nagavara murali

Classics Inspirational Others

2  

nagavara murali

Classics Inspirational Others

ಋಣ

ಋಣ

4 mins
98


ಸತೀಶ್ ಚಂದ್ರ ಶಾಲಾ ಮಾಸ್ಟರ್.ಶಿಸ್ತಿನ ಸಿಪಾಯಿ. ಒಂದು ಬೆಂಕಿ ಅಫಗಾತದಲ್ಲಿ ಹೆಂಡತಿಯನ್ನ ಕಳೆದು ಕೊಂಡರೂ ಒಬ್ಬನೇ ಮಗ ಶಾಶ್ವತ್ ನನ್ನು ಕಷ್ಟ ಪಟ್ಟು ಯಾವ ಕೊರತೆಯೂ ಇಲ್ಲದೆ ಸಾಕಿದರು. ಇಂಜಿನಿಯ ರಿಂಗ್ ಮುಗಿಸಿ ಎಮ್. ಎಸ್ ಮಾಡ್ತೀನಿ ಅಂದಾಗ ಅದಕ್ಕೂ ಸಾಲ ಮಾಡಿ U S ಗೆ ಕಳುಹಿಸಿದರು. ಅಲ್ಲೇ ಕೆಲಸ ಸಿಕ್ತು ಅಂದಾಗ ಬುದ್ಧಿವಂತ ಅಂತ ಸಂತೋಷ ಪಟ್ಟರು. ಆಗ ಇವರಿಗೆ ಎಪ್ಪತ್ತು ವರ್ಷ ವಯಸ್ಸು. ಅಲ್ಲೇ ಭಾರತದ ಹುಡುಗಿಯನ್ನ ಇಷ್ಟ ಪಟ್ಟಿದೀನಿ ಅಂದ. ನನ್ನ ದೇನೂ ಅಭ್ಯಂತರವಿಲ್ಲ ಎಂದರು.


ಮತ್ತೊಂದು ದಿನ ಅದೇ ಹಡುಗೀನ ಮದುವೆ ಮಾಡಿ ಕೊಳ್ತೀನಿ ಅಂದ .ಆಯ್ತು ನಿನ್ನ ಸಂತೋಷನೇ ನನ್ನ ಸಂತೋಷ ಅಂದರು. ಐದು ವರ್ಷದ ನಂತರ ಮಗ ಸೊಸೆ ಭಾರತಕ್ಕೆ ಬಂದು ಅಲ್ಲೇ ಕಂಪನಿ ಶುರು ಮಾಡೋ ದಾಗಿ ಹೇಳಿದಾಗ ಎಷ್ಟಾದರು ನನ್ನ ಮಗ ಅಲ್ವೇ ದೇಶಕ್ಕೆ ದುಡಿಯಬೇಕನ್ನೋ ತುಡಿತ ಅಂತ ಸಂತೋಷಪಟ್ಟರು. ಆದರೆ ಅದು ದೆಹಲಿ ಹತ್ತಿರ ಅಂತ ತಿಳಿದು ಸ್ವಲ್ಪ ಬೇಸರ ಆಯಿತು. ಒಂದು ದಿನ ಮಗನ ಕಂಪನಿ ನೋಡೋ ಆಸೆಯಿಂದ ಸ್ನೇಹಿತನೊಬ್ಬನ ಸಹಾಯದಿಂದ ಮಗನಿಗೆ ತಿಳಿಸದೆ ಅವನ ಜೊತೆ ದೆಹಲಿಗೆ ಬಂದು ಅಲ್ಲಿಂದ ನೋಯ್ಡದಲ್ಲಿ ಅವನ ಕಂಪನಿ ಹುಡುಕಿಕೊಂಡು ಬಂದಾ ಗ ಭಾರೀ ಕಟ್ಟಡ ನೋಡಿ ಸಂತಸವಾಯಿತು. Receptionist ಹತ್ತಿರ ಬಂದು ಈ ಕಂಪನಿ ಮಾಲೀಕನ ತಂದೆ ನಾನು . ನಾನು ಬರೋದು ಅವನಿಗೆ ಗೊತ್ತಿಲ್ಲ. ಸ್ವಲ್ಪ ಹೇಳಿ ಕಳುಹಿಸಿ , I want to give him a surprise ಅಂದರು. ಸಾರ್ ಅವರು meeting ನಲ್ಲಿ ಇದ್ದಾರೆ. ಹತ್ತು ನಿಮಿಷ Wait ಮಾಡಿ ಅಂತ ಹೇಳಿದರು. ಅರ್ಧ ಗಂಟೆ ಕಾದು ಆ ಮೇಲೆ ಅವರು ವಿಷಯ ತಿಳಿಸಿದಾಗ ಓಡಿ ಬಂದ. ಅಪ್ಪನನ್ನ ನೋಡಿ ಆಲಿಂಗಿಸಿ ಏಕಪ್ಪ ನೀವು ಬರಕ್ಕೆ ಹೋದಿರಿ . ಹೇಳಿದ್ದರೆ ನಾನೇ ಬಂದು ಕರೆದು ಕೊಂಡು ಬರ್ತಿದ್ದೆ ಅಂದ. ಅಪ್ಪ ಏನೂ ಮಾತಾಡದೇ ಸುಮ್ಮನಿದ್ದರು. ನಿನ್ನ ಹೆಂಡತಿ ಎಲ್ಲಿದ್ದಾಳೆ ನೋಡಬಹುದಾ ಅಂತ ಕೇಳಿದಾಗ ಅವಳು ಅವರ ಅಮ್ಮನ ಮನೆಗೆ delivery ಗೆಹೋಗಿದಾಳೆ. ಅದು ಆಂಧ್ರ ಪ್ರದೇಶದ ಕಡಪ ಅಂತ ಹೇಳಿದ. ನಿನ್ನ ನೋಡ ಬೇಕು ಅನಿಸಿತು ಬಂದೆ ನಿನಗೆ ತೊಂದರೆ ಆಗಿರಬಹುದು ಅಂದಾಗ .ಇಲ್ಲಪ್ಪ ನನ್ನದೇ ತಪ್ಪು ಐದಾರು ವರ್ಷಗಳೇ ಆಯ್ತು ನಿಮ್ಮನ್ನ ನೋಡಿ. ಹೇಗಿದ್ದೀರಿ..ಆರೋಗ್ಯ ಹೇಗಿದೆ. ಹೇಗೆ ಕಾಲ ಕಳೀತೀರಿ ಅಂತ ಯಾರೋ ದೂರದ ಸಂಭಂದೀಕರನ್ನ ವಿಚಾರಿಸೋ ಹಾಗೆ ವಿಚಾ ರಿಸಿದ. ಕನ್ನಡಕದ ಹಿಂದೆ ಕಣ್ತುಂಬಿ ಬಂದರೂ ತೋರಿಸಿ ಕೊಳ್ಳಲಿಲ್ಲ . ದುಃಖ ಒತ್ತರಿಸಿ ಬಂತು ಮಾತು ಬದಲಿಸಿ ಇದು ಸ್ವಂತ ಬಿಲ್ಡಿಂಗ್ ತಾನೇ ಅಂತ ಕೇಳಿದರು. ಇಬ್ಬರೂ ಊಟಕ್ಕೆ ಹೋದರು. ನಾಳೆ ಮುಂಬೈ ನಲ್ಲಿ business meeting ಇದೆ ,ಇಲ್ಲದಿದ್ದರೆ ಎರಡು ಮೂರು ದಿನ ಇಲ್ಲೇ ಇದ್ದು ನಿಮ್ಮ ಜೊತೆ ಸುತ್ತಾಡಬಹುದಿತ್ತು ಅಂದಾಗ. ಸೂಕ್ಷ್ಮ ಮತಿ ಸತೀಶ್ ಚಂದ್ರ ಇಲ್ಲ ನಿನಗೆ ಹೇಳೋದೇ ಮರೆತೆ ನನ್ನ ಸ್ನೇಹಿತ ಒಬ್ಬ ನನ್ನ ಜೊತೆ ಬಂದಿದಾನೆ. ರಾತ್ರಿ ಅವನ ಜೊತೆ ವಾಪಸ್ ಹೋಗ್ತಾ ಇದ್ದೇನೆ ಅಂತ ಹೇಳಿದರು. ಆಗ ಅವಳು ವಾಪಸ್ ಬಂದಮೇಲೆ ನಮ್ಮ ಜೊತೆ ನೀವೂ ಇಲ್ಲೇ ಇರೋ ಹಾಗೆ ಒಂದು ವ್ಯವಸ್ಥೆ ಮಾಡ್ತೀನಪ್ಪ ಈ ವಯಸ್ಸಿನಲ್ಲಿ ನೀವು ಒಬ್ಬರೇ ಅಲ್ಲಿ ಇರೋದು ಬೇಡ ಅಂತ ಹೇಳಿ , ಅಪ್ಪ ನಿಮ್ಮ ಸ್ನೇಹಿತರ ಮನೆಗೆ ನಾನೇ drop ಮಾಡ್ತೀನಿ ಸಂಜೆವರೆಗೂ ಇಲ್ಲೇ ಇರಿ ಅಂದ. ಬೇಡ ಅಂತ ಹೇಳಿ ಹೇಗೋ ತಪ್ಪಿಸಿಕೊಂಡು ಅಲ್ಲಿಂದ ಹೊರಟರು. ಮುಖ್ಯವಾಗಿ ಬಂದ ಕೆಲಸ ಆಗಲಿಲ್ಲ ಅಂತ ಬೇಜಾರಾಯ್ತು. ಅದು ಮಗ ಓದುತ್ತಿ ದ್ದಾಗ ಮಾಡಿದ ಸಾಲ ನಂತರ M.S ಮಾಡಕ್ಕೆ ಹೋದಾಗ ಮಾಡಿದ ಸಾಲ ಇನ್ನೂ ತೀರಿಸಲು ಆಗದೆ ಬೆಟ್ಟದ ಷ್ಟಾಗಿದೆ. ಇವನಿಗೆ ಹೋಳೋಣ ಅಂತ ಬಂದು ಮರೆತೇ ಹೋಗಿತ್ತು. 

ಅಪ್ಪ ಆ ಕಡೆ ಹೊರಟ ಸ್ವಲ್ಪ ಸಮಯದಲ್ಲೇ ಮಾರನೆ ದಿನದ ಮುಂಬೈ ಮೀಟಿಂಗ್ cancel ಆಯ್ತು ಅಂತ ಸೆಕ್ರೆಟರಿ ಹೇಳಿದ. ಆದರೆ ಅಪ್ಪ ಎಲ್ಲಿ ಇರ್ತಾರೆ ಅವರ ಸ್ನೇಹಿತ ಯಾರೂ ಅಂತಾನೂ ಗೊತ್ತಿಲ್ಲದೆ ಸುಮ್ಮನಾದ. ಆ ದಿನ ರಾತ್ರಿ ನಿದ್ದೆ ಬರಲಿಲ್ಲ. ಅಪ್ಪ ನನಗಾಗಿ ಎಷ್ಟು ಕಷ್ಟ ಪಟ್ಟಿದ್ದಾರೆ ನಾನು ಅವರಿಗೆ ಏನೂ ಮಾಡಿಲ್ಲ. ಮೊದ ಲಿಂದ ಅವರದು ಒಂಟಿ ಜೀವನ ಸ್ವಾಭಿಮಾನಿ .ನನ್ನನ್ನು ಹಾಸ್ಟೆಲ್ ನಲ್ಲಿ ಬಿಟ್ಟು ಅವರು ಒಬ್ಬರೇ ಎಲ್ಲಾ ಕೆಲಸ ಮಾಡಿಕೊಳ್ಳುತ್ತಿದ್ದರು. ನಾನು ಏನು ಕೇಳಿದರೂ ಇಲ್ಲ ಅಂತ ಹೇಳಿಲ್ಲ. ಎಷ್ಟು ವೀಕ್ ಆಗಿದಾರೆ .ಅವರು ಒಬ್ಬರೇ ಇರೋದು ಸರಿ ಇಲ್ಲ. ಅವಳು ಬರೋವರೆಗೂ ಕಾಯೋದು ಬೇಡ ಏನಾದರೂ ಆಗಲಿ ಅಪ್ಪ ನನ್ನ ಕಣ್ಣ ಎದುರಲ್ಲೇ ಇರಲಿ ಹೇಗಾದರೂ ಮಾಡಿ ಒಪ್ಪಿಸಬೇಕು ಅಂತ ಯೋಚನೆ ಮಾಡಡಿ ಮಲಗಿದ.

ಒಂದು ತಿಂಗಳ ನಂತರ ಹೆಂಡತಿಯನ್ನು ನೋಡಲು ಕಡಪ ಗೆ ಬಂದಾಗ ಹಾಗೆ ಬೆಂಗಳೂರಿಗೂ ಬಂದು ನೇರ ವಾಗಿ ಮನೆಗೆ ಬಂದ .ಬೀಗ ಹಾಕಿದೆ. ಪಕ್ಕದ ಮನೆಯ ವರು ಹೇಳಿದರು ಅವರು ಮನೆ ಮಾರಿ ಅವರ ಹಳ್ಳಿಗೆ ಹೊರಟು ಹೋದರು .ಆ ಹಳ್ಳಿ ಯಾವುದು ಅಂತ ಅವರನ್ನೇ ಕೇಳಿದ. ಹುಣಸೂರಿನ ಹತ್ತಿರ ಅಂತ ಹೇಳಿ ಸರಿಯಾಗಿ ನಮಗೂ ಗೊತ್ತಿಲ್ಲ ಅಂದರು.ನನಗೆ ತಿಳಿದ ಹಾಗೆ ಅವರು ಹುಟ್ಟಿದ್ದು ಮಡಿಕೇರಿ. ಹುಣಸೂರಿನ ಹತ್ತಿರ ಹಳ್ಳಿ ಅಂತ ಎಂದೂ ಹೇಳಿಲ್ಲ. ಹೀಗೆ ಯೋಚನೆ ಮಾಡ್ತಾ ಇದ್ದಾಗ ಅವರ ಇನ್ನೊಬ್ಫ ಅಣ್ಣನ ಮಗನ ಮನೆ ನೆನೆಪಾಯ್ತು .ಅಲ್ಲಿಗೆ ಹೋದ. ಅಪ್ಪ ಮನೆ ಮಾರಿ ಹೊರಟು ಹೋಗಿದಾರೆ ನಿಮಗೇನಾದರೂ ಹೇಳಿ ಹೋದರಾ ಅಂತ ಕೇಳಿದ. ಹೌದು ಹೋಗಕ್ಕೆ ಎರಡು ದಿನ ಮೊದಲು ಬಂದು ಅವರ ಮನಸ್ಸಿನಲ್ಲಿ ಇದ್ದ ನೋವೆ ಲ್ಲಾ ಹೇಳಿಕೊಂಡರು .ನಿನಗೋಸ್ಕರ ಮಾಡಿದ ಸಾಲ ತೀರಿಸಕ್ಕೆ ಆಗದೆ ಮನೆ ಮಾರಿದರು. ಹುಣಸೂರಿನ ಹತ್ತಿರ ಅವರ ಸ್ನೇಹಿತರು ನಡೆಸುತ್ತಿರೋ ವೃಧ್ಧಾಶ್ರಮಕ್ಕೆ ಹೋಗಿದಾರೆ.ದೇವರು ದೊಡ್ಡವನು ಅವರ ಆರೋಗ್ಯ ಚೆನ್ನಾಗಿದೆ ಅಂತ ಹೇಳಿದರು. ಇವನ ಜೊತೆ ಕಾಲೇಜಿನಲ್ಲಿ ಓದುತ್ತಿದ್ದ ಸ್ನೇಹಿತನ ನೆನೆಪಾಯ್ತು.ಅವನ ಸಹಾಯ ಕೇಳಿದ. ಅವನು ಮನೆ ಖರೀದಿಸಿದವರ ಹತ್ತಿರ ಬಂದು ವಿಚಾರಿಸಿದಾಗ ಹೇಳಿದ್ದು ಅವರ ಒಂದು ಸೈನ್ ಬೇಕಾಗಿ ತ್ತು ನಿನ್ನೆ ಹೋಗಿ ಬಂದೆ . ಅವರು ಹೊಸಕೋಟೆಯ ಈಶ್ವರನ ಗುಡಿಯಲ್ಲಿ ಇದ್ದಾರೆ ಅಂತ ಹೇಳಿದರು. ಇವನು ಅಲ್ಲಿಂದಲೇ ಫೋನ್ ಮಾಡಿ ಸ್ನೇಹಿತನಿಗೆ ತಿಳಿಸುತ್ತಿದ್ದಾಗ ಕೇಳಿದರು ನೀವು ಯಾರಿಗೆ ಅವರ ವಿಷಯ ಹೇಳ್ತಾ ಇರೋದು ಅಂದಾಗ ಅವರ ಮಗ. ಅವನು ನನ್ನ ಸ್ನೇಹಿತ .ಅವರನ್ನ ಒಂದು ತಿಂಗಳಿಂದ ಹುಡುಕುತ್ತಿದ್ದಾನೆ ಅಂದ. ಅವನ ಎದುರೇ ದೇವಸ್ಥಾನಕ್ಕೆ ಫೋನ್ ಮಾಡಿ ನಿಮ್ಮ ಮಗನ ಸ್ನೇಹಿತ ಅಂತೆ ನಿಮ್ಮ ಬಗ್ಗೆ ಕೇಳಿದ ನಾನು ಮರೆತು ನೀವು ಇರೋ ಸ್ಥಳ ತಿಳಿಸಿ ಬಿಟ್ಟೆ ಕ್ಷಮಿಸಿ ಅಂತ ಹೇಳಿದಾಗ , ಇವನಿಗೆ ಆಶ್ಚರ್ಯ ಅವರು ಏಕೆ ಹಾಗೆ ಹೇಳಿದರು. ನನ್ನ ಸ್ನೇಹಿತ ಅಂದರೆ ಅವರ ಮಗ ಶಾಶ್ವತ್ ಸಹಾ ಐದಾರು ವರ್ಷಗಳಿಂದ ಸಂಪರ್ಕದಲ್ಲಿ ಇರಲಿಲ್ಲ. ಹೇಗೋ ನನ್ನ ನಂಬರ್ ಹುಡುಕಿ ಸಹಾಯ ಕೇಳಿದ . ನನಗೆ ಬೇರೇ ಏನೂ ಗೊತ್ತಿಲ್ಲ ಅಂದ. ಅವರಿಬ್ಬರೂ ಅರ್ಧ ಗಂಟೆ ಅದೇ ವಿಷಯ ಮಾತನಾ ಡಿದರು.ಆಗ ಮತ್ತೆ ಶಾಶ್ವತ್ ಫೋನ್ ಮಾಡಿ ನೀನು ಹೊಸಕೋಟೆ ದೇವಸ್ಥಾನಕ್ಕೆ ಹೋಗಿ ನಮ್ಮ ತಂದೆಯನ್ನು ಮೀಟ್ ಮಾಡಕ್ಕೆ ಆಗತ್ತಾ ಅಂದ. ಸಾರಿ ಆಗಲ್ಲ ಅಂತ ಖಡಕ್ ಆಗಿ ಹೇಳಿಬಿಟ್ಪ.

ಒಂದು ವಾರದ ನಂತರ ಶಾಶ್ವತ್ ಹೊಸಕೋಟೆ ದೇವ ಸ್ಥಾನಕ್ಕೆ ಹೋದ .ಆದರೆ ಅಲ್ಲಿ ಇರಲಿಲ್ಲ. ಆ ಹೆಸರಿನವ ರು ಯಾರೂ ಇಲ್ಲ ಅಂದಾಗ ಬೇರೆ ದಾರಿ ಕಾಣದೆ ಪೋಲಿಸ್ ಕಂಪ್ಲೇಂಟ್ ಕೊಟ್ಟ. ಮಾರನೇ ದಿನವೇ ಅವರು ಹುಡುಕಿ ಪೋಲಿಸ್ ಸ್ಟೇಶನ್ ಗೆ ಕರೆದು ಕೊಂಡು ಹೋದಾಗ ಅಲ್ಲಿನ ಇನ್ಸ್ಪೆಕ್ಟರ್ ಇವರನ್ನ ನೋಡಿದ ತಕ್ಷಣ ಎದ್ದು ನಮಸ್ಕಾರ ಮಾಡಿ ಸಾರ್ ಏನಿದು . ನಾನು ಯಾರು ನೆನೆಪಿದೆಯೇ .ನಿಮ್ಮ ಶಿಷ್ಯ ರಾಮ ಮೂರ್ತಿ ಅಂದರು.. ಅವರಿಗೆ ನೆನಪಾಗಲಿಲ್ಲ.ನಿಧಾನವಾಗಿ ನೆನೆಪು ಮಾಡಿಕೊಳ್ಳಿ .ಮೊದಲು ನಿಮ್ಮ ವಿಷಯ ಹೇಳಿ ಅಂದ ರು. ನನ್ನ ಮಗ ನನ್ನನ್ನು ಹುಡುಕಿ ಕೊಡಲು ಕಂಪ್ಲೇಂಟ್ ಕೊಟ್ಟಿದಾನಂತೆ. ಅದಕ್ಕೆ ನಿಮ್ಮವರು ಇಲ್ಲಿಗೆ ಕರೆದು ಕೊಂಡು ಬಂದರು. ತಪ್ಪ್ಪಿಸಿ ಕೊಳ್ಳಲು ನಾನೇನು ಮಗು ಏನು . ಇಷ್ಟು ವರ್ಷ ಆದ ಮೇಲೆ ಅಪ್ಪ ಬೇಕು ಆದರೆ ನನಗೆ ಯಾರೂ ಬೇಡ . ನೆಮ್ಮದಿಯಾಗಿ ಎಲ್ಲಾದರೂ ಇರ್ತೀನಿ .ನನಗೆ ಯಾರೂ ಬೇಡ ಅಂತ ಹೇಳಿ ಮಗು ವಿನಂತೆ ಗಳಗಳನೆ ಅತ್ತು ಬಿಟ್ಟರು. ಇನ್ಸ್ಪೆಕ್ಟರ್ ಗೂ ಮನಸ್ಸು ಕರಗಿ ಯೋಚನೆ ಮಾಡಬೇಡಿ ಸಾರ್ ನಾನು ಇದೀನಿ. ಮೊದಲು ನಮ್ಮ ಮನೇಗೆ ಬನ್ನಿ ಅಂತ ಕರೆದು ಕೊಂಡು ಹೋಗಿ ತಂದೆಯ ಸ್ಥಾನ ಕೊಟ್ಟು ಚೆನ್ನಾಗಿ ನೋಡಿಕೊಂಡರು. ಮಗನಿಗೂ ವಿಷಯ ತಿಳಿಯಿತು.ಆ ಮನೆಯನ್ನು ತಾನೇ ಮತ್ತೆ ಖರೀದಿ ಮಾಡಿ ಅಪ್ಪನ ಹೆಸರಲ್ಲಿ ಬಹಳ ವರ್ಷಗಳ ನಂತರ ಅದನ್ನು ವೃದ್ದಾಶ್ರಮ ಮಾಡಿದ.ಅದನ್ನು ನೋಡಲು ಅಪ್ಪ ಮಾತ್ರ ಇರಲಿಲ್ಲ.



Rate this content
Log in

Similar kannada story from Classics