shristi Jat

Classics Inspirational Others

4.5  

shristi Jat

Classics Inspirational Others

ಸಮಾಜ ಕಲ್ಯಾಣದ ಕುರಿತು

ಸಮಾಜ ಕಲ್ಯಾಣದ ಕುರಿತು

1 min
386


ನಾವು ಕೆವಲ ನಮ್ಮ ಲಾಭ ನಮ್ಮ ವೃತ್ತಿ ಲಾಭ ನೋಡುವುದರ ಜೊತೆಗೆ ಸಮಾಜಕ್ಕೂ ಲಾಭವಾಗುವ ಕೆಲವು ವಿಷಯಗಳಲ್ಲಿ ಭಾಗಿಯಾಗಬೇಕು. ಆದರೆ ತೊರಿಕೆಗೆ ಅಲ್ಲ ಸಮಾಜ ಅಂದರೆ ನಾವು ನಮ್ಮಿಂದ ಸಮಾಜ ನಮ್ಮನ್ನ ಬಿಟ್ಟು ಸಮಾಜ ಅಲ್ಲ 

"ಭಾಗಿಯಾಗು ನೀ ಜಾತಿ ಮತ ಧರ್ಮದ ಕಲಹಗಳ ವಿರುದ್ಧ" "ಭಾಗಿಯಾಗು ನೀ ಮಹಿಳಾ ಸಬಲಿಕರಣದ ವಿರುದ್ಧ" "ಭಾಗಿಯಾಗು ನೀ ಬಡವರ ಹಿಂಸೆಗಳ ವಿರುದ್ಧ" "ಭಾಗಿಯಾಗು ನೀ ಭ್ರಷ್ಟಾಚಾರ ಕೋಮುಗಲಭೆಗಳ ವಿರುದ್ಧ"

ಯಾಕೆಂದರೆ ನಾವು ವಾಸಿಸುತ್ತಿರುವುದು ಈ ಸಮಾಜದಲ್ಲಿ ಯಾರು ರಾಜಕೀಯದಲ್ಲಿ ಗೆಲ್ಲುತ್ತಾರೊ ಅವರಿಗೆ ಅಷ್ಟೇ ಸಮಾಜದ ಬಗ್ಗೆ ಚಿಂತೆಯಿರಬೇಕಂತಲ್ಲ ಈ ಸಮಾಜದಲ್ಲಿ ಇರುವ ಪ್ರತಿಯೋಬ್ಬರಿಗೂ ಸಮಾಜದ ಬಗ್ಗೆ ಅರಿವಿರಬೇಕು. ನಾವು ವಾಸಿಸುವ ಭೂಮಿ,ನೀರು,ಗಾಳಿ ಹದಗೆಡದ ಹಾಗೆ ಕಾಪಾಡಬೇಕು.ಸಮಾಜವನ್ನು ಹಾಳುಮಾಡುವ ಉದ್ದೇಶವಿರುವ ಯಾವುದೇ ಕ್ಷೇತ್ರ ಕಂಡುಬಂದಲ್ಲಿ ನಿಷೇಧಿಸಬೇಕು.

ಒಂದು ವ್ಯಕ್ತಿ ಯಾವಾಗ ತನ್ನ ಸ್ವಾರ್ಥಕ್ಕಾಗಿ ಸಮಾಜವನ್ನು ಹಾಳುಮಾಡುವ ಉದ್ದೇಶವಿಟ್ಟುಕೊಂಡು ಜನರನ್ನು ಬಳಸಿಕೊಳ್ಳುತ್ತಾನೆ ಅಂತಹ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

"ಒಂದು ದುಷ್ಟ ವ್ಯಕ್ತಿಗೆ ನಾವು ಮಾಡುವ ಬೆಂಬಲ ಒಂದು ದಿನ ಸಮಾಜಕ್ಕೆ ಕುತ್ತು ತರುವುದು." 

ರಾಜಕೀಯ ಕ್ಷೇತ್ರದಲ್ಲಿ ಇರುವವರು ಹೋಸ ಹೋಸ ಯೋಜನೆ ಜಾರಿಗೆ ತರುವುದನ್ನು ಕಂಡಿದ್ದೇವೆ ಯೋಜನೆಗಳು ಕಡಿಮೆ ಸಮಯದ್ದಾಗಿರುತ್ತವೆ ಅಂತಹ ಯೋಜನೆಗಳು ತರುವ ಬದಲು ಸರಕಾರಕ್ಕೆ ನಷ್ಟವಾಗದ ಜನರಿಗೂ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತರಬೇಕು ಮುಂದೆ ಯಾವುದೇ ವ್ಯಕ್ತಿ ಅಧಿಕಾರಕ್ಕೆ ಬಂದರು ಮುಂದುವರಿಸಿಕೊಂಡು ಹೋಗುವಂತಿರಬೇಕು.    ಹೆಸರಿಗೆ ಕಾನೂನು ಆಗಿರುವದಲ್ಲ ಕ್ರಮ ಕೈಗೊಳ್ಳಬೇಕು.

ತಂತ್ರಜ್ಞಾನದಲ್ಲಿ ವಂಚನೆ ಜಾಸ್ತಿ ನಡೆದಿದೆ.ಮೋಬೈಲ್ ಮತ್ತು ಲ್ಯಾಪಟಾಪ್ ಗಳನ್ನು ಹ್ಯಾಕ್ ಮಾಡಿ ಅವರ ವೈಯಕ್ತಿಕ ವಿಷಯಗಳೆಲ್ಲವನ್ನು ತಿಳಿದುಕೊಂಡು ಅದನ್ನು ಕೆಟ್ಟದಾಗಿ ಬಳಸಿಕೊಳ್ಳುತ್ತಾರೆ. ಜನರ ಹುಳುಕು(ದೌರ್ಬಲ್ಯ) ನೋಡಿಕೊಂಡು ಅವರಿಗೆ ಬ್ಲ್ಯಾಕ್ಮೇಲ್ ಮಾಡುವುದು ಮತ್ತು ಎಷ್ಟೋ ಜಾತಿ ಮತಗಳಲ್ಲಿ ನಡುವೆ ತಾರತಮ್ಯ ತರುವುದು.ರಾಜಕೀಯ ಕ್ಷೇತ್ರದಲ್ಲಿ ಕಲಹಗಳನ್ನು ಸೃಷ್ಟಿ ಮಾಡುವುದು. ಜನರು ದುಡ್ಡನ್ನು ತೆಗೆದುಕೊಳ್ಳುವುದು ಮತ್ತುಅವರನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳುವದು.ಹಲವು ಬಗೆಯ ವಂಚನೆಗಳು ನಡೆಯುತ್ತಿವೆ.ಜನರು ಕಾಲ್ಪನಿಕಕ್ಕೆ ಒತ್ತು ಕೋಡದೆ ವಾಸ್ತವಕ್ಕೆ ಬಂದು ನೋಡಿದಾಗ ಅದರ ಸತ್ಯ ತಿಳಿಯುತ್ತದೆ. ಒಂದು ವೆಳೆ ತಪ್ಪು ಕಂಡಲ್ಲಿ ಪ್ರಶ್ನಿಸಬೇಕು ಅವನ ಉದ್ದೇಶ ಸಮಾಜಕ್ಕೆ ಹಾನಿ ಉಂಟು ಮಾಡುವದಿದ್ದರೆ ವಂಚಕನ ಮೇಲೆ ಕಾನೂನು ಕಠಿಣ ಕ್ರಮ ಕೈಗೊಳ್ಳಬೇಕು.

 ಮೋದಲು ಮೋನವನಾಗು ಆಮೇಲೆ ಏನಾದರಾಗೂ"ದರೋಡೆ ವಂಚನೆ,ಮೋಸ ಮಾಡಿ ಸಾಧನೆ ಅನ್ನೊ ಹೆಸರಿಡಬೇಡ.ಸಾಧಿಸಲು ಒಳ್ಳೆಯ ಮಾರ್ಗಗಳಿಗೆ ಬರವಿಲ್ಲ.

"ಸಮಾಜದ ಕಲ್ಯಾಣಕ್ಕಾಗಿ ಒಳ್ಳೆಯ ಆಡಳಿತಬೇಕು ಮತ್ತು ಒಳ್ಳೆಯ ಮಾರ್ಗಗಳು ಬೇಕು."



Rate this content
Log in

Similar kannada story from Classics