Shridevi Patil

Tragedy Inspirational Others

4  

Shridevi Patil

Tragedy Inspirational Others

ಸುಳ್ಳಿನ ಸೌಧದೊಳಗೆ

ಸುಳ್ಳಿನ ಸೌಧದೊಳಗೆ

2 mins
229


ಅನ್ವಿತಾ ಹಾಗೂ ಸಮನ್ವಿತಾ ಪ್ರಭು ಹಾಗೂ ಶೈಲಜಾ ಇವರ ಮುದ್ದಿನ ಅವಳಿ ಹೆಣ್ಣು ಮಕ್ಕಳು. ಇಬ್ಬರು ಹೆಣ್ಣು ಮಕ್ಕಳನ್ನು ಯಾವ ಗಂಡಿಗೂ ಕಮ್ಮಿ ಇರದ ಹಾಗೆ ಬೆಳೆಸಬೇಕೆಂಬ ಆಸೆ ಹೊತ್ತವರು ಪ್ರಭು ಹಾಗೂ ಶೈಲಜಾ. ಹತ್ತಿ ಮಿಲ್ ಒಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಪ್ರಭು ತನಗೆ ಸಂಬಳವಾಗಿ ಬರುತ್ತಿದ್ದ ಹಣವನ್ನೆಲ್ಲ ಶೈಲಜಾ ಕೈಗಿಡುತ್ತಿದ್ದ. ಶೈಲಜಾ ತುಂಬಾ ಅಚ್ಚುಕಟ್ಟಾಗಿ , ಹಿತಮಿತವಾಗಿ ಅದರಲ್ಲೂ ಅನವಶ್ಯಕವಾಗಿ ಹಣವನ್ನು ಯಾವುದಕ್ಕೂ ಬಳಸದೇ ಸಂಸಾರವನ್ನು ನಿಭಾಯಿಸಿಕೊಂಡು ಹೋಗುತ್ತಿದಳು. ಇವರ ಮಕ್ಕಳೆಂದರೆ ಕೇಳಬೇಕಾ? ಅನ್ವಿತಾ ಹಾಗೂ ಸಮಾನ್ವಿತಾ ಇಬ್ಬರೂ ಚೆನ್ನಾಗಿ ಓದುತ್ತ, ಅಷ್ಟೇ ಉತ್ತಮ ನಯ ವಿನಯದಿಂದ ಎಲ್ಲರಿಗೂ ಇಷ್ಟವಾಗುತ್ತಿದ್ದರು.


ಶೈಲಜಾ ಅಂತೂ ತಮಗೆ ಇರುವುದು ಬರೀ ಹೆಣ್ಣು ಮಕ್ಕಳೇ , ಅವರಿಗೆ ಕಾವಲಾಗಿ ನಾನು ಹಾಗೂ ಪ್ರಭು ಎಲ್ಲ ಕಡೆಯೂ ಜೊತೆಯಾಗಿ ಇರಲು ಆಗುವುದಿಲ್ಲ ಎಂದು ಕರಾಟೆ ತರಬೇತಿ ಕೊಡಿಸಿದ್ದಳು. ಎಷ್ಟು ಸಾಧ್ಯವೋ ಅಷ್ಟು ಅವರಿಬ್ಬರನ್ನು ಗಟ್ಟಿಯಾಗಿ ಬೆಳೆಸಲು ಪ್ರಯತ್ನ ಮಾಡಿದ್ದಳು. ಈ ಸಮಾಜದಲ್ಲಿ ನಡೆಯುವ ಲೈಂಗಿಕ ಅತ್ಯಾಚಾರ ಕಂಡು ಭಯಭೀತಳಾಗಿದ್ದ ಶೈಲಜಾ ಮಕ್ಕಳಿಗೆ ಸ್ವಯಂ ರಕ್ಷಣೆಯ ತರಬೇತಿ ಕೊಡಿಸಿದ್ದಳು. ತಮ್ಮನ್ನು ತಾವು ಯಾವ ಸಮಯದಲ್ಲಿ ಬೇಕಾದರೂ ಕಾಪಾಡಿಕೊಳ್ಳುತ್ತಾರೆ ಎನ್ನುವ ಸಣ್ಣ ಧೈರ್ಯ ಶೈಲಜಾಳಿಗೆ.


ಆದರೆ, ಶೈಲಜಾ ಸುಳ್ಳಿನ ಸೌಧ ಕಟ್ಟುವವರ ವಿರುದ್ಧ ತರಬೇತಿ ಕೊಡಿಸಲು ಮರೆತಿದ್ದಳು ಅನಿಸುತ್ತೆ. ಯಾಕೆಂದರೆ ಕೇವಲ ಅತ್ಯಾಚಾರ , ವಂಚನೆ ಇವುಗಳಷ್ಟೇ ಕೆಟ್ಟದ್ದು ಈ ಸುಳ್ಳಿನ ಸೌಧ ಕಟ್ಟುವುದು. ಹೌದು ಕೆಲವರಂತೂ ಸುಳ್ಳು ಹೇಳುತ್ತಲೇ ಮಹಲು ಕಟ್ಟಿ ಬಿಡುತ್ತಾರೆ. ಕಣ್ಣಿಗೆ ಕಟ್ಟುವಷ್ಟು ಹೇಳಿದಾಗ ಎಂತವರಾದರೂ ನಂಬಲೇ ಬೇಕಲ್ಲ. ಇಲ್ಲಿಯೂ ಸಹ ಹಾಗೆ ಆಯಿತು. ಅನ್ವಿತಾ ಹಾಗೂ ಸಮನ್ವಿತಾ ಕಾಲೇಜಲ್ಲಿ ಓದುತ್ತಿರುವಾಗ ಅಕ್ಕ ತಂಗಿಯರಿಬ್ಬರೂ ಯಾರಿಗೂ ಮೊದಲೆರಡು ಸ್ಥಾನಗಳನ್ನು ಬಿಟ್ಟು ಕೊಡುತ್ತಿರಲಿಲ್ಲ. ಅಕ್ಕ ತಂಗಿ ಇಬ್ಬರು ಒಬ್ಬರಿಗೊಬ್ಬರು ಆತ್ಮೀಯರಾಗಿ ಇರುತ್ತಿದ್ದರು. ಜೊತೆಯಾಗಿಯೇ ಇರುತ್ತಿದ್ದರು. ಆದರೂ ಸಮನ್ವಿತಾ ಯಾವಾಗ ರಾಕಿಯ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳೋ ಗೊತ್ತಿಲ್ಲ. ಸ್ವತಃ ಒಡಹುಟ್ಟಿದವಳಿಗೆ, ಸದಾ ಜೊತೆಯಿರುವವಳಿಗೂ ಗೊತ್ತಾಗದಂತೆ ಗುಟ್ಟಾಗಿಟ್ಟಿದ್ದಳು. ರಾಕಿ ಒಬ್ಬ ಶ್ರೀಮಂತರ ಮನೆಯ ಮಗ. ಆತನೊಬ್ಬ ಹುಡುಗಿಯರ ಶೋಕಿಲಾಲಾ. ಹಣದ ಮದದಿಂದ ಎಲ್ಲವನ್ನು ತೆಗೆದುಕೊಳ್ಳುಬಹುದು ಎನ್ನುವ ಸೊಕ್ಕು ತುಂಬಿ ತುಳುಕುತ್ತಿದ್ದ ಕೆಟ್ಟ , ಹೊಲಸು ವ್ಯಕ್ತಿತ್ವದ ಹುಡುಗ. ಆತ ಹೇಳುತ್ತಿದ್ದ ಪ್ರತಿಯೊಂದು ಸುಳ್ಳನ್ನು ನಂಬುತ್ತಿದ್ದ ಸಮಾನ್ವಿತಾ ಪ್ರಾಯಶಃ ಆತನ ಸುಳ್ಳಿನ ಸೌಧದ ಬಲೆಯಲ್ಲಿ ಬಿದ್ದಿದ್ದಳು.


ಆತನ ಒಂದೊಂದು ಸುಳ್ಳಿನ ಮಾತು ಸಮನ್ವಿತಾಳನ್ನು ಆತನ ಹತ್ತಿರಕ್ಕೆ ಕರೆದೊಯ್ಯುತ್ತಿತ್ತು. ಹೀಗಾಗಿ ಆ ಸುಳ್ಳಿನ ಸೌಧದೊಳಗೆ ಆ ಸುಳ್ಳು ಪೂರ್ಕಿ ರಾಕಿಗೆ ತನ್ನನ್ನು ತಾನು ಸಂಪೂರ್ಣವಾಗಿ ಅರ್ಪಿಸಿಕೊಂಡು ಆಗಿತ್ತು. ಯಾವಾಗ ಒಂದು ಬಾರಿ ಆಕೆಯನ್ನು ಅನುಭವಿಸಿದನೋ ಆಮೇಲೆ ಅವಳನ್ನು ದೂರ ಮಾಡಲು ಪ್ರಯತ್ನಿಸಿದ. ಅದು ಸ್ವಲ್ಪ ಸ್ವಲ್ಪವಾಗಿ

ಸಮನ್ವಿತಾಳಿಗೆ ಗೊತ್ತಾಗಲು ಶುರುವಾಯಿತು. ತನ್ನ ಪೆದ್ದುತನಕ್ಕೆ, ತನಗಾದ ಮೋಸಕ್ಕೆ ಒಬ್ಬಳೇ ಕಣ್ಣೀರು ಹಾಕಿದಳು. ಆದರೆ ಆ ಕಣ್ಣೀರಿಗೆ ಬೆಲೆ ಇರಲಿಲ್ಲ.


ಅಷ್ಟರಲ್ಲಿ ಅವಳು ಗರ್ಭಿಣಿ ಆಗಿದ್ದಳು. ರಾಕಿಯ ಹತ್ತಿರ ಈ ವಿಷಯ ತಿಳಿಸಿದಾಗ ಆತನ ಹೊಲಸು, ಸುಳ್ಳು ಮಾತುಗಳು ಆಕೆಯನ್ನು ನೇಣಿಗೆ ಶರಣಾಗುವಂತೆ ಮಾಡಿದ್ದವು. ಆದರೆ ಮನೆಯವರಿಗೆ ಮಾತ್ರ ಮಗಳ ಆತ್ಮಹತ್ಯೆಯ ಕಾರಣ ತಿಳಿಯಲು ವರುಷಗಳು ಕಳೆದವು. ಕಾರಣ ಹಣದ ಬಲ, ಅಧಿಕಾರದ ಬಲ.



ಹೀಗೆ ಸುಳ್ಳಿನ ಸೌಧ ಒಂದು ಹೆಣ್ಣಿನ ಜೀವ ತೆಗೆದುಕೊಳ್ಳುವ ಮಟ್ಟಿಗೆ ಹೋಯಿತೆಂದು ಹೇಳಲು ತುಂಬಾ ದುಃಖವಾಗುತ್ತದೆ.


Rate this content
Log in

Similar kannada story from Tragedy