Kalpana Nath

Tragedy Others

3  

Kalpana Nath

Tragedy Others

ಸುಳಿ

ಸುಳಿ

3 mins
25


ಒಂದು ಮಧ್ಯಮ ವರ್ಗದ ಕುಟುಂಬ. ಮನೆ ಯಜಮಾನರ ಹೆಸರು ರಾಮಚಂದ್ರಯ್ಯ. ರಾಜ್ಯ ಸರ್ಕಾರದ ಒಳ್ಳೆಯ ನೌಕರಿ .ಮಡದಿ ಹೆಸರು ಜಯಶ್ರೀ. ಹನುಮಂತ , ಭೀಮಣ್ಣ ಇಬ್ಬರು ಗಂಡು ಮಕ್ಕಳು ಮತ್ತು ಮಾಲತಿ ಸರಸ್ವತಿ ಅಂತ ಇಬ್ಬರು ಹೆಣ್ಣು ಮಕ್ಕಳು. 

ನಿವೃತ್ತಿಯ ನಂತರ ಕೂಡಿಸಿಟ್ಟ ಹಣದಲ್ಲಿ ಒಂದು ಮನೆ ಮಾಡಿಕೊಂಡರು. ತಂದೆಗೆ ಹಿರಿಯ ಮಗ ಹನುಮಂತನನ್ನ ಕಂಡರೆ ಅದೇನೋ ಪ್ರೀತಿ. ಜೊತೆಗೆ ಬುದ್ದಿವಂತ ಅಂತ ಓದಿಸಿದರು. ನಿವೃತ್ತಿಯಾದಮೇಲೆ ಮಕ್ಕಳ ಜವಾಬ್ದಾರಿ ತಮ್ಮ ಮೇಲೆ ಇದ್ದ ಕಾರಣ ಎರಡನೇ ಮಗ ಭೀಮಣ್ಣ ನೊಂದಿಗೆ ಒಂದು Type writing institute ಓಪನ್ ಮಾಡಿದರು. ಆ ಊರಲ್ಲಿ ಇವರದೇ ಮೊಟ್ಟಮೊದಲ institute . ಚೆನ್ನಾಗಿ ನಡೀತಿತ್ತು. ಅಷ್ಟರಲ್ಲಿ ಹೆಂಡತಿ ಜಯಶ್ರೀ ಹಾಸಿಗೆ ಹಿಡಿದು ಎರಡೇ ತಿಂಗಳಲ್ಲಿ ತೀರಿಕೊಂಡಳು . Type writing institute ನಿಂದ ಹಣ ಹೆಸರು ಗಳಿಸಬಹುದೆಂಬ ಆಸೆ ಹೊತ್ತಾಗ ಮಡದಿ ಅಗಲಿದ್ದು ರಾಮಚಂದ್ರಯ್ಯ ನವರಿಗೆ ದೊಡ್ಡ ಆಘಾತ. ಈ ಸ್ಥಿತಿಯಲ್ಲಿ ಸಂಸಾರ ನಿಭಾಯಿಸಲು ಮತ್ತೊಂದು ಮದುವೆ ಅನಿವಾರ್ಯವೆಂದು ಸ್ನೇಹತರ ಒತ್ತಾಯದ ಮೇಲೆ ಒಪ್ಪಿ,, ತಂದೆ ಇಲ್ಲದ ಒಬ್ಬ ಬಡವರ ಮನೆ ಹುಡುಗಿ ಲಕ್ಷ್ಮಿಯನ್ನು ಮದುವೆಯಾದರು. ಲಕ್ಷ್ಮೀಗೆ ಒಬ್ಬಳು ತಂಗಿ ಇಬ್ಬರು ತಮ್ಮಂದಿರು. ತಂದೆ ಚಿಕ್ಕವಯಸ್ಸಲ್ಲೇ ತೀರಿಕೊಂಡಿದ್ದರಿಂದ ತಾಯಿ ತಮ್ಮ ಪರಿಚಯದ ಮನೆಗಳಲ್ಲಿ ಅಡುಗೆ ಕೆಲಸ ಮಾಡಿ ಕಷ್ಟಪಟ್ಟು ಮಕ್ಕಳನ್ನ ಸಾಕುತ್ತಿದ್ದರು. ಲಕ್ಷ್ಮಿಗೆ ಮದುವೆಯಾದಾಗ ರಾಮಚಂದ್ರಯ್ಯನವರ ಹಿರಿ ಮಗ ಹನುಮಂತನ ವಯಸ್ಸು. ಮೊದಲ ಹೆಂಡತಿಯ ನಾಲ್ಕು ಮಕ್ಕಳನ್ನ ತನ್ನ ಮಕ್ಕಳಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಲಕ್ಷ್ಮೀ ಯನ್ನ ಕಂಡು ತಾವು ತಪ್ಪು ಮಾಡಿಲ್ಲವೆಂದು ಸ್ವಲ್ಪ ನೆಮ್ಮದಿ ಆಯ್ತು. . ಹಿರಿಯ ಮಗ ಹೆಚ್ಚಿನ ವ್ಯಾಸಂಗಕ್ಕಾಗಿ ಮಂಗಳೂರಿಗೆ ಹೋಗುತ್ತೇನೆಂದ . ಕೆಲವೇ ವರ್ಷಗಳಲ್ಲಿ ಅಲ್ಲೇ ಒಂದು ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿ ಕೆಲಸವೂ ದೊರೆತಾಗ ಸ್ವರ್ಗಕ್ಕೆ ಮೂರೇ ಗೇಣು ಅನಿಸಿತು ತಂದೆಗೆ . ಮಗನಿಗೆ ಒಳ್ಳೆಯ ಹೆಣ್ಣು ತಂದು ಭರ್ಜರಿಯಾಗಿ ಮದುವೆ ಮಾಡಬೇಕೆಂದು ಯೋಚನೆಯಲ್ಲಿದ್ದಾಗ ಒಂದು ದಿನ ಮಗನಿಂದ ಒಂದು ಪತ್ರ ಬಂತು. ಅದೇ ಕಾಲೇಜ್ ನಲ್ಲಿ ಓದುತ್ತಿರುವ ಒಂದು ಹುಡುಗಿಯನ್ನ ಮದುವೆ ಆಗುವುದಾಗಿ ಮಗ ಬರೆದಿದ್ದು ಅತಿಯಾಗಿ ನಂಬಿದ್ದ ತಂದೆಗೆ ಆಘಾತವಾಯ್ತು. ಅದರಿಂದ ಹೊರಬರಲಾಗದೆ . ಕೆಲವೇ ದಿನಗಳಲ್ಲಿ ತೀವ್ರ ಹೃದಯಾಘಾತ ವಾಗಿ ತೀರಿಕೊಂಡರು. 

  ಎರಡನೇ ಹೆಂಡತಿ ಲಕ್ಷ್ಮೀಗೂ ರಾಮ ಲಕ್ಷ್ಮಣ ಎರಡು ಗಂಡು ಮಕ್ಕಳು , ಕಪಿಲ ಕಾವೇರಿ ನರ್ಮದಾ ಅಂತ ಮೂರು ಹೆಣ್ಣು ಮಕ್ಕಳಾಗಿತ್ತು. ಆದರೂ ಎಲ್ಲ ಮಕ್ಕಳನ್ನೂ ತನ್ನ ಮಕ್ಕಳೆಂದೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು. ಹಿರಿಯಮಗಳು ಮಾಲತಿಯ ಮದುವೆ ನಿಶ್ಚಯವಾಗಿತ್ತು. ಮದುವೆ ತಯಾರಿ ನಡೆಯುತ್ತಿದ್ದ ಸಮಯದಲ್ಲೇ ಪತಿ ತೀರಿಕೊಂಡಿದ್ದು ಹೊರಗಿನ ವ್ಯವಹಾರ ಏನೂ ಅರಿಯದ ಮುಗ್ದ ಲಕ್ಷ್ಮಿಯ ತಲೆಮೇಲೆ ಬಿತ್ತು. ತಂದೆ ತೀರಿಕೊಂಡ ವಿಷಯ ತಿಳಿದು ಮಂಗಳೂರಿಂದ ಆ ಹುಡುಗಿಯನ್ನೂ ಜೊತೆಗೆ ಕರೆದುಕೊಂಡು ಬಂದಿದ್ದು ಮನೆಯಲ್ಲಿ ಯಾರಿಗೂ ಇಷ್ಟವಾಗಲಿಲ್ಲ. ಆದಿನ ಸಂಜೆ ವರೆಗೂ ಇದ್ದು ಉಳಿದ ತಂದೆಯ ಕಾರ್ಯವನ್ನು ತಮ್ಮನಿಗೆ ಮಾಡಲು ಹೇಳಿ ಹೊರಟೇ ಬಿಟ್ಟ ಹನುಮಂತ. 


ಅಂದಿನಿಂದ ಬರೀ ಪತ್ರ ವ್ಯವಹಾರ ಮಾತ್ರ. ಮನೆಗೆ ಬಂದಿದ್ದು ಒಂದು ವರ್ಷದ ನಂತರವೇ. Institute ವ್ಯವಹಾರಕ್ಕೆ ಲಕ್ಷ್ಮಿಯ ಹಿರಿಯ ಮಗ ರಾಮನನ್ನ ಓದು ನಿಲ್ಲಿಸಿ ಸಹಾಯಮಾಡುವಂತೆ ಹೇಳಿದರು. ಇಬ್ಬರೇ ಹೇಗೋ ವ್ಯವಹಾರ ನಿಭಾಯಿಸುತ್ತಿದ್ದರು. ಭೀಮ ಮತ್ತು ರಾಮ ಇಬ್ಬರೇ ನಿಂತು ಅಕ್ಕ ಮಾಲತಿ ಮದುವೆಯನ್ನೂ ಮಾಡಿದರು. ಅಷ್ಟರಲ್ಲಿ ಸರಸ್ವತಿ ಮದುವೆಗೂ ಕಾಲ ಕೂಡಿಬಂದಿದ್ದು ಸಾಲ ಮಾಡಿ ಅವಳ ಮದುವೆಯನ್ನೂ ತಮ್ಮಂದಿರೇ ಮಾಡಿದರು. ಹನುಮಂತ ಮಾತ್ರ ಎರಡೂ ಮದುವೆಗಳಿಗೆ ಹೊರಗಿನವರು ಬಂದಂತೆ ತಾಯಿಯ ( ಮಲತಾಯಿ )ಬಲವಂತಕ್ಕೆ ಬಂದು ಒಂದು ದಿನ ಇದ್ದು ಹೆಂಡತಿ ಜೊತೆ ಹೊರಟೇ ಹೋದ. 


ಭೀಮನನ್ನ ಮದುವೆ ಮಾಡಿಕೊಳ್ಳಲು ಎಷ್ಟು ಹೇಳಿದರು ಬೇಡವೆಂದೇ ಹೇಳುತ್ತಿದ್ದ.ರಾಮ ಲಕ್ಷ್ಮಣರ (ಲಕ್ಷ್ಮಿಯ ಮಕ್ಕಳು )ಮದುವೆಯಾಗುವವರೆಗೂ ತಾನು ಮಾಡಿಕೊಳ್ಳಲ್ಲವೆಂದು ನಿರ್ಧಾರ ತೆಗೆದುಕೊಂಡಿದ್ದ. ಆಗ ಹೊಸದಾಗಿ ಕಂಪ್ಯೂಟರ್ ಗಳು ಬರುತ್ತಿದ್ದ ಕಾಲ. ಆ ಊರಿನಲ್ಲಿ ಈಗಾಗಲೇ ಐದಾರು type writing institute ಗಳಲ್ಲಿ ಒಂದೋ ಎರಡೋ PC ಗಳನ್ನು ತಂದು ಜನಗಳನ್ನು ಆಕರ್ಷಿಸಿದ್ದರು. ಹೀಗಾಗಿ ಇಲ್ಲಿಗೆ ಬರುವವರು ದಿನದಿನಕ್ಕೂ ಕಡಿಮೆ ಆಗಿ ಕೊನೆಗೆ ನಿರ್ವಹಣೆ ಬಹಳ ಕಷ್ಟವಾಯ್ತು. ಆಗಲೇ ಎರಡೂ ಮದುವೆಗೆ ಸಾಕಷ್ಟು ಸಾಲ ಮಾಡಿದ್ದರು. ಹಳೆಯ type writer ಗಳನ್ನೇ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಭೀಮ ಮತ್ತು ರಾಮ ಕಪಿಲಳಿಗೆ ಒಳ್ಳೆಯ ಸಂಭಂದ ಬಂದ ಕಾರಣ ಹೇಗಾದರೂ ಮಾಡಿ ಮದುವೆ ಮಾಡಿ ಬಿಡೋಣವೆಂದು ಲಕ್ಷ್ಮಿಗೆ ಹೇಳಿ ನಿಶ್ಚಯಿಸಿ ಸಾಧಾರಣ ವಾಗಿಯೇ ಮದುವೆ ಮಾಡಿದರು. ಅಷ್ಟು ಹೊತ್ತಿಗೆ ತಮ್ಮ ಲಕ್ಷ್ಮಣ ನ ಓದು ಮುಗಿದಿತ್ತು. ಅವನಿಗೂ ಒಂದು ಬ್ಯಾಂಕ್ ನಲ್ಲಿ ನೌಕರಿ ಆಯ್ತು. ತಮ್ಮನಿಗೆ ಓದಲು ಅಷ್ಟು ಸಹಾಯ ಮಾಡಿದರೂ ಅವನ ಸಹಾಯ ಹಣ ಬೇಡವೆಂದರು. ಲಕ್ಷ್ಮಣನಿಗೂ ಮದುವೆ ಮಾಡಿಕೊಳ್ಳಲು ಹೇಳಿದ್ದಕ್ಕೆ ಒಪ್ಪಿ, ಅನುಕೂಲಸ್ಥರ ಮನೆಯ ಹುಡುಗಿಯನ್ನು ನೋಡಿ ಮದುವೆ ಮಾಡಿಕೊಂಡ. ನಮ್ಮ ಕಷ್ಟ ಹಾಸಿಗೆ ಹೊದ್ದು ಕೊಳ್ಳುವಷ್ಟಿದೆ. ಸುಖವಾಗಿ ಬೆಳೆದ ಹುಡುಗಿ ನಮ್ಮ ಮನೆಯಲ್ಲಿ ಇರೋದು ಬೇಡ. ನೀನು ಬೆಂಗಳೂರಲ್ಲಿ ಬೇರೇ ಮನೆ ಮಾಡಿ ಇಬ್ಬರೂ ಇರಿ ಅಂತ ಲಕ್ಷ್ಮಿಯೇ ಮಗನಿಗೆ ಹೇಳಿದಳು. ಅವನಿಗೂ ಅದೇ ಬೇಕಿತ್ತು. ಬೇರೆ ಮನೆಮಾಡಿ ಸುಖವಾಗಿ ಇದ್ದ. ಅವನಿಂದ ಯಾವ ಹಣ ಸಹಾಯ ಬೇಡದೆ ಅವನ ಮದುವೆಗೆ ಇಂತಹ ಕಷ್ಟ ಕಾಲದಲ್ಲೂ ಇಬ್ಬರು ಅಣ್ಣಂದಿರೇ ಖರ್ಚುಮಾಡಿ ಮನೆ ಗೌರವ ಉಳಿಸಿದ್ದರು. 

ತವರು ಮನೆಯಲ್ಲಿ ಒಂದು ಹೊತ್ತಿನ ಊಟ ತಿಂಡಿಗೂ ಕಷ್ಟ ಇದ್ದುದರಿಂದ ಈ ಮನೆಗೆ ಬಂದು ಹೇಗೋ ಸುಖವಾಗಿರಬಹುದೆಂದು ಎಣಿಸಿ ಕನಸು ಹೊತ್ತ ಲಕ್ಷ್ಮಿಗೆ ಇಷ್ಟು ದೊಡ್ಡ ಸಂಸಾರ ನೌಕೆ ಯನ್ನ ತೇಲಿಸುವ ಜವಾಬ್ದಾರಿ, ಮತ್ತು ಪತಿಯನ್ನ ಕಳೆದುಕೊಂಡ ದುಃಖದಲ್ಲಿ ಮುಳುಗಿದ್ದ ಲಕ್ಷ್ಮಿಗೆ ಮೇಲಿಂದಮೇಲೆ ಆಘಾತ. 


 ಮಗಳು ಮಾಲತಿಯ ಸಾವು ಕೆಲವೇ ತಿಂಗಳುಗಳಲ್ಲಿ ಅವಳ ಪತಿಯ ಸಾವು. ಎರಡು ಮೂರು ವರ್ಷದಲ್ಲೇ ಸರಸ್ವತಿಯ ಪತಿ ಕ್ಯಾನ್ಸರ್ ನಿಂದ ಸಾವು. ಸುಮಾರು ಎಪ್ಪತ್ತು ವರ್ಷ ವಯಸ್ಸಲ್ಲಿ ಒಂದಾದ ಮೇಲೊಂದು ಸಾವಿನ ಸುದ್ದಿ. ದೊಡ್ಡಮಗ ಹನುಮ, ಮತ್ತು ತನ್ನ ಸ್ವಂತ ಮಗಳು ಕಪಿಲಳ ಗಂಡನ ನಂತರ ಅವಳ ಅಸಹಜ ಸಾವು ಸಹಾ ಲಕ್ಷ್ಮಿಯನ್ನ ಬಹಳ ಘಾಸಿಮಾಡಿತ್ತು. ಯಾರೊಂದಿಗೂ ಹೆಚ್ಚುಮಾತಾಡದ ತನ್ನ ಕೆಲಸಕ್ಕಷ್ಟೇ ಸೀಮಿತ ವಾದ ಲಕ್ಷ್ಮೀ ತನ್ನ ಎದುರಲ್ಲೇ ಇಷ್ಟೊಂದು ಸಾಲು ಸಾಲು ಸಾವುಗಳ ಕಂಡಮೇಲೆ ವಯೋಸಹಜ ಖಾಯಿಲೆ ಇಂದ ಹಾಸಿಗೆ ಹಿಡಿದಾಗ, ಒಂದು ದಿನ ಎಲ್ಲ ಮಕ್ಕಳನ್ನು ಮೋಮ್ಮಕ್ಕಳನ್ನು ನೋಡುವ ಆಸೆ ತೋಡಿಕೊಂಡಾಗ ಮನೆಯಲ್ಲಿ ಸತ್ಯ  ನಾರಾಯಣ ಪೂಜೆ ನೆಪದಲ್ಲಿ ಮಕ್ಕಳು ಮೊಮ್ಮಕ್ಕಳು ಎಲ್ಲರನ್ನೂ ಒಟ್ಟುಮಾಡಿದರು. ಅಂದೇ ಮನೆ ಮತ್ತು institute ಬಿಲ್ಡಿಂಗ್ ನ ಮಾರಿ ಎಲ್ಲರೂ ಹಂಚಿಕೊಳ್ಳಿ ಅಂತ ಹೇಳಿ ಊಟದ ನಂತರ ಮಲಗಿ ಕಣ್ಣು ಮುಚ್ಚಿದ ಲಕ್ಷ್ಮೀ ಸಂಜೆಯ ಹೊತ್ತಿಗೆ ಇಹಲೋಕ ತ್ಯಜಿಸಿದ್ದಳು. 

ಇಡೀ ಜೀವನದಲ್ಲಿ ಸುಖ ಕಾಣದೆ ಕಣ್ಣೀರಲ್ಲಿ ಕೈ ತೊಳೆಯುವ ಎಷ್ಟೋ ಲಕ್ಷ್ಮಿಯರು ಅಂದೂ ಇದ್ದರು ಇಂದಿಗೂ ಇದ್ದಾರೆ. ಸಹನಾ ಶಕ್ತಿ ದೇವರು ಹೆಣ್ಣಿಗ ಮಾತ್ರ ಕೊಟ್ಟಿರುವುದು ಇದೇ ಕಾರಣಕ್ಕಾಗಿಯೇ ಇರಬಹುದೇನೋ ಅಲ್ಲವೇ ?


Rate this content
Log in

Similar kannada story from Tragedy