Vaman Acharya

Children Stories Inspirational Others

4.0  

Vaman Acharya

Children Stories Inspirational Others

ಪುಟ್ಟ ಹುಡುಗನ ಸಮಯಪ್ರಜ್ಞೆ

ಪುಟ್ಟ ಹುಡುಗನ ಸಮಯಪ್ರಜ್ಞೆ

3 mins
222



ಮಧ್ಯಾಹ್ನ ಹನ್ನೆರಡು ಗಂಟೆ ಸಮಯ ಬಿಸಿಲು ವಿಪರೀತ.  ಪವನಪುರ ನಗರದ ಗಾಂಧಿ ವೃತ್ತದ ಬಳಿ ಕಟ್ಟುತ್ತಿರುವ ಬಹು ಮಹಡಿ ಕಟ್ಟಡದ ಮುಂದೆ  ಜನ ಜಂಗುಳಿ ಆಗುವ ಮೊದಲು ಹನ್ನೆರಡು  ವರ್ಷದ ಪ್ರಜ್ವಲ್ ಎನ್ನುವ ಬಾಲಕ ಮೇಲಂತಸ್ತಿ ನಲ್ಲಿ ಒಬ್ಬ ಕಾರ್ಮಿಕ ಅಪಾಯದ ಸ್ಥಳದಲ್ಲಿ ನಿಂತು ಕೆಲಸ ಮಾಡುವದನ್ನು ಗಮನಿಸಿದ. ಅಲ್ಲಿಯೇ ನಿಲ್ಲಿಸಿದ ಖಾಲಿ ಸಿಮಂಟ್ ಚೀಲಗಳಿಂದ ತುಂಬಿದ ಲಾರಿ ನೋಡಿ ಅದರ ಚಾಲಕ ನಿಗೆ ಮೇಲೆ ತೋರಿಸಿ ಸರಿಯಾಗಿ ಕಾರ್ಮಿಕ ಬೀಳುವ ಸ್ಥಳದಲ್ಲಿ ನಿಲ್ಲಿಸುವಂತೆ  ಕೈ ಜೋಡಿಸಿ ಕೇಳಿದ. ಲಾರಿ ಚಾಲಕನು ಆ ಗಂಭೀರ ಪರಿಸ್ಥಿತಿ ಅರ್ಥ ಮಾಡಿಕೊಂಡು ತಡಮಾಡದೆ ಅವನು ಲಾರಿ ಅಲ್ಲಿ ನಿಲ್ಲಿಸುವದಕ್ಕೂ ಕಾರ್ಮಿಕ ಕೆಳಗೆ ಬೀಳುವುದಕ್ಕೂ ಸರಿ ಆಯಿತು. ಒಂದು ನಿಮಿಷ ತಡವಾದರೆ ಅನಾಹುತ ವಾಗುವದು ನಿಶ್ಚಿತ ವಾಗಿತ್ತು. ಕಾರ್ಮಿಕನು ನಾಲ್ಕನೇ ಅಂತಸ್ತಿನಿಂದ ಕೆಳಗೆ ಮೆತ್ತನೆ ಇರುವ ಖಾಲಿ ಸಿಮೆಂಟ್ ಚೀಲದ ಮೇಲೆ ಬೀಳುವದರಿಂದ ಪ್ರಾಣಾಪಾಯ ಆಗದೇ ರಭಸ ಹಾಗೂ ಒತ್ತಡದಿಂದ ಗಾಯಗಳಾಗಿ ಗಾಬರಿ ಯಿಂದ ಅವನಿಗೆ ಎಚ್ಚರ ತಪ್ಪಿತು. ಅವನ ಪತ್ನಿ ಸುಬ್ಬಮ್ಮಳ ಆಕ್ರಂದನ ಮಗಿಲು ಮುಟ್ಟಿತು.  ಪ್ರಜ್ವಲ್ ಆಕೆಗೆ ಸಮಾಧಾನ ಮಾಡುತ್ತಿದ್ದ. 

 ನತದೃಷ್ಟ ಕಾರ್ಮಿಕ ರಾಮಣ್ಣ ಬೇರೆ ಯಾರು ಆಗಿರದೇ ಪುಟ್ಟ ಬಾಲಕ ಪ್ರಜ್ವಲ್ ನ ತಂದೆ. ಅಷ್ಟರಲ್ಲಿ ಆ ಕಟ್ಟಡದ ಗುತ್ತೇದಾರ ಮುರುಗನ್ ಸ್ಥಳಕ್ಕೆ ಆಗಮಿಸಿದರು. ಅವರನ್ನು ನೋಡಿದ ಪ್ರಜ್ವಲ್,

"ಸರ್, ನನ್ನ ತಂದೆಗೆ ಬೇಗನೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ. ತಡವಾದರೆ ಅವರಿಗೆ ಏನು ಬೇಕಾದರೂ ಆಗಬಹುದು." ಎಂದ

ಅವನ ಧೈರ್ಯ ಕಂಡು ಮುರುಗನ್,  

"ಪುಟ್ಟ ಚಿಂತೆ ಮಾಡಬೇಡ," ಎಂದರು.

ರಾಮಣ್ಣನಿಗೆ ಪಕ್ಕದಲ್ಲಿ ಇರುವ ಸ್ಪರ್ಶ ಸ್ಪೇಶಾಲಿಟಿ ಆಸ್ಪತ್ರೆಗೆ ಸೇರಿಸುವ ಹಾಗೂ ಬೇಗ ಚಿಕಿತ್ಸೆ ಆಗುವ ವ್ಯವಸ್ಥೆ ಮಾಡಿದರು. ಸುಬ್ಬಮ್ಮ ಹಾಗೂ ಪ್ರಜ್ವಲ್ ಓಡುತ್ತ ಆಸ್ಪತ್ರೆಗೆ ಹೋದರು. ಆಸ್ಪತ್ರೆಯವರು ಪೋಲಿಸ್ ಕೇಸ್ ಮಾಡುವವರೆಗೆ ಚಿಕಿತ್ಸೆ ಆಗುವದಿಲ್ಲ ಎಂದರು. ಅದು ಆಗುವದಕ್ಕೆ  ಅರ್ಧ ಗಂಟೆ ಆಯಿತು. ಪೋಲಿಸ್ ಅಧಿಕಾರಿ ಆಸ್ಪತ್ರೆ ಗೆ ಬಂದು ಮುರುಗನ್ ಗೆ,

"ಅಪಾಯದಲ್ಲಿ ಕೆಲಸ ಮಾಡುವರಿಗೆ ಸುರಕ್ಷತಾ ವ್ಯವಸ್ಥೆ ಏಕೆ ಇಲ್ಲ? ಬೇಗನೆ ಮಾಡದಿದ್ದರೆ ಕಾನೂನು ಪ್ರಕಾರ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳಲಾಗುವದು,"  ಎಂದು ವಾರ್ನ ಮಾಡಿದರು. 

ಚಿಕಿತ್ಸೆ  ನಂತರ ರಾಮಣ್ಣನಿಗೆ ಎಚ್ಚರ ಬಂದು ಗುಣಮುಖನಾಗಿ ಮೊದಲು ಮಗ ಪ್ರಜ್ವಲ್ ಗೆ ನೋಡಿದ. ತಾನು ಮೇಲೆ ಕೆಲಸಕ್ಕೆ ಹೋಗುವ ಸಿದ್ಧತೆಯಲ್ಲಿ ಇರು ವಾಗ ಅಪ್ಪ ಮಗನ ನಡುವೆ  ಆಗಿರುವ ಸಂಭಾಷಣೆ ನೆನಪಾಯಿತು. 

"ಏ ಅಪ್ಪ, ಅಪಾಯದ ಕೆಲಸ ಮಾಡಬೇಡ. ಈಗಲೂ ಸಮಯ ಮೀರಿಲ್ಲ. ಆಗುವದಿಲ್ಲ ಎಂದು ಹೇಳು. ನಿನಗೆ ಏನಾದರೂ ಆದರೆ ಅಮ್ಮ ಹಾಗೂ ನನಗೆ ಎಷ್ಟು ದು:ಖ ವಾಗುವದು?"

"ಪುಟ್ಟ, ಗಾಬರಿ ಆಗಬೇಡ. ನನಗೆ ಏನೂ ಆಗುವದಿಲ್ಲ. ಇಂತಹ ಕೆಲಸಗಳಲ್ಲಿ ನನಗೆ ಅನುಭವ ಇದೆ. ಹೊರಡುವ ಮುನ್ನ ಆ ಕರುಣಾಳು ಭಗವಂತ ನಿಗೆ ಪ್ರಾರ್ಥನೆ ಮಾಡುವದರಿಂದ ಏನೂ ಅನಾಹುತ ಆಗುವದಿಲ್ಲ. ನೀನು ಬೇಗ ಶಾಲೆಗೆ ಹೋಗು."

ಆ ಸಮಯದಲ್ಲಿ ತಾಯಿ ಸುಬ್ಬಮ್ಮ ಬಂದು ಮಗನಿಗೆ ಸಮಾಧಾನ ಮಾಡಿ ರಾಮಣ್ಣನಿಗೆ ಮೇಲೆ ಹೋಗಲು ಹೇಳಿದಳು. ಪ್ರಜ್ವಲ್ ಶಾಲೆಗೆ ಹೋಗದೇ ಅಲ್ಲಿಯೇ ನಿಂತ. ಮಗನು ಶಾಲೆಗೆ ಹೋಗುವನು ಎನ್ನುವ ಭರವಸೆಯಿಂದ ಆಕೆ ಅದೇ ಕಟ್ಟಡದಲ್ಲಿ ಬೇರೆ ಕಡೆ ಕೆಲಸಕ್ಕೆ ಹೋದಳು. 

ಮುಂದೆ ರಾಮಣ್ಣ ತನ್ನ ಕೆಲಸದ ಸ್ಥಳ ಮುಟ್ಟಿ ಐದು ನಿಮಿಷಗಳ ನಂತರ ಎಚ್ಚರಿಕೆ ಗಂಟೆ ಬಾರಿಸಿತು. ಆ ಸಮಯದಲ್ಲಿ ರಾಮಣ್ಣ ಅಪಾಯದಲ್ಲಿ ಇರುವದಾಗಿ ಸೂಚನೆ ಎಲ್ಲರಿಗೂ ತಲುಪಿತು. 

ಪುಟ್ಟ ಹುಡುಗನ ದಿಟ್ಟ ಹೆಜ್ಜೆ ಹಾಗೂ ಸಮಯಪ್ರಜ್ಞೆಯಿಂದ ಒಂದು ಜೀವ ಉಳಿಯಿತು. ಅದೇ ಸಮಯದಲ್ಲಿ ಗುತ್ತೇದಾರ ಮುರುಗನ್ ಪುಟ್ಟ ಬಾಲಕನಿಗೆ ರೂಪಾಯಿ ಹತ್ತು ಸಾವಿರ ನಗದು ಬಹುಮಾನ ಕೊಡುವದಲ್ಲದೆ ತನ್ನದೇ ಆದ ಹೈಸ್ಕೂಲ್ ನಲ್ಲಿ ಅವನ ಮುಂದಿನ ವಿದ್ಯಾಭ್ಯಾಸ ಪುಕ್ಕಟೆ ಮಾಡುವದಾಗಿ ಎಲ್ಲರ ಸಮ್ಮುಖದಲ್ಲಿ ವಾಗ್ದಾನ ಮಾಡಿದರು. 

ಮುಂದೆ ಪೋಲಿಸ್ ಕೇಸ್ ಬುಕ್ ಮಾಡಿದವರು ಕೇಸ್ ವಾಪಸ್ ಪಡೆದರು. 

ಪ್ರಜ್ವಲ್ ಮಾಡಿದ ಸಮಯಪ್ರಜ್ಞೆ ಕೆಲಸ ಅವನ ಶಾಲೆಯಲ್ಲಿ ಆರನೇ ತರಗತಿಯ ಮೇಷ್ಟ್ರು ಎಲ್ಲ ವಿದ್ಯಾರ್ಥಿಗಳಿಗೆ ತಿಳಿಸಿದಾಗ ಎಲ್ಲರೂ ಎದ್ದು ನಿಂತು  ಪ್ರಜ್ವಲ್ ನೀನು ನಮಗೆ ಆದರ್ಶ ಕಣೋ ಎಂದು ಒಕ್ಕೊರಲಿನಿಂದ ಕೂಗಿದರು. ಜೀವ ಉಳಿಸುವ ನಿನ್ನ ಸಮಯಪ್ರಜ್ಞೆ ಇತರರಿಗೆ ಮಾದರಿ ಆಗಲಿ ಎಂದರು ಮೇಷ್ಟ್ರು. 


 


Rate this content
Log in