಿ ದ್ದರು .ನಾರಾಯ ಣನ ಕೈ ಹಿಡಿದು ಏನೋ ಹೇಳಕ್ಕೆ ಪ್ರಯತ್ನ ಮಾಡಿ ಆಗದೇ ಕೊನೇ ಉಸಿರೆಳೆದರು .ಮನೆಯಲ್ಲಿದ್ದ ಮಕ್ಕಳಿ ಗೆ ತಮ್ಮ ತಮ್ಮ ಮನೆಗಳಿಗೆ ಹೋಗಲು ಹೇಳಿ ಮನೆ ಜವಾಬ್ದಾರಿ ನಾರಾಯಣ ತಾನೇ ಹೊತ್ತು ಕೊಂಡ . ಆರು ತಿಂಗಳು ಹೇಗೋ ಕಳೆಯಿತು. ನಂತರದ ದಿನಗಳಲ್ಲಿ ಇವರಿಬ್ಬರ ಜೀವನಕ್ಕೆ ಬೇರೆ ದಾರಿ ಹುಡುಕುತ್ತಿದ್ದಾಗ ಯೂಸುಫ್ ಸಹಾಯಕ್ಕೆ ಬಂದು ನೀವು ಲೆಕ್ಕದಲ್ಲಿ ಗಟ್ಟಿಗರಿದ್ದೀರಿ ನಮ್ಮ ಸೋದರ ಮಾವನ ಒಂದು ಮಂಡಿ ಇದೆ ,ಲಕ್ಷಾಂತರ ರೂಪಾಯಿ ವ್ಯವಹಾರ. ಅವರಿಗೆ ನಂಬಿಕೆಯ ಮನುಷ್ಯರೊಬ್ಬರು ಬೇಕಿದೆ. ನೀವು ಆ ಕೆಲಸಕ್ಕೆ ಸರಿಯಾದವರು ಅಂತ ಹೇಳಿ ಕರೆದು ಕೊಂಡು ಹೋದ.


ಸುಮಾರು ಐದು ವರ್ಷಗಳ ನಂತರ ಮದುವೆ ಆಯಿತು.ಮಕ್ಕಳು ಆಯ್ತು. ಸುಬ್ಬಲಕ್ಷ್ಮಿ ಯವರನ್ನ ತಾಯಿಗಿಂತ ಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ. ಈ ಐದು ವರ್ಷಗಳಲ್ಲಿ ಆ ಮಂಡಿಯ ಎಲ್ಲಾ ವ್ಯವಹಾರವೂ ತಿಳಿದುಕೊಂಡಿದ್ದ. ಒಂದು ದಿನ ರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ಯಾ ರೋ ಬಾಗಿಲು ತಟ್ಟುವ ಶಬ್ದ ಕೇಳಿ ಹೆದರಿದ. ಮನೆಯಲ್ಲಿ ಉಳಿದವರೆಲ್ಲಾ ಮಲಗಿದ್ದರು.ನಾರಾಯಣ ಮಾತ್ರ ಎದ್ದು ಬಂದು ಮೆಲ್ಲಗೆ ಬಾಗಿಲ ಸಂಧಿಯಲ್ಲಿ ನೋಡಿದ . ಆಶ್ಚರ್ಯವಾಯ್ತು ಇವನ ಲೆಕ್ಕ ಬರೆಯುವ ಮಂಡಿ ಯಜಮಾನ ರಝಾಕ್ ಒಂದು ದೊಡ್ಡ ಗೋಣಿ ಚೀಲದಲ್ಲಿ ಏನೋ ತಂದಿರುವುದು ಕಂಡು ಬಾಗಿಲು ತೆಗೆದ. ರಝಾಕ್ ಬಹಳ ಹೆದರಿದವನಂತೆ ಕಾಣುತ್ತಿತ್ತು.


ಗೂಳಿಯಂತೆ ಒಳಗೆ ನುಗ್ಗಿ ಬಾಗಿಲು ಮುಚ್ಚಿ, ಮೆಲುಧನಿ ಯಲ್ಲಿ ಇದು ಕ್ಯಾಶ್ .ನನ್ನ ಮಂಡಿ , ಮನೆ ನಾಳೆ ರೇಡ್ ಮಾಡುವ ಸೂಚನೆ ಸಿಕ್ಕಿದೆ. ನಿನ್ನ ನಂಬಿ ಇದನ್ನು ತಂದೆ. ಭದ್ರವಾಗಿ ಇಟ್ಟಿರು. ನಿಮ್ಮ ಮನೆಯವರಿಗೂ ತಿಳಿಯದೇ ಇದ್ದರೆ ಒಳ್ಳೆಯದು ಅಂತ ಗಡಿಬಡಿ ಯಲ್ಲಿ ಹೊರಟೇ ಹೋದ .ಅಟ್ಟದ ಮೇಲೆ ಶಾಸ್ತ್ರಿಗಳ ಕಾಲದ ಹಳೆಯ ಪುಸ್ತಕ ಮತ್ತು ಹಳೆಯ ಪಾತ್ರೆಗಳ ಜೊತೆ ಇದನ್ನೂ ಇಟ್ಟ.


ಇಡೀ ರಾತ್ರಿ ನಿದ್ದೆ ಇಲ್ಲ.


ಯಾರೊ ಸುಳ್ಳು ಮಾಹಿತಿ ಕೊಟ್ಟಿದ್ದರು ಅಂತ ಕಾಣುತ್ತೆ .ಮಂಡಿ ಯಾಗಲೀ ಮನೆಯಾಗಲೀ ರೈಡ್ ಆಗಲಿಲ್ಲ. ಆದರೆ ಮದುವೆ ಆಗಿ ಒಂದೇ ವರ್ಷ ವಾಗಿದ್ದ ರಝಾಕ್ ಗೆ ಆರೋಗ್ಯ ಕೈ ಕೊಟ್ಟು ಆಸ್ಪತ್ರೆ ಸೇರಿದ. ಕರುಳು ಆಪರೇಷನ್ ಮಾಡಿದರು. ಮೂರು ದಿನದ ನಂತರ ಡಿಸ್ಚಾರ್ಜ್ ಆಗಬೇಕಿತ್ತು. ಆದರೆ ಏನಾಯ್ತೋ 

ಆ ದಿನ ರಾತ್ರಿ ಹಾರ್ಟ್ ಅಟಾಕ್ ಆಗಿ ಪ್ರಾಣ ಹೋಯ್ತು.


ನಾರಾಯಣನಿಗೆ ಏನು ಮಾಡಬೇಕೆಂದೇ ತಿಳಿಯಲಿಲ್ಲ.ಮಂಡಿ ಮುಂದುವರೆಸುವುದು ಕಷ್ಟವಾಯ್ತು. ರಝಾಕ್ ಕಡೆಯವರೆಲ್ಲಾ ಸೇರಿ ನಾರಾಯಣ ಮಂಡಿ ನಡೆಸಿ ಕೊಂಡು ಹೋಗಲಿ ನಾವೆಲ್ಲಾ ಸಹಾಯ ಮಾಡೋಣ ಅಂತ ಒಂದು ನಿರ್ಧಾರಕ್ಕೆ ಬಂದರು.ಅದು ರಝಾಕ್ ನ ಹೆಂಡತಿಗೆ ಸಹಾಯ ಮಾಡುವ ಉದ್ದೇಶವಾಗಿತ್ತು.. ಅವರ ಸಹಕಾರ ಇವನ ಬುಧ್ಧಿ ವಂತಿಕೆ ಉಳಿದೆಲ್ಲ ಮಂಡಿಗಳಿಗಿಂತಲೂ ಚನ್ನಾಗಿ ನಡೆಯುತ್ತಿತ್ತು.


ಒಂದು ದಿನ ರಝಾಕ್ ನ ಹೆಂಡತಿ ಬಂದು ನಾರಾಯಣ, ನಮ್ಮ ಮನೆಯವರು ಮನೇಲಿದ್ದ ಇಪ್ಪತ್ತು ಲಕ್ಷ ಕ್ಯಾಶ್ ನ ಒಂದು ದಿನ ರಾತ್ರಿ ಅವರ ಸ್ನೇಹಿತನ ಮನೆಯಲ್ಲಿ ಇಟ್ಟು ಬರ್ತೀನಿ ಅಂತ ತೆಗೆದು ಕೊಂಡು ಹೋದರು. ಆದರೆ ಯಾರೂ ಅಂತ ಅವರೂ ಹೇಳಲಿಲ್ಲ ನಾನೂ ಕೇಳಲಿಲ್ಲ. ನಿನಗೇನಾದರೂ ಗೊತ್ತಾ ಅಂದಾಗ ನಾರಾಯಣ ಸಂಧಿಗ್ಧ ಸ್ಥಿತಿ ಯಲ್ಲಿ ಸಿಕ್ಕಿ ಹಾಕಿಕೊಂಡ. ಅವರ ಎಲ್ಲಾ ಸ್ನೇಹಿತರೂ ನನಗೆ ಪರಿಚಯ ಇದ್ದಾರೆ ವಿಚಾರ ಮಾಡ್ತೀನಿ. ಅವರು ಯಾರೂ ಮೋಸ ಮಾಡಲ್ಲ ಅಂತ ಹೇಳಿ ಯೋಚಿಸಲು ಸಮಯ ತೆಗೆದುಕೊಂಡ .


ಮನೆಗೆ ಬಂದು ಹೆಂಡತಿ ಮಕ್ಕಳನ್ನು ಉಪಾಯದಿಂದ ಊರಿಗೆ (ಅವರ ಅಜ್ಜಿ ಮನೆಗೆ) ಕಳುಹಿಸಿ ,ಅಟ್ಟ ಹತ್ತಿ ಚೀಲ ಕೆಳಗೆ ಇಳಿಸಿ ಬಿಚ್ಚಿ ನೊಡಿದ. ಹಣದ ಜೊತೆ ಕೆಲವು ಕಾಗದ ಪತ್ರ ಗಳೂ ಇತ್ತು. ಒಂದು ಕಾಗದ ಮಾತ್ರ ಉರ್ದು ಭಾಷೆ ಯಲ್ಲಿ ಇತ್ತು. ಅದನ್ನು ಮಾತ್ರ ತೆಗೆದುಕೊಂಡು ಯಾರಿಂದಲಾದರೂ ಓದಿಸಿ ತಿಳಿದು ಕೊಳ್ಳುವ ಕುತೂಹಲ. ಮಾರನೆ ದಿನ ಇವನ ಮಂಡಿಗೆ ಬರುವ ಒಬ್ಬ ವಯಸ್ಸಾ ದ ಮೌಲ್ವಿಗೆ ಕೊಟ್ಟು ಓದಲು ಹೇಳಿದ. ಓದಿ ಹೇ ಅಲ್ಲಾ ಇದು ಎಲ್ಲಿ ಸಿಕ್ತು ನಿನಗೆ ಅಂತ ಕೇಳಿದ . ನಾರಾಯಣ ಹೆದರಿ ಇಲ್ಲೇ ಈ ಬೀರುವಿನಲ್ಲಿ ಇತ್ತು ಅಂದ. ಸುಳ್ಳು ಹೇಳಬೇಡ. ಈ ವಿಷಯ ತಿಳಿದರೆ ನಿನ್ನನ್ನ ಕೊಚ್ಚಿ ಹಾಕಿ ಬಿಡ್ತಾರೆ ಅಂದಾಗ ಬೇರೆ ವಿಧಿ ಇಲ್ಲದೆ ಅವರ ಕಾಲಿಗೆ ಬಿದ್ದು ನಿಜ ಹೇಳಿದ.


ಹತ್ತೇ ನಿಮಿಷದಲ್ಲಿ ರಝಾಕ್ ಹೆಂಡತಿಯೂ ಅಲ್ಲಿಗೆ ಬಂದು ನಾರಾಯಣ ನಿನ್ನಷ್ಟು ಒಳ್ಳೆಯವರು ಈ ಪ್ರಪಂಚದಲ್ಲಿ ಇದ್ದಾರೆ ಅನ್ನೋದು ಆಶ್ಚರ್ಯ. ನಿನ್ನೆ ಬಂದು ಕೇಳಿದೆ ಇವತ್ತು ಆಗಲೇ ಕಂಡು ಹಿಡಿದು ಬಿಟ್ಟಿದಾನೆ ಅಂತ ಅವಳಿಗೆ ಫೋನ್ ಮಾಡಿ ಕರೆಸಿದ ವ್ರುದ್ದರಿಗೆ ಹೇಳಿದಳು. (ಇವನನ್ನು ಉಳಿಸಲು ಆ ಕಾಗದ ಹರಿದು ಹಾಕಿದ್ದರು) ತಕ್ಷಣ ಮೂರು ಜನರೂ ನಾರಾಯ ಣ ನ ಮನೆಗೆ ಬಂದು ಆ ಚೀಲವನ್ನು ಯಾರಿಗೂ ತಿಳಿಯ ದ ಹಾಗೆ ತೆಗೆದು ಕೊಂಡು ಹೋದರು. ನಾರಾಯಣನಿಗೆ ಅದರಲ್ಲಿ ಒಂದು ಕಾಸೂ ಕೊಡಲಿಲ್ಲ ಬಹಳ ನೊಂದು ಕೊಂಡ.


ಒಂದು ವಾರದ ನಂತರ ರಝಾಕ್ ನ ಹೆಂಡತಿ ಮತ್ತು ಅವಳ ಅಣ್ಣ ಬಂದು ಅದರಲ್ಲಿದ್ದ ಪತ್ರಗಳನ್ನ ಕೊಟ್ಟು ಹೇಳಿದರು. ಅದರಲ್ಲಿ ನಿನಗೆ ಹತ್ತು ಲಕ್ಷ ಕೊಡಬೇ ಕೆಂದಿದ್ದೆ. ನನ್ನ ಅಣ್ಣ ತಡೆದು ಹಣ ಖರ್ಚು ಆಗಿ ಹೋಗುತ್ತೆ. ಅವನ ನಿಯತ್ತಿಗೆ ಶ್ರೀ ರಂಗಪಟ್ಟ ಣದ ಹತ್ತು ಎಕರೆ ಗದ್ದೆ, ಬೆಂಗಳೂರಿನಲ್ಲಿ ರುವ ಎರಡು ಸೈಟು ಕೊಡು ಅಂದ ತಕ್ಷಣ ನಿನ್ನ ಹೆಸರಿಗೆ ಬರೆಸಿ ತಂದಿದೀನಿ ನಾಳೆ ರಿಜಿಸ್ಟ್ರಾರ್ ಕಛೇರಿಗೆ ಹೋಗಬೇಕು ಎಂದಾಗ ಇವನಿಗೆ ಮಾತೇ ಹೊರಡದಾಯ್ತು.


 


Rate this content
Log in

Similar kannada story from Classics