Vijaya Bharathi

Romance Classics Others

3  

Vijaya Bharathi

Romance Classics Others

ಸಂಗಾತಿ ಸಂಪ್ರೀತಿ

ಸಂಗಾತಿ ಸಂಪ್ರೀತಿ

1 min
299


ಭಾನುವಾರ ಸಾಯಂಕಾಲ ಅವಳಿಗೆ ಹೊತ್ತು ಕಳೆಯುವುದೇ ತುಂಬಾ ಕಷ್ಟವೆನಿಸುತ್ತಿತ್ತು. ವಾರವಿಡೀ ಮನೆ ಆಫೀಸು ಮಕ್ಕಳು ಎಂದು ಕೆಲಸಗಳಲ್ಲಿ ಮಗ್ನಳಾಗಿದ್ದ ಅವಳಿಗೆ , ಗಂಡನ ಅನುಪಸ್ಥಿತಿ ಹೆಚ್ಚು ಕಾಡುತ್ತಿರಲಿಲ್ಲ. ಒಂದು ತಿಂಗಳ ಅವಧಿಗಾಗಿ ಕೆಲಸದ ನಿಮಿತ್ತ ಜರ್ಮನಿಗೆ ಹೋಗಿರುವ ಅವಳ ಪತಿ, ಇನ್ನೇನು ಮುಂದಿನ ವೀಕ್ ಎಂಡ್ ನಲ್ಲಿ ಇಂಡಿಯಾಗೆ ಬರಬೇಕು. .ಇಷ್ಟು ದಿನಗಳು ಕಾಡದ ಬೇಸರ ಈ ಸಂಜೆ ಏಕೋ ಕಾಡುತ್ತಿದೆ. ಮಕ್ಕಳಿಬ್ಬರೂ ತಮ್ಮ ಆಟಿಕೆಗಳನ್ನು ಹಿಡಿದು ಆಡುತ್ತಾ ಕುಳಿತಿದ್ದಾರೆ. ಅವಳಿಗೋ ಏನೋ ಒಂದು ರೀತಿ ಬೇಸರ. ಮನೆಯಲ್ಲಿರುವ ಯಾರೊಂದಿಗೆ ಮಾತನಾಡಿದರೂ ಮನಸ್ಸಿನ ಬೇಸರ ಹೋಗುತ್ತಿಲ್ಲ.ಸೀದಾ ತನ್ನ ರೂಮಿನ ಬಾಲ್ಕನಿಗೆ ಬಂದಳು. ಮುತ್ಸಂಜೆಯ ಸೂರ್ಯ ಪಡುವಣ ಕಡಲಿನಲ್ಲಿ ಮೆಲ್ಲಗೆ ಇಳಿಯುತ್ತಿದ್ದಾನೆ. ಸುತ್ತಲೂ ಮಬ್ಬುಗತ್ತಲು ಕವಿಯುತ್ತಲಿದೆ. ತನ್ನ ರೂಮಿನ ಬಾಲ್ಕನಿಯಿಂಧ ಮುಳುಗುತ್ತಿರುವ ಸೂರ್ಯನನ್ನೇ ನೋಡುತ್ತಾ ಇದ್ದಾಳೆ. ಆ ದೃಶ್ಯವನ್ನು ನೋಡುತ್ತಲೇ ಅವಳಿಗೆ ತಮ್ಮಿಬ್ಬರ ಏಕಾಂತದ ನೆನಪುಗಳು ಕಾಡಿ, ಮುಖ ಕೆಂಪೇರುತ್ತಾ, ಬಯಕೆಗಳು ಭುಗಿಲೇಳುತ್ತಿವೆ. ಗಂಡನ ಸಾಂಗತ್ಯವಿಲ್ಲದೇ ಏಕಾಂಗಿತನದಲ್ಲಿ ಅವಳಿಗೇನೋ ಬೇಸರ. ನಿಂತಲ್ಲೇ ನಿಂತು ಹೊರಗಡೆಯ ಸೂರ್ಯಾಸ್ತವನ್ನು ನೋಡುತ್ತಾ ಮೈಮರೆತಿದ್ದಾಳೆ.


ಇದ್ದಕ್ಕಿದ್ದಂತೆ ಕಾಲಿಂಗ್ ಬೆಲ್ ಶಬ್ದವಾದಾಗ, ಕಲ್ಪನಾ ಲೋಕದಿಂದ ಹೊರಬಂದ ಅವಳು ಬಾಗಿಲು ತೆಗೆದು ನೋಡುತ್ತಾಳೆ. ಅವಳಿಗೆ ಪರಮಾಶ್ಚರ್ಯ. ಮುಂದಿನ ವಾರ ಬರಬೇಕಾಗಿದ್ದ ಅವಳ ಗಂಡ ಈಗಲೇ ಬಂದಿದ್ದಾನೆ. ರೋಗಿ ಬಯಸಿದ ಹಾಲು ಅನ್ನ ಎದುರಿಗೇ ಸಿಕ್ಕಾಗ ಎಷ್ಟು ಖುಷಿಯಾಗಿರಬೇಡ?

"ಹಾಯ್" ಅಂತ ಹೇಳಿ ಗಂಡ ಕೈಗಳನ್ನು ಮುಂದೆ ಮಾಡಿದಾಗ, "ವಾಟ್ ಎ ಪ್ಲೆಸೆಂಟ್ ಸರ್ಪ್ರೈಸ್ !" ಅವಳು ಓಡಿಹೋಗಿ ಅವನ ತೋಳುಗಳಲ್ಲಿ ಸೇರಿಕೊಳ್ಳುತ್ತಾಳೆ. ಸಾಯಂಕಾಲದಿಂದ ಒಂದೇ ಸಮನೇ ಬೇಸರದಿಂದ ಬಳಲಿದ್ದ ಅವಳಿಗೆ ಗಂಡನ ಸರ್ಪ್ರೈಸ್ ಹಿಡಿಸಲಾರದಷ್ಟು ಸಂತೋಷ ಕೊಟ್ಟಿತ್ತು.

ಬೇಸರದ ಸಂಜೆ ಮಾಯವಾಗಿ ಹೋಗಿತ್ತು. ಉತ್ಸಾಹದ ರಾತ್ರಿ ಎದುರಾಗಿತ್ತು.



Rate this content
Log in

Similar kannada story from Romance